AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಭೀತಿ ನಡುವೆ ಗ್ರಾಮಸ್ಥರಿಂದ ಮಹತ್ಕಾರ್ಯ, ಸ್ವಂತ ಹಣದಲ್ಲೇ ರಸ್ತೆ ನಿರ್ಮಾಣ

ಬೆಳಗಾವಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಡೆಡ್ಲಿ ಕೊರೊನಾ ಅಟ್ಟಹಾಸ ಮೆರೀತಿದೆ. ಅದ್ರಲ್ಲೂ ಹಿರೇಬಾಗೇವಾಡಿ ಗ್ರಾಮವೊಂದರಲ್ಲೇ 36ಸೋಂಕಿತ ಕೇಸ್​​ಗಳು ಹೆಜ್ಜೆಯೂರಿರೋದು ಗ್ರಾಮೀಣ ಭಾಗದ ಜನರು ದಿಕ್ಕೆಟ್ಟು ಕೂತಿದ್ದಾರೆ. ಮನೆಯಿಂದ ಹೊರಗೆ ಹೆಜ್ಜೆ ಇಡೋಕು ಭೀತಿ ಪಡೋ ಹೊತ್ತಲ್ಲೇ ಹಿರೇಬಾಗೇವಾಡಿ ಪಕ್ಕದಲ್ಲೇ ಇರೋ ಮಾರಿಹಾಳ ಗ್ರಾಮಸ್ಥರು ಮಹಾನ್ ಕಾರ್ಯ ಮಾಡಿದ್ದಾರೆ. ಜಾತ್ರೆ ಆಚರಣೆ ಕುರಿತು ಸಭೆ ಸೇರಿದ್ದ ಎಲ್ಲಾ ಗ್ರಾಮಸ್ಥರು ಸೀಲ್​​ಡೌನ್ ಆಗಿರೋದ್ರಿಂದ, ಗ್ರಾಮದ ಪಕ್ಕದಲ್ಲಿ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಿದ್ದಾರೆ. ಕೊರೊನಾ ಕೂಪಕ್ಕೆ ಬಿದ್ದಿರೋ ಹಿರೇಬಾಗೇವಾಡಿ ಗ್ರಾಮಕ್ಕೆ ಸಂಪರ್ಕಿಸೋ ರಸ್ತೆಯನ್ನ […]

ಕೊರೊನಾ ಭೀತಿ ನಡುವೆ ಗ್ರಾಮಸ್ಥರಿಂದ ಮಹತ್ಕಾರ್ಯ, ಸ್ವಂತ ಹಣದಲ್ಲೇ ರಸ್ತೆ ನಿರ್ಮಾಣ
ಸಾಧು ಶ್ರೀನಾಥ್​
|

Updated on:May 07, 2020 | 7:47 AM

Share

ಬೆಳಗಾವಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಡೆಡ್ಲಿ ಕೊರೊನಾ ಅಟ್ಟಹಾಸ ಮೆರೀತಿದೆ. ಅದ್ರಲ್ಲೂ ಹಿರೇಬಾಗೇವಾಡಿ ಗ್ರಾಮವೊಂದರಲ್ಲೇ 36ಸೋಂಕಿತ ಕೇಸ್​​ಗಳು ಹೆಜ್ಜೆಯೂರಿರೋದು ಗ್ರಾಮೀಣ ಭಾಗದ ಜನರು ದಿಕ್ಕೆಟ್ಟು ಕೂತಿದ್ದಾರೆ. ಮನೆಯಿಂದ ಹೊರಗೆ ಹೆಜ್ಜೆ ಇಡೋಕು ಭೀತಿ ಪಡೋ ಹೊತ್ತಲ್ಲೇ ಹಿರೇಬಾಗೇವಾಡಿ ಪಕ್ಕದಲ್ಲೇ ಇರೋ ಮಾರಿಹಾಳ ಗ್ರಾಮಸ್ಥರು ಮಹಾನ್ ಕಾರ್ಯ ಮಾಡಿದ್ದಾರೆ.

ಜಾತ್ರೆ ಆಚರಣೆ ಕುರಿತು ಸಭೆ ಸೇರಿದ್ದ ಎಲ್ಲಾ ಗ್ರಾಮಸ್ಥರು ಸೀಲ್​​ಡೌನ್ ಆಗಿರೋದ್ರಿಂದ, ಗ್ರಾಮದ ಪಕ್ಕದಲ್ಲಿ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಿದ್ದಾರೆ. ಕೊರೊನಾ ಕೂಪಕ್ಕೆ ಬಿದ್ದಿರೋ ಹಿರೇಬಾಗೇವಾಡಿ ಗ್ರಾಮಕ್ಕೆ ಸಂಪರ್ಕಿಸೋ ರಸ್ತೆಯನ್ನ ಗ್ರಾಮಸ್ಥರೇ ನಿರ್ಮಿಸಿದ್ದಾರೆ. ಕಳೆದ 3 ವರ್ಷದಿಂದ ರಸ್ತೆ ನಿರ್ಮಿಸೋಕೆ ಸರ್ಕಾರಕ್ಕೆ ಮನವಿ ಮಾಡಿದ್ರೂ ಕ್ಯಾರೇ ಅಂತಿರ್ಲಿಲ್ವಂತೆ. ಇದೀಗ ಜನರೆಲ್ಲಾ ಸೇರಿ ಕಳೆದೊಂದು ವಾರದಿಂದ ಎರಡು ಕಿಲೋ ಮೀಟರ್ ರಸ್ತೆ ನಿರ್ಮಿಸಿದ್ದಾರೆ.

