ಖಾಕಿ ಕಂಟಕ: ರೈಲ್ವೆ ಪೊಲೀಸ್ ಠಾಣೆ ಸೀಲ್‌ಡೌನ್

ವಿಜಯಪುರ: ರೈಲ್ವೆ ಪೊಲೀಸ್​​ಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ವಿಜಯಪುರ ರೈಲ್ವೆ ಪೊಲೀಸ್ ಠಾಣೆ ಸೀಲ್‌ಡೌನ್ ಮಾಡಲಾಗಿದೆ. ರೈಲ್ವೆ ಮಹಿಳಾ ಪೊಲೀಸ್ ಪೇದೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.  ಹೀಗಾಗಿ ಈಗ ಪಿಎಸ್ಐ ಸೇರಿದಂತೆ 20 ಪೊಲೀಸ್ ಸಿಬ್ಬಂದಿಗಳಿಗೆ ಕ್ವಾರಂಟೈನ್ ಮಾಡಲಾಗಿದೆ. ಓರ್ವ ರೈಲ್ವೆ ಪಿಎಸ್ಐ, 5 ಜನ ಹೆಡ್ ಕಾನ್ಸ್ ಸ್ಟೇಬಲ್, 14 ಕಾನ್ಸ್ ಸ್ಟೇಬಲ್​ಗಳಿಗೆ ಕೊರೊನಾ ಭಯ ಶುರುವಾಗಿದೆ. ಕಳೆದ ಜೂನ್ 24 ರಂದು ಗಂಟಲು ದ್ರವ ನೀಡಿದ್ದ 21 ಜನ ರೈಲ್ವೆ ಪೊಲೀಸರ ಪೈಕಿ […]

ಖಾಕಿ ಕಂಟಕ: ರೈಲ್ವೆ ಪೊಲೀಸ್ ಠಾಣೆ  ಸೀಲ್‌ಡೌನ್
Follow us
ಆಯೇಷಾ ಬಾನು
|

Updated on: Jul 03, 2020 | 8:36 AM

ವಿಜಯಪುರ: ರೈಲ್ವೆ ಪೊಲೀಸ್​​ಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ವಿಜಯಪುರ ರೈಲ್ವೆ ಪೊಲೀಸ್ ಠಾಣೆ ಸೀಲ್‌ಡೌನ್ ಮಾಡಲಾಗಿದೆ. ರೈಲ್ವೆ ಮಹಿಳಾ ಪೊಲೀಸ್ ಪೇದೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.  ಹೀಗಾಗಿ ಈಗ ಪಿಎಸ್ಐ ಸೇರಿದಂತೆ 20 ಪೊಲೀಸ್ ಸಿಬ್ಬಂದಿಗಳಿಗೆ ಕ್ವಾರಂಟೈನ್ ಮಾಡಲಾಗಿದೆ.

ಓರ್ವ ರೈಲ್ವೆ ಪಿಎಸ್ಐ, 5 ಜನ ಹೆಡ್ ಕಾನ್ಸ್ ಸ್ಟೇಬಲ್, 14 ಕಾನ್ಸ್ ಸ್ಟೇಬಲ್​ಗಳಿಗೆ ಕೊರೊನಾ ಭಯ ಶುರುವಾಗಿದೆ. ಕಳೆದ ಜೂನ್ 24 ರಂದು ಗಂಟಲು ದ್ರವ ನೀಡಿದ್ದ 21 ಜನ ರೈಲ್ವೆ ಪೊಲೀಸರ ಪೈಕಿ ಮಹಿಳಾ ಪೇದೆಗೆ ಕೊರೊನಾ ಪಾಸಿಟಿವ್ ಬಂದಿದೆ. ಬಾಗಲಕೋಟೆಯ ಮೂವರು ರೈಲ್ವೆ ಪೊಲೀಸರಿಗೆ ವಿಜಯಪುರ ರೈಲ್ವೆ ಠಾಣೆಯ ಜವಾಬ್ದಾರಿ ನೀಡಲಾಗಿದ್ದು, ಬಾಗಲಕೋಟೆಯ ಮೂವರು ರೈಲ್ವೆ ಪೊಲೀಸರು ಠಾಣೆಯ ಹೊರಗೆ ಟೇಬಲ್ ಹಾಕಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.