Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶಾಖಪಟ್ಟಣಂನಲ್ಲಿ ವಿಷಾನಿಲ ಸೋರಿಕೆ ದುರಂತ, 11 ಜನರ ಸಾವು

ವಿಶಾಖಪಟ್ಟಣಂ: ಒಂದ್ಕಡೆ ಇಡೀ ದೇಶದಲ್ಲಿ ಕೊರೊನಾ ಆತಂಕ ಮನೆಮಾಡಿದೆ. ಇನ್ನೊಂದ್ಕಡೆ ಆಂಧ್ರ ಕರಾವಳಿ ಜಿಲ್ಲೆಯ ಜನ ಮಾತ್ರ ನಿಂತಲ್ಲೇ ಕುಸಿದು ಬೀಳ್ತಿದ್ರು. ಅಷ್ಟಕ್ಕೂ ಅವರು ಕುಸಿದು ಬೀಳೋದಕ್ಕೆ ಕಾರಣ ಕೊರೊನಾ ಅಲ್ಲ, ಖಾಸಗಿ ಕಂಪೆನಿಯ ಕೊಳವೆಗಳ ಮೂಲಕ ಸೋರಿ ಹೋದ ವಿಷಾನೀಲ. ಹೀಗೆ ಹೊರಬಂದ ಗ್ಯಾಸ್ ಹತ್ತಾರು ಜನರ ಜೀವ ಕಳೆದಿದೆ. ಜನ ನಿಂತಲ್ಲೇ ಕುಸಿದು ಬೀಳ್ತಿದ್ದಾರೆ. ಇನ್ನೊಂದ್ಕಡೆ ಅರೆಪ್ರಜ್ಞಾವಸ್ಥೆಯಲ್ಲಿ ಜೀವ ಬಿಗಿಹಿಡಿದಿದ್ದಾರೆ. ಡೆಡ್ಲಿ ಗ್ಯಾಸ್​ನಿಂದ ಬೀದಿಯಲ್ಲೇ ಹೆಣವಾದ ಜನ: V-2: ಅಂದಹಾಗೆ ವಿಶಾಖಪಟ್ಟಣಂನಲ್ಲಿ ನಡೆದ ದೃಶ್ಯಗಳನ್ನೆಲ್ಲಾ […]

ವಿಶಾಖಪಟ್ಟಣಂನಲ್ಲಿ ವಿಷಾನಿಲ ಸೋರಿಕೆ ದುರಂತ, 11 ಜನರ ಸಾವು
Follow us
ಸಾಧು ಶ್ರೀನಾಥ್​
|

Updated on: May 08, 2020 | 7:26 AM

ವಿಶಾಖಪಟ್ಟಣಂ: ಒಂದ್ಕಡೆ ಇಡೀ ದೇಶದಲ್ಲಿ ಕೊರೊನಾ ಆತಂಕ ಮನೆಮಾಡಿದೆ. ಇನ್ನೊಂದ್ಕಡೆ ಆಂಧ್ರ ಕರಾವಳಿ ಜಿಲ್ಲೆಯ ಜನ ಮಾತ್ರ ನಿಂತಲ್ಲೇ ಕುಸಿದು ಬೀಳ್ತಿದ್ರು. ಅಷ್ಟಕ್ಕೂ ಅವರು ಕುಸಿದು ಬೀಳೋದಕ್ಕೆ ಕಾರಣ ಕೊರೊನಾ ಅಲ್ಲ, ಖಾಸಗಿ ಕಂಪೆನಿಯ ಕೊಳವೆಗಳ ಮೂಲಕ ಸೋರಿ ಹೋದ ವಿಷಾನೀಲ. ಹೀಗೆ ಹೊರಬಂದ ಗ್ಯಾಸ್ ಹತ್ತಾರು ಜನರ ಜೀವ ಕಳೆದಿದೆ. ಜನ ನಿಂತಲ್ಲೇ ಕುಸಿದು ಬೀಳ್ತಿದ್ದಾರೆ. ಇನ್ನೊಂದ್ಕಡೆ ಅರೆಪ್ರಜ್ಞಾವಸ್ಥೆಯಲ್ಲಿ ಜೀವ ಬಿಗಿಹಿಡಿದಿದ್ದಾರೆ.

