30 ವರ್ಷಗಳ ನಂತರ.. ಬಿರುಸಿನ ಮತದಾನಕ್ಕೆ ಮುಂದಾದ ಗ್ರಾಮಸ್ಥರು, ಎಲ್ಲಿ? ಯಾಕೆ?

30 ವರ್ಷಗಳ ಬಳಿಕ ಗ್ರಾಮವೊಂದರಲ್ಲಿ ಜನರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡಲು ಮುಂದಾಗಿರುವ ಘಟನೆ ಜಿಲ್ಲೆಯ ಕಪಗಲ್ಲು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

30 ವರ್ಷಗಳ ನಂತರ.. ಬಿರುಸಿನ ಮತದಾನಕ್ಕೆ ಮುಂದಾದ ಗ್ರಾಮಸ್ಥರು, ