ವಿಶ್ವವಿಖ್ಯಾತ ಮೈಸೂರು ದಸರಾ ಆರಂಭವಾಗಿದ್ದು ಹಂಪಿ ವಿಜಯನಗರದ ಅರಸರಿಂದ..
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅದರದೇ ಆದ ವೈಶಿಷ್ಟ್ಯ, ಇತಿಹಾಸ, ವೈಭವವಿದೆ. ಇಡೀ ವಿಶ್ವದಲ್ಲೇ ಹೆಸರು ಮಾಡಿರೋ ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿರೋ ದಸರಾ ಶುರುವಾಗಿದ್ದು ಹೇಗೆ ಗೊತ್ತಾ? ಇದರ ಹಿಂದಿರುವ ಇತಿಹಾಸ ಗೊತ್ತಾ.. ಇಲ್ಲಿದೆ ಅದರ ತುಣುಕು. ನವರಾತ್ರಿಯನ್ನ ಧಾರ್ಮಿಕ ಹಾಗು ಸಾಂಸ್ಕೃತಿಕವಾಗಿ ಆಚರಿಸಿದ್ದು ಮತ್ತು ಧಾರ್ಮಿಕ ಆಚರಣೆಯ ನವರಾತ್ರಿಗೆ ಹೊಸ ಆಯಾಮ ನೀಡಿದವರು ವಿಜಯನಗರದ ಅರಸರು. ಈ ಸಾಮ್ರಾಜ್ಯದ ಕೃಷ್ಣ ದೇವರಾಯನ ಕಾಲದಲ್ಲಿ ದಸರಾ ಆಚರಣೆ ಉತ್ತುಂಗದಲ್ಲಿತ್ತು. ವಿಜಯನಗರ ದಸರಾ ನೋಡಲು ವಿದೇಶಿ ಪ್ರವಾಸಿಗರು […]
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅದರದೇ ಆದ ವೈಶಿಷ್ಟ್ಯ, ಇತಿಹಾಸ, ವೈಭವವಿದೆ. ಇಡೀ ವಿಶ್ವದಲ್ಲೇ ಹೆಸರು ಮಾಡಿರೋ ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿರೋ ದಸರಾ ಶುರುವಾಗಿದ್ದು ಹೇಗೆ ಗೊತ್ತಾ? ಇದರ ಹಿಂದಿರುವ ಇತಿಹಾಸ ಗೊತ್ತಾ.. ಇಲ್ಲಿದೆ ಅದರ ತುಣುಕು.
ನವರಾತ್ರಿಯನ್ನ ಧಾರ್ಮಿಕ ಹಾಗು ಸಾಂಸ್ಕೃತಿಕವಾಗಿ ಆಚರಿಸಿದ್ದು ಮತ್ತು ಧಾರ್ಮಿಕ ಆಚರಣೆಯ ನವರಾತ್ರಿಗೆ ಹೊಸ ಆಯಾಮ ನೀಡಿದವರು ವಿಜಯನಗರದ ಅರಸರು. ಈ ಸಾಮ್ರಾಜ್ಯದ ಕೃಷ್ಣ ದೇವರಾಯನ ಕಾಲದಲ್ಲಿ ದಸರಾ ಆಚರಣೆ ಉತ್ತುಂಗದಲ್ಲಿತ್ತು. ವಿಜಯನಗರ ದಸರಾ ನೋಡಲು ವಿದೇಶಿ ಪ್ರವಾಸಿಗರು ಕೂಡ ಆಗಮಿಸುತ್ತಿದ್ರು. ವಿಜಯನಗರ ಸಾಮ್ರಾಜ್ಯ ಪಥನದ ಬಳಿಕ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಣೆ ಶುರುವಾಯ್ತು. ಮೈಸೂರು ಒಡೆಯ ರಾಜಾ ಒಡೆಯರ್ ಶ್ರೀರಂಗಪಟ್ಟಣದಲ್ಲಿ ಮೊದಲ ಬಾರಿಗೆ ದಸರಾ ಆಚರಿಸಿದವರು.
ಮಹಿಷಾಸುರನನ್ನು ಮರ್ದಿಸಿದ ನೆನಪಿಗಾಗಿ ಆಚರಿಸಲ್ಪಡುವುದೇ ದಸರಾ ಹಬ್ಬ: ಮೈಸೂರು ದಸರಕ್ಕೆ 450 ವರ್ಷದ ಭವ್ಯ ಇತಿಹಾಸವಿದೆ. 15ನೇ ಶತಮಾನದಲ್ಲಿ ವಿಜಯನಗರದ ಅರಸರು ಮೊಟ್ಟ ಮೊದಲ ಬಾರಿಗೆ ದಸರೆಯನ್ನು ಆಚರಿಸಿದ್ದರು. ಇವರ ನಂತರ ದಸರಾ ಆಚರಣೆಯ ಪರಂಪರೆಯನ್ನ ಮೈಸೂರ ಅರಸರು ಮುಂದುವರೆಸಿದ್ರು. 1610 ರಲ್ಲಿ ಮೊದಲ ಬಾರಿಗೆ ಮೈಸೂರು ದಸರೆಯನ್ನ ಅಂದಿನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ ಗೌರಿ ಕಡುವೆ ಎಂಬ ಸ್ಥಳದಲ್ಲಿ ಆಚರಿಸಲಾಗಿತ್ತು. ಬಳಿಕ 1972 ರಲ್ಲಿ ದಸರಾ ಹಬ್ಬವನ್ನ ನಾಡಹಬ್ಬವನ್ನಾಗಿ ಘೋಷಿಸಲಾಯಿತು.
ಮೊಟ್ಟ ಮೊದಲ ಬಾರಿಗೆ ದಸರಾ ಆಚರಿಸಿದ ಮೈಸೂರು ಅರಸ ರಾಜ ಒಡೆಯರ್ 1578 ರಿಂದ 1617 ರವರೆಗೆ ಮೈಸೂರ ಅರಸರಾಗಿದ್ದರು. 1805 ರಲ್ಲಿ ಮೂರನೇ ಕೃಷ್ಣ ರಾಜ ಒಡೆಯರ್ ವಿಶೇಷ ದರ್ಬಾರಿಗೆ ಚಾಲನೆ ನೀಡಿದ್ರು. 1880ರಲ್ಲಿ ಮೊದಲ ದಸರಾ ವಸ್ತು ಪ್ರದರ್ಶನ ನಡೆಸಲಾಯಿತು. ಹತ್ತನೇ ಚಾಮರಾಜ ಒಡೆಯರ್ ಮೊದಲ ದಸರಾ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ್ರು.
Published On - 8:45 am, Sat, 17 October 20