ಡೆಡ್ಲಿ ಗ್ಯಾಸ್​ನಿಂದ ಬೀದಿಯಲ್ಲೇ ಹೆಣವಾದ ಜನ: V-2: ಅಂದಹಾಗೆ ವಿಶಾಖಪಟ್ಟಣಂನಲ್ಲಿ ನಡೆದ ದೃಶ್ಯಗಳನ್ನೆಲ್ಲಾ ನೋಡ್ತಿದ್ರೆ, ದೇಶದ ಬಹುದೊಡ್ಡ ಹಾಗೂ ಘೋರ ದುರಂತಗಳಲ್ಲಿ ಒಂದಾದ ಭೋಪಾಲ್ ವಿಷಾನಿಲ ಪ್ರಕರಣ ಕಣ್ಣಮುಂದೆ ರಾಚುತ್ತದೆ. ಭೋಪಾಲ್ ರೀತಿಯದ್ದೇ ಆದ ಮತ್ತೊಂದು ಅವಘಡಕ್ಕೆ ವಿಶಾಖಪಟ್ಟಣಂ ಸಾಕ್ಷಿಯಾಗಿದೆ.

ಇಲ್ಲಿನ ಆರ್.ಆರ್.ವೆಂಕಟಾಪುರದ ಜನ ಅನುಭವಿಸಿದ ನರಕ ಯಾತನೆ ದೇಶವನ್ನೇ ದಂಗುಬಡಿಸಿದೆ. ಒಂದೊಂದು ದೃಶ್ಯವೂ ಮಹಾದುರಂತದ ಭೀಕರ ಕತೆಹೇಳ್ತಿವೆ. ಎಲ್​ಜಿ ಪಾಲಿಮರ್ಸ್ ಕಂಪೆನಿಯಲ್ಲಿ ಸ್ಟೆರಿನ್ ಅನ್ನೋ ವಿಷಕಾರಿ ಅನಿಲ ಸೋರಿಕೆಯಿಂದ ರಾತ್ರಿ ಮನೆಯಲ್ಲಿ ಮಲಗಿದ್ದ ಜನರು ಸಹಿಸಲಾಗದ ನೋವಿನಿಂದ ಹೊರಗೆ ಓಡಿ ಬಂದಿದ್ದರು. ಇದಕ್ಕಿಂತಲೂ ಭಯಾನಕ ಅಂದ್ರೆ, ಇದೇ ಡೆಡ್ಲಿ ಗ್ಯಾಸ್ ವ್ಯೂಹಕ್ಕೆ ಸಿಲುಕಿ ಬರೋಬ್ಬರಿ 11ಕ್ಕೂ ಹೆಚ್ಚು ಜನ ಕುಂತಲ್ಲೇ, ನಿಂತಲ್ಲೇ, ಮಲಗಿದ್ದಲ್ಲೇ ಜೀವ ಬಿಟ್ಟಿದ್ದಾರೆ.

ಕೈ ಮೇಲೆಲ್ಲಾ ಬೊಬ್ಬೆಗಳಾಗುತ್ತಿದ್ದವು. ಕಣ್ಣಲ್ಲಿ ನೀರು ಬರ್ತಿತ್ತು. ಹೇಗಾದ್ರೂ ಮಾಡಿ ಮನೆಯಿಂದ ಆಚೆ ಬಂದ್ರೆ ಮಂಜಿನ ರೀತಿಯಲ್ಲಿ ಗ್ಯಾಸ್ ಸುಳಿದಾಡ್ತಾ ಇತ್ತು. ಏನಾಗ್ತಿದೆ ಅನ್ನೋದೇ ಗೊತ್ತಾಗಲಿಲ್ಲ. ಎಲ್ಲಿಗೆ ಹೋಗೋದು ಗೊತ್ತಾಗಲಿಲ್ಲ. ರೋಡಿನಲ್ಲಿ ನಡೆಯುತ್ತಾ ಇರೋರು ಹಾಗೇ ಬಿದ್ದು ಬಿಡುತ್ತಿದ್ದರು. ಮನೆಯೊಳಗಿದ್ದ ಚಿಕ್ಕಮಕ್ಕಳು, ನನ್ನ ಅಮ್ಮ ಕೂಡ ಕುಸಿದು ಬಿದ್ದರು ಎಂದು ನಿವಾಸಿಯೊಬ್ಬರು ತಿಳಿಸಿದ್ದಾರೆ.

