Sign In

By signing in or creating an account, you agree with Associated Broadcasting Company's Terms & Conditions and Privacy Policy.

LG ಪಾಲಿಮರ್ಸ್ ಗ್ಯಾಸ್‌ ಸೋರಿಕೆ, 10 ಸಾವು, 5 ಗ್ರಾಮಗಳ ಜನ ಸ್ಥಳಾಂತರ, ಭಯಾನಕ ಚಿತ್ರಗಳಿವೆ

ಹೈದರಾಬಾದ್: ಎಲ್‌ಜಿ ಪಾಲಿಮರ್ಸ್ ಕಂಪನಿಯಲ್ಲಿ ಗ್ಯಾಸ್‌ ಸೋರಿಕೆಯಾಗಿ 10 ಜನ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ. ಬೆಳಗಿನ‌ ಜಾವ 3.30ರ ಸುಮಾರಿಗೆ‌ ಘಟನೆ ನಡೆದಿದ್ದು, ಗ್ಯಾಸ್‌ ಸೋರಿಕೆಯಿಂದ ಅಸ್ವಸ್ಥಗೊಂಡ ಓರ್ವ ಬಾಲಕಿ, ಓರ್ವ ಮಹಿಳೆ, ಇಬ್ಬರು ಪುರುಷರು ಸೇರಿ 10 ಮಂದಿ ಮೃತಪಟ್ಟಿದ್ದಾರೆ. ಇವರ ಪೈಕಿ ಒಬ್ಬ ವ್ಯಕ್ತಿ ದುರಂತದಿಂದ ಪಾರಾಗುವ ವೇಳೆ ಅಕಸ್ಮಾತ್ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ. 5 ಸಾವಿರಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಹಾಗೂ 20 ಜನರ ಸ್ಥಿತಿ ಗಂಭೀರವಾಗಿದೆ. ನಿಂತ ನಿಲುವಿನಲ್ಲೇ […]

LG ಪಾಲಿಮರ್ಸ್ ಗ್ಯಾಸ್‌ ಸೋರಿಕೆ, 10 ಸಾವು, 5 ಗ್ರಾಮಗಳ ಜನ ಸ್ಥಳಾಂತರ, ಭಯಾನಕ ಚಿತ್ರಗಳಿವೆ
Follow us
ಸಾಧು ಶ್ರೀನಾಥ್​
|

Updated on:May 07, 2020 | 12:06 PM

ಹೈದರಾಬಾದ್: ಎಲ್‌ಜಿ ಪಾಲಿಮರ್ಸ್ ಕಂಪನಿಯಲ್ಲಿ ಗ್ಯಾಸ್‌ ಸೋರಿಕೆಯಾಗಿ 10 ಜನ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ. ಬೆಳಗಿನ‌ ಜಾವ 3.30ರ ಸುಮಾರಿಗೆ‌ ಘಟನೆ ನಡೆದಿದ್ದು, ಗ್ಯಾಸ್‌ ಸೋರಿಕೆಯಿಂದ ಅಸ್ವಸ್ಥಗೊಂಡ ಓರ್ವ ಬಾಲಕಿ, ಓರ್ವ ಮಹಿಳೆ, ಇಬ್ಬರು ಪುರುಷರು ಸೇರಿ 10 ಮಂದಿ ಮೃತಪಟ್ಟಿದ್ದಾರೆ. ಇವರ ಪೈಕಿ ಒಬ್ಬ ವ್ಯಕ್ತಿ ದುರಂತದಿಂದ ಪಾರಾಗುವ ವೇಳೆ ಅಕಸ್ಮಾತ್ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ. 5 ಸಾವಿರಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಹಾಗೂ 20 ಜನರ ಸ್ಥಿತಿ ಗಂಭೀರವಾಗಿದೆ.

ನಿಂತ ನಿಲುವಿನಲ್ಲೇ ಕುಸಿದುಬಿದ್ದ ಮಹಿಳೆಯರು: 3 ಕಿಲೋಮೀಟರ್‌ವರೆಗೆ Styrene Gas ವಿಷ ಅನಿಲ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಕಂಪನಿ ಸುತ್ತಲಿನ 9 ಗ್ರಾಮಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.  ಅಗ್ನಿಶಾಮಕ ದಳ, ನೌಕಾ ಸೇನೆಯಿಂದ ಕಾರ್ಯಾಚರಣೆ ನಡೆಯುತ್ತಿದೆ. ಕಾರ್ಖಾನೆ ಮಾಲೀಕರ ನಿರ್ಲಕ್ಷ್ಯದ ವಿರುದ್ಧ ಪ್ರಕರಣ ದಾಖಲಾಗಿದೆ. Styrene Gas ಸೋರಿಕೆಯಿಂದ ಪ್ರಾಣಿ ಸಂಕುಲವೂ ವಿಲವಿಲ ಒದ್ದಾಡುತ್ತಿದೆ.

ಘಟನೆ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ‌ ಜಗನ್ ಮೋಹನ್ ರೆಡ್ಡಿ ಸ್ಪಂದಿಸಿದ್ದು, ಕೂಡಲೇ ತೊಂದರೆಗೀಡಾದವರಿಗೆ‌ ಸಹಾಯ, ಹಾಗೂ ಘಟನಾ ಸ್ಥಳದ ಸುತ್ತಲಿನ‌ ಪ್ರದೇಶದಲ್ಲಿ‌ ಅವಶ್ಯಕ ಕ್ರಮಕ್ಕೆ ಆದೇಶಿಸಿದ್ದಾರೆ.

Published On - 9:14 am, Thu, 7 May 20