AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರೈಲಿನಲ್ಲಿ ಚಿಪ್ಸ್​ ಚೆಲ್ಲಿದ ಮಗ, ಆತನ ಕೈಯಿಂದಲೇ ಸ್ವಚ್ಛಗೊಳಿಸಿದ ತಂದೆ

ಮಗಾ ನೀನು ಹೀಗೆ ರೈಲಿನಲ್ಲಿ ಚೆಲ್ಲಿದ್ರೆ ಯಾರು ಕ್ಲೀನ್ ಮಾಡ್ಬೇಕು, ನಾವು ಗಲೀಜು ಮಾಡಿದ್ದನ್ನು ನಾವೇ ಸ್ವಚ್ಛಗೊಳಿಸಬೇಕಲ್ವಾ ಎಂದು ಟ್ರಾವೆಲ್ ಬ್ಲಾಗರ್ ಸಮಲ್ ಎಂಬುವವರು ಮಗನಿಗೆ ಬುದ್ಧಿವಾದ ಹೇಳಿ, ಆತ ರೈಲಿನಲ್ಲಿ ಚೆಲ್ಲಿದ್ದ ಚಿಪ್ಸ್​​ ಅನ್ನು ಅವನೇ ಆರಿಸುವಂತೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ರೈಲಿನಲ್ಲಿ ಮಗು ಚೆಲ್ಲಿದ್ದ ಚಿಪ್ಸ್​ ಅನ್ನು ಅದರ ಕೈಯೊಂದಲೇ ತಂದೆ ಆರಿಸಲು ಹೇಳಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಗಲೀಜನ್ನು ಸ್ವತಃ ಸ್ವಚ್ಛಗೊಳಿಸುವ ಅಥವಾ ರೈಲು ಸಿಬ್ಬಂದಿಯನ್ನು ಅವಲಂಬಿಸುವ ಬದಲು, ಸಮಲ್ ತನ್ನ ಮಗುವಿಗೆ ತಂದೆ ಅದರ ಪಾಠ ಮಾಡಿದ್ದಾರೆ.

Viral Video: ರೈಲಿನಲ್ಲಿ ಚಿಪ್ಸ್​ ಚೆಲ್ಲಿದ ಮಗ, ಆತನ ಕೈಯಿಂದಲೇ ಸ್ವಚ್ಛಗೊಳಿಸಿದ ತಂದೆ
ತಂದೆ-ಮಗImage Credit source: NDTV
ನಯನಾ ರಾಜೀವ್
|

Updated on: Feb 24, 2026 | 8:21 AM

Share

ಟ್ರಾವೆಲ್ ವ್ಲಾಗರ್ ದೀಪಕ್ ಸಮಲ್ ಹಂಚಿಕೊಂಡಿರುವ ವಿಡಿಯೋ ಭಾರತದಲ್ಲಿ ನಾಗರಿಕ ಜವಾಬ್ದಾರಿ ಮತ್ತು ಪೋಷಕರ ಕರ್ತವ್ಯದ ಕುರಿತ ಚರ್ಚೆಗೆ ನಾಂದಿ ಹಾಡಿದೆ. ಮಕ್ಕಳು ಎಂದ ಮೇಲೆ ಕೈಯಲ್ಲಿರುವ ವಸ್ತುಗಳನ್ನು ಗೊತ್ತಿಲ್ಲದೆ ಚೆಲ್ಲುವುದು ಅಥವಾ ಗೊತ್ತಿದ್ದೇ ಬಿಸಾಡುವುದು ಸಾಮಾನ್ಯ, ಆದರೆ ಪೋಷಕರಾದವರು ಹೇಗಿರಬೇಕು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ರೈಲಿನಲ್ಲಿ ಮಗು ಚೆಲ್ಲಿದ್ದ ಚಿಪ್ಸ್(Chips)​ ಅನ್ನು ಅದರ ಕೈಯೊಂದಲೇ ತಂದೆ ಆರಿಸಲು ಹೇಳಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಗಲೀಜನ್ನು ಸ್ವತಃ ಸ್ವಚ್ಛಗೊಳಿಸುವ ಅಥವಾ ರೈಲು ಸಿಬ್ಬಂದಿಯನ್ನು ಅವಲಂಬಿಸುವ ಬದಲು, ಸಮಲ್ ತನ್ನ ಮಗುವಿಗೆ ತಂದೆ ಅದರ ಪಾಠ ಮಾಡಿದ್ದಾರೆ.

ಸಮಲ್ ತನ್ನ ಎರಡು ವರ್ಷದ ಮಗನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅಪ್ಪನ ಬಳಿ ಮಾತನಾಡುತ್ತಾ ತಮಾಷೆಯಾಗಿ ಮಗು ನೆಲದಲ್ಲಿ ಚಿಪ್ಸ್​ ಹರಡಿತ್ತು. ತಾನೇ ಸದ್ದಿಲ್ಲದೆ ಅದನ್ನು ಎರಡು ನಿಮಿಷಗಳಲ್ಲಿ ಸ್ವಚ್ಛಗೊಳಿಸಬಹುದಿತ್ತು. ಆದರೆ ಸಮಲ್ ಹಾಗೆ ಮಾಡಲಿಲ್ಲ, ಮಗನ ಬಳಿ ನೆಲದ ಮೇಲೆ ಎಸೆದ ವಸ್ತುಗಳನ್ನು ಯಾರು ಸ್ವಚ್ಛಗೊಳಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಆಗ ಮಗುವಿಗೆ ಏನೂ ತಿಳಿಯದೆ ಗಲಿಬಿಲಿ ಗೊಂಡಿತ್ತು.

ಮತ್ತಷ್ಟು ಓದಿ: Video: ಪುಟ್ಟ ಬಾಲಕ ಸಿಎಂ ಯೋಗಿ ಬಳಿ ಇಟ್ಟ ಬೇಡಿಕೆ ಏನು ಗೊತ್ತೇ?

ಆಗ ನಿಧಾನವಾಗಿ ವಿವರಿಸುತ್ತಾ, ಇದು ನಮ್ಮ ಮನೆಯಲ್ಲ ನಿಜ ಆದರೆ ರೈಲು ಎಲ್ಲರಿಗೂ ಸೇರಿದ್ದು, ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ. ನಾವು ಗಲೀಜಿ ಮಾಡಿದಾಗ ನಾವೇ ಅದನ್ನು ಸ್ವಚ್ಛಗೊಳಿಸಬೇಕು ಎಂದು ಹೇಳಿದ ಸ್ವಲ್ಪ ಸಮಯದ ಬಳಿಕ ಮಗು ನಿಧಾನವಾಗಿ ಚಿಪ್ಸ್​ ಎತ್ತಿಕೊಳ್ಳಲು ಶುರು ಮಾಡಿತ್ತು.

ವಿಡಿಯೋ

ಮಕ್ಕಳಿಗೆ ಗದರಿಸಬಾರದು, ನಿಧಾನವಾಗಿ ಮಾಡಿರುವ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ಕೊಡುವ ಮೂಲಕ ಪಾಠ ಕಲಿಸಬೇಕು. ಭಾರತೀಯ ರೈಲ್ವೆಯ ಮೂಲಕ ಪ್ರತಿದಿನ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ರೈಲುಗಳನ್ನು ಸ್ವಚ್ಛವಾಗಿಡುವುದು ಕೇವಲ ಸಿಬ್ಬಂದಿಯ ಕರ್ತವ್ಯವಲ್ಲ, ಅದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸಮಲ್ ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?