ಇನ್ನು ದುರಂತಕ್ಕೆ ಹಲವಾರು ಕಾರಣಗಳಿವೆ. ಈಗಾಗ್ಲೇ 11 ಜನ ಮೃತಪಟ್ಟು, ಒಂದೂವರೆ ಸಾವಿರಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಹಾಗಾದ್ರೆ ಈ ದುರಂತಕ್ಕೆ ಕಾರಣವಾದ್ರೂ ಏನು ಅನ್ನೋದನ್ನ ನೋಡೋದಾದ್ರೆ. ಮೊನ್ನೆ ತಡರಾತ್ರಿ 2.30ರ ಸುಮಾರಿಗೆ ವೆಂಕಟಾಪುರಂನ ಕಾರ್ಖಾನೆಯ 2 ಟ್ಯಾಂಕ್​​ನಿಂದ ಇದ್ದಕ್ಕಿದ್ದಂತೆಯೇ ವಿಷಾನಿಲ ‘ಸ್ಟೆರಿನ್ ಗ್ಯಾಸ್’ ಸೋರಿಕೆಯಾಗಿದೆ. ಭಾರಿ ಪ್ರಮಾಣದಲ್ಲಿ ಸೋರಿಕೆಯಾದ ಗ್ಯಾಸ್, ವಾತಾವರಣ ಸೇರಿ, ಗಾಳಿ ಜೊತೆಗೂಡಿ ರಾತ್ರೋ ರಾತ್ರಿ ಊರಿನಾದ್ಯಂತ ಹಬ್ಬಿದೆ.

5ಕ್ಕೂ ಹೆಚ್ಚು ಗ್ರಾಮಗಳಿಗೆ ಹಬ್ಬಿದ ವಿಷಾನಿಲ: ಸೋರಿಕೆಯಾದ ಕೆಲ ಹೊತ್ತಲೇ ವಿಷಾನಿಲ 5ಕ್ಕೂ ಹೆಚ್ಚು ಗ್ರಾಮಗಳನ್ನ ಆವರಿಸಿತ್ತು. ಸಾವಿರಾರು ಜನ, ಸಾಕು ಪ್ರಾಣಿಗಳ ದೇಹ ಹೊಕ್ಕು ರೌದ್ರಾವತಾರ ತಾಳಿತ್ತು. ಜನ, ಜಾನುವಾರುಗಳು ಬೀದಿ ಬೀದಿಯಲ್ಲಿ ಬಿದ್ದಿದ್ದರು. ಕೂಡಲೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆ ರವಾನಿಸಿ, 1,500ಕ್ಕೂ ಅಧಿಕ ಮಂದಿಯನ್ನ ಗ್ರಾಮಗಳಿಂದ್ಲೇ ಸ್ಥಳಾಂತರಿಲಾಯ್ತು.

ಅಷ್ಟಕ್ಕೂ ಈ ವಿಷಾನಿಲ ದೇಹವನ್ನ ಪ್ರವೇಶಿಸಿದ್ರೆ ಏನಾಗುತ್ತೆ.? ದೇಹದೊಳಕ್ಕೆ ಹೊಕ್ಕ ಸ್ಟೆರಿನ್ ಗ್ಯಾಸ್ ಯಾವ ರೀತಿಯಲ್ಲಿ ಡ್ಯಾಮೇಜ್ ಮಾಡುತ್ತೆ ಅನ್ನೋದನ್ನ ನೋಡೋದಾದ್ರೆ.

