ಕೇರಳ ಮುಂಗಾರು-2020: ದೇವರನಾಡಿಗೆ ಮತ್ತೆ ಕಾದಿದೆ ಮುಂಗಾರು ವಿಕೋಪ!

ತಿರುವನಂತಪುರಂ: ತನ್ನ ಅರ್ಧ ಗಡಿಭಾಗವನ್ನು ಕರ್ನಾಟಕದ ಜೊತೆ ಹಂಚಿಕೊಂಡಿರುವ ಕೇರಳದಲ್ಲಿ ಈ ಬಾರಿಯೂ ಭಾರೀ ಮುಂಗಾರು ಮಳೆ ಸುರಿಯಲಿದೆ. ದೇವರನಾಡಿನ ಭೀಕರ ಚರಿತ್ರೆಯಲ್ಲಿ ಮೊದಲ ಬಾರಿಗೆ ಇನ್ನಿಲ್ಲದಂತೆ ಕಾಡಿದ್ದ ಕೇರಳ ಮುಂಗಾರು-2019 ಇನ್ನೂ ಜನಮಾನಸದಲ್ಲಿ ದುಃಸ್ವಪ್ನದಂತೆ ತೊಟ್ಟಿಕ್ಕುತ್ತಿರುವಾಗ ಕೇರಳ ಮುಂಗಾರು-2020 ಇನ್ನೂ ಭೀಕರವಾಗಿರಲಿದೆ ಎಂದು ಹವಾಮಾನ ಇಲಾಖೆ ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಮಳೆ ಸುರಿಯುವುದಕ್ಕೆ ಹೇಳಿಮಾಡಿಸಿದಂತಹ ಅನುಕೂಲಕರ ವಾತಾವರಣ ಇದೆ! ನದಿಗಳು ಉಕ್ಕಿ ಹರಿಯಲಿವೆ, ಅಣೆಕಟ್ಟೆಗಳು ಕಟ್ಟೆ ಒಡಯಲಿವೆ. ಒಟ್ಟಾರೆಯಾಗಿ ಕೇರಳ ಮುಂಗಾರು-2019 ರಿಪೀಟ್​ ಶೋ […]

ಕೇರಳ ಮುಂಗಾರು-2020: ದೇವರನಾಡಿಗೆ ಮತ್ತೆ ಕಾದಿದೆ ಮುಂಗಾರು ವಿಕೋಪ!
Follow us
ಸಾಧು ಶ್ರೀನಾಥ್​
|

Updated on: May 07, 2020 | 5:56 PM

ತಿರುವನಂತಪುರಂ: ತನ್ನ ಅರ್ಧ ಗಡಿಭಾಗವನ್ನು ಕರ್ನಾಟಕದ ಜೊತೆ ಹಂಚಿಕೊಂಡಿರುವ ಕೇರಳದಲ್ಲಿ ಈ ಬಾರಿಯೂ ಭಾರೀ ಮುಂಗಾರು ಮಳೆ ಸುರಿಯಲಿದೆ. ದೇವರನಾಡಿನ ಭೀಕರ ಚರಿತ್ರೆಯಲ್ಲಿ ಮೊದಲ ಬಾರಿಗೆ ಇನ್ನಿಲ್ಲದಂತೆ ಕಾಡಿದ್ದ ಕೇರಳ ಮುಂಗಾರು-2019 ಇನ್ನೂ ಜನಮಾನಸದಲ್ಲಿ ದುಃಸ್ವಪ್ನದಂತೆ ತೊಟ್ಟಿಕ್ಕುತ್ತಿರುವಾಗ ಕೇರಳ ಮುಂಗಾರು-2020 ಇನ್ನೂ ಭೀಕರವಾಗಿರಲಿದೆ ಎಂದು ಹವಾಮಾನ ಇಲಾಖೆ ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.

ಮಳೆ ಸುರಿಯುವುದಕ್ಕೆ ಹೇಳಿಮಾಡಿಸಿದಂತಹ ಅನುಕೂಲಕರ ವಾತಾವರಣ ಇದೆ! ನದಿಗಳು ಉಕ್ಕಿ ಹರಿಯಲಿವೆ, ಅಣೆಕಟ್ಟೆಗಳು ಕಟ್ಟೆ ಒಡಯಲಿವೆ. ಒಟ್ಟಾರೆಯಾಗಿ ಕೇರಳ ಮುಂಗಾರು-2019 ರಿಪೀಟ್​ ಶೋ ಈ ಬಾರಿಯೂ ಇರಲಿದೆ ಎನ್ನಲಾಗಿದೆ. ಈಗಾಗಲೇ ಕೊರೊನಾ ಸೋಂಕಿನಿಂದ ನಿತ್ರಾಣಗೊಂಡಿರುವ ಕೇರಳದಲ್ಲಿ ಈ ಬಾರಿ ಬೇಸಿಗೆ ಮಳೆ ಬೀಳಲಿಲ್ಲ. ಬಿರುಬಿಸಿಲು ಜೋರಾಗಿತ್ತು. ಹೀಗಾಗಿ ಕಳೆದ ಒಂದೂವರೆ ತಿಂಗಳಿಂದ ಕೇರಳದಲ್ಲಿ ವಿಪರೀತ ತಾಪಮಾನ ಮನೆಮಾಡಿದೆ. ದಿನದಲ್ಲಿ 35 ಡಿಗ್ರಿ ಸೆಲ್ಸಿಯಸ್ ಇದ್ದರೆ ರಾತ್ರಿ ವೇಳೆ 26 ಡಿಗ್ರಿ ತಾಪಮಾನ ನಿರಂತರವಾಗಿತ್ತು. ಇದರಿಂದ ವಾತಾವರಣ ಮತ್ತಷ್ಟು ಶಾಖದಿಂದ ಕೂಡಿರುತ್ತದೆ. ಹಾಗಾಗಿ ನಿಗದಿಯಂತೆ ಜೂನ್ ಆರಂಭಕ್ಕೆ ವಾಯವ್ಯ ಬೀಸುಗಾಳಿ ಕೇರಳಕ್ಕೆ ಅಪ್ಪಳಿಸಲಿದೆ. ಇದು ಮಳೆ ಸುರಿಯುವುದಕ್ಕೆ ಹೇಳಿಮಾಡಿಸಿದಂತಹ ಅನುಕೂಲಕರ ವಾತಾವರಣ.

ರಾಜ್ಯದ ದಕ್ಷಿಣ ಮಧ್ಯೆ ಭಾಗದಲ್ಲಿ ಸಮುದ್ರದಲ್ಲಿ ತಾಪಮಾನ ಎಷ್ಟಿದೆ ಎಂಬುದನ್ನು ಆಧರಿಸಿ, ಕೇರಳದಲ್ಲಿ ಮಳೆಯ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಸದ್ಯಕ್ಕೆ ಇಲ್ಲಿ ತಂಪಾದ ವಾತಾವರಣವಿದೆ. ಇದು ಮೋಡಗಳ ಸೃಷ್ಟಿಗೆ ಸಹಾಯಕವಾಗಲಿದೆ. ಆದರೆ ಅದು ಪಶ್ಚಿಮ ಘಟ್ಟಗಳತ್ತ ಸರಿದುಹೋಗುವುದಿಲ್ಲ. ಹಾಗಾಗಿ ಕೇರಳದಲ್ಲಿಯೇ ಧೋ ಎಂದು ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ತಿಳಿಸಿವೆ.

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