PPE Kit ಚೀನಾಗೆ ಸೆಡ್ಡು ಹೊಡೆದು ವ್ಯಕ್ತಿಗತ ರಕ್ಷಣೆಯಲ್ಲಿ ಸ್ವಾವಲಂಬನೆ ಸಾಧಿಸಿದ ಭಾರತ
ದೆಹಲಿ: ಭಾರತದ ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಸ್ವಾವಲಂಬನೆಯಿಂದ ಪಿಪಿಇ ಕಿಟ್ಗಳನ್ನು ತಯಾರಿಸುವ ಮೂಲಕ ಸಾಧನೆ ಮಾಡಲಾಗಿದೆ. ಭಾರತದಲ್ಲೀಗ ಪ್ರತಿನಿತ್ಯ 1.7 ಲಕ್ಷ ಪಿಪಿಇ ಕಿಟ್ ಉತ್ಪಾದನೆ ಮಾಡಲಾಗುತ್ತಿದೆ. ಪಿಪಿಇ ಕಿಟ್ ಉತ್ಪಾದನೆಯಲ್ಲಿ 2ನೇ ದೊಡ್ಡ ದೇಶ ಭಾರತವಾಗಿ ಹೊರಹೊಮ್ಮಿದೆ. ಫೆಬ್ರವರಿ ತಿಂಗಳಲ್ಲಿ ಭಾರತವು ಪಿಪಿಇ ಕಿಟ್ಗಳನ್ನು ಬೇರೆ ದೇಶಗಳಿಂದ ಅಮದು ಮಾಡಿಕೊಳ್ಳುತ್ತಿತ್ತು. ಫೆಬ್ರವರಿಯಲ್ಲಿ 52 ಸಾವಿರ ಪಿಪಿಇ ಅಮದು ಮಾಡಿಕೊಂಡಿತ್ತು. ಆದರೆ ಕೆಲವೇ ದಿನಗಳಲ್ಲಿ ಭಾರತವು ಪಿಪಿಇ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಈಗ ಭಾರತವು […]
ದೆಹಲಿ: ಭಾರತದ ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಸ್ವಾವಲಂಬನೆಯಿಂದ ಪಿಪಿಇ ಕಿಟ್ಗಳನ್ನು ತಯಾರಿಸುವ ಮೂಲಕ ಸಾಧನೆ ಮಾಡಲಾಗಿದೆ. ಭಾರತದಲ್ಲೀಗ ಪ್ರತಿನಿತ್ಯ 1.7 ಲಕ್ಷ ಪಿಪಿಇ ಕಿಟ್ ಉತ್ಪಾದನೆ ಮಾಡಲಾಗುತ್ತಿದೆ. ಪಿಪಿಇ ಕಿಟ್ ಉತ್ಪಾದನೆಯಲ್ಲಿ 2ನೇ ದೊಡ್ಡ ದೇಶ ಭಾರತವಾಗಿ ಹೊರಹೊಮ್ಮಿದೆ.
ಫೆಬ್ರವರಿ ತಿಂಗಳಲ್ಲಿ ಭಾರತವು ಪಿಪಿಇ ಕಿಟ್ಗಳನ್ನು ಬೇರೆ ದೇಶಗಳಿಂದ ಅಮದು ಮಾಡಿಕೊಳ್ಳುತ್ತಿತ್ತು. ಫೆಬ್ರವರಿಯಲ್ಲಿ 52 ಸಾವಿರ ಪಿಪಿಇ ಅಮದು ಮಾಡಿಕೊಂಡಿತ್ತು. ಆದರೆ ಕೆಲವೇ ದಿನಗಳಲ್ಲಿ ಭಾರತವು ಪಿಪಿಇ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಈಗ ಭಾರತವು ಪ್ರತಿ ನಿತ್ಯ 1.7 ಲಕ್ಷ ಪಿಪಿಇ ಉತ್ಪಾದನೆ ಮಾಡ್ತಿದೆ. ನಿತ್ಯ ಎರಡು ಲಕ್ಷ ಪಿಪಿಇ ಉತ್ಪಾದನೆ ಗುರಿ ಹಾಕಿಕೊಳ್ಳಲಾಗಿದೆ. ಈಗ ಭಾರತವು ಪಿಪಿಇ ಉತ್ಪಾದನೆಯಲ್ಲಿ ವಿಶ್ವದಲ್ಲೇ ಎರಡನೆ ಅತಿ ದೊಡ್ಡ ದೇಶವಾಗಿದೆ.
ಫೆಬ್ರವರಿಯಲ್ಲಿ ಪಿಪಿಇ ಅಮದು ಮಾಡಿಕೊಳ್ಳುತ್ತಿದ್ದ ಭಾರತ ಈಗ ಪಿಪಿಇ ರಫ್ತು ಮಾಡುತ್ತಿದೆ. ಚೀನಾ ದೇಶ ಕಳಪೆ ಗುಣಮಟ್ಟದ ಪಿಪಿಇ ಉತ್ಪಾದನೆ ಮಾಡುತ್ತಿತ್ತು. ಚೀನಾದ ಕಳಪೆ ಗುಣಮಟ್ಟದ ಪಿಪಿಇಯನ್ನು ಭಾರತ ವಾಪಸ್ ಕಳಿಸಿತ್ತು. ಆದರೆ ಭಾರತ ವಿಶ್ವದರ್ಜೆಯ ಉತ್ತಮ ಗುಣಮಟ್ಟದ ಪಿಪಿಇ ಉತ್ಪಾದನೆ ಮಾಡ್ತಿದೆ. ಅರವಿಂದ್ ಮಿಲ್ಸ್, ಸಾಹೀಲ್ ಎಕ್ಸಪೋರ್ಟ್ ಕಂಪನಿ ಸೇರಿದಂತೆ ಕೇಂದ್ರ ಸರ್ಕಾರ ಗಾರ್ಮೆಂಟ್ಸ್ ಜತೆಗೂಡಿ ಪಿಪಿಇ ಕಿಟ್ ಉತ್ಪಾದನೆ ಹೆಚ್ಚಳ ಮಾಡಲಾಗುತ್ತಿದೆ.