ಹಂತ ನಂ.1: ಉಸಿರಾಟದಲ್ಲಿ ಸಮಸ್ಯೆ ಮತ್ತು ಎದೆ ಉರಿ! ದೇಹದೊಳಕ್ಕೆ ಸ್ಟೆರಿನ್ ಗ್ಯಾಸ್ ಎಂಟ್ರಿಯಾಗುತ್ತಲೇ ಉಸಿರಾಟದಲ್ಲಿ ತೀವ್ರ ಸಮಸ್ಯೆ ಉಂಟಾಗುತ್ತೆ. ಎದೆಯನ್ನು ಈ ಡೆಡ್ಲಿ ಗ್ಯಾಸ್ ಪ್ರವೇಶಿಸುತ್ತಲೇ ಎದೆ ಉರಿ ಕಾಣಿಸಿಕೊಂಡು, ಅಸಾಧಾರಣ ನೋವು ಎದುರಾಗುತ್ತದೆ.

ಹಂತ ನಂ.2: ಉಬ್ಬಸ, ದೇಹಕ್ಕೆ ಆಮ್ಲಜನಕದ ಕೊರತೆ! ವಿಷಾನಿಲದ ಎಫೆಕ್ಟ್​ನ 2ನೇ ಹಂತದಲ್ಲಿ ಮಾನವನಿಗೆ ಉಬ್ಬಸ ಉಂಟಾಗುತ್ತೆ. ಹಾಗೇ ಶ್ವಾಸಕೋಶ ನಾಳಗಳು ಡ್ಯಾಮೇಜ್ ಆಗಿ, ದೇಹಕ್ಕೆ ಆಮ್ಲಜನಕದ ಎದುರಾಗುತ್ತದೆ.

ಹಂತ ನಂ.3: ಸ್ನಾಯುಗಳಲ್ಲಿ ದೌರ್ಬಲ್ಯ, ಪಾರ್ಶ್ವವಾಯು! ವಿಷಾನಿಲದ ಪರಿಣಾಮ 3ನೇ ಹಂತದಲ್ಲಿ ದೇಹದ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಇದ್ದಕ್ಕಿದ್ದಂತೆ ಈ ಡೆಡ್ಲಿ ಗ್ಯಾಸ್ ದೇಹ ಹೊಕ್ಕು, ವ್ಯಕ್ತಿಗೆ ಪಾರ್ಶ್ವವಾಯು ಬಡಿಯುತ್ತೆ.

ಹಂತ ನಂ.4: ಸಂಪೂರ್ಣವಾಗಿ ಉಸಿರಾಟದ ಸಮಸ್ಯೆ! 4ನೇ ಹಂತದಲ್ಲಿ ವ್ಯಕ್ತಿಯನ್ನ ಸಾವಿನಂಚಿಗೆ ಕೊಂಡೊಯ್ಯೋ ಈ ವಿಷಾನಿಲ, ಸಂಪೂರ್ಣವಾಗಿ ಉಸಿರಾಟಕ್ಕೆ ಸಮಸ್ಯೆ ಉಂಟು ಮಾಡುತ್ತೆ. ಈ ಹಂತದಲ್ಲಿ ವ್ಯಕ್ತಿಗೆ ಆಮ್ಲಜನಕದ ವ್ಯವಸ್ಥೆ ಆಗದೇ ಇದ್ದಲ್ಲಿ ಸ್ಥಳದಲ್ಲೇ ಸಾವನ್ನಪ್ಪುತ್ತಾನೆ.

ಒಟ್ನಲ್ಲಿ, ಸ್ಟೆರಿನ್ ವಿಷಾನಿಲದಿಂದ ವಿಶಾಖಪಟ್ಟಣದ ವೆಂಕಟಾಪುರಂನ ಸಾವಿರಾರು ಜನರು ಅಕ್ಷರಶಃ ಸಾವಿನ ಮನೆ ಕದ ತಟ್ಟಿದ್ದಾರೆ. ಇನ್ನಾದರೂ ದೇಶಾದ್ಯಂತ ಇರೋ ಇಂತಹ ಫ್ಯಾಕ್ಟರಿಗಳ ಮೇಲೆ ಹದ್ದಿನಗಣ್ಣು ಇಡಲೇಬೇಕಿದೆ. ಇಲ್ಲವಾದಲ್ಲಿ ಭವಿಷ್ಯದಲ್ಲಿ ಇಂತಹ ನೂರಾರು ಘಟನೆಗಳಿಗೆ ಸರ್ಕಾರಗಳು ಸಿದ್ಧವಾಗಬೇಕಿದೆ.