ಇನ್ನು, ಮಾರಿಹಾಳ ಗ್ರಾಮದಿಂದ 1 ಕಿ.ಮೀ ದೂರದಲ್ಲಿರೋ ಈ ರಸ್ತೆ ಕಳೆದ ವರ್ಷ ಸುರಿದ ಮಳೆಗೆ ಕೊಚ್ಚಿ ಹೋಗಿತ್ತು. ಹೀಗಾಗಿ ಅಕ್ಕಪಕ್ಕದ ಜಮೀನಿನ ರೈತರು ಓಡಾಡೋಕೆ, ಬೆಳೆದ ಬೆಳೆ ಸಾಗಿಸೋಕೆ ಪರದಾಡ್ತಿದ್ರು. ಅಲ್ಲದೇ, ಹಿರೇವಾಗೇವಾಡಿಗೆ ತೆರಳೋಕೆ ಶಾರ್ಟ್​​ಕಟ್ ರಸ್ತೆ ಕೂಡ ಇದಾಗಿದ್ದು, ಈ ರಸ್ತೆ ನಿರ್ಮಾಣಕ್ಕೆ ಜಮೀನು ಮಾಲೀಕರಿಂದ ಗ್ರಾಮದ ಕೆಲ ಮುಖಂಡರು ಚಂದಾ ಎತ್ತಿ ದುಡ್ಡು ಸಂಗ್ರಹಿಸಿದ್ದಾರೆ.

ಒಟ್ಟು 4 ಲಕ್ಷ ರೂಪಾಯಿ ಸಂಗ್ರಹವಾಗಿದ್ದು ಟ್ರ್ಯಾಕ್ಟರ್ ಬಾಡಿಗೆ, ಡೀಸೆಲ್​​ಗೆ ಬಳಸಿಕೊಂಡಿದ್ದಾರೆ. ಇನ್ನುಳಿದಂತೆ ಒಂದೊಂದು ಶಿಫ್ಟ್​​ನಲ್ಲಿ 5 ಮಂದಿ ಗ್ರಾಮಸ್ಥರು ಕೆಲ್ಸ ಮಾಡಿದ್ದಾರೆ. ಇನ್ನೂರಕ್ಕೂ ಹೆಚ್ಚು ಟ್ರ್ಯಾಕ್ಟರ್ ಮಣ್ಣು ಬಳಸಿದ್ದು ನೀರು ರಭಸವಾಗಿ ಹರಿಯೋ ಸ್ಥಳದಲ್ಲಿ ಕಲ್ಲುಗಳನ್ನ ಹಾಕಿ ಅಚ್ಚುಕಟ್ಟಾಗಿ ಮಣ್ಣಿನ ರೋಡ್ ಮಾಡಿದ್ದಾರೆ. ನಾವು ರಸ್ತೆ ನಿರ್ಮಿಸಿದ್ದೇವೆ, ಸರ್ಕಾರ ಡಾಂಬರೀಕರಣ ಮಾಡಿಸ್ಕೊಟ್ರೆ ಸಾಕು ಅಂತ ಗ್ರಾಮಸ್ಥರು ಹೇಳ್ತಿದ್ದಾರೆ.

ಒಟ್ನಲ್ಲಿ, ಕೊರೊನಾ ಆತಂಕದ ನಡುವೆ, ಲಾಕ್​​ಡೌನ್​ ಸಂಕಷ್ಟದ ನಡುವೆ ಗ್ರಾಮಸ್ಥರು ರಸ್ತೆ ನಿರ್ಮಿಸಿ ಎಲ್ರಿಗೂ ಮಾದರಿಯಾಗಿದ್ದಾರೆ. ಇದ್ರಿಂದ ಅಕ್ಕಪಕ್ಕದ ಜಮೀನಿನ ರೈತರು ಖುಷ್ ಆಗಿದ್ದಾರೆ. ಇತ್ತ, 20 ಕಿಮೀ ಸುತ್ತಿ ಹಿರೇಬಾಗೇವಾಡಿ ಗ್ರಾಮಕ್ಕೆ ಹೋಗಬೇಕಿದ್ದವರು ಕೇವಲ 6 ಕಿ.ಮೀ ನಲ್ಲಿ ಹೋಗಬಹುದಾಗಿದೆ. ಇದೀಗ ಲಾಕ್​​ಡೌನ್​ನಿಂದ ಸುಮ್ನೆ ಕೂರೋ ಬದಲು ಈ ಮಹತ್ಕಾರ್ಯವನ್ನ ಮಾಡೋ ಮೂಲಕ ಮಾರಿಹಾಳ ಗ್ರಾಮಸ್ಥರು ಎಲ್ರಿಗೂ ಮಾದರಿಯಾಗಿದ್ದಾರೆ.

Published On - 7:45 am, Thu, 7 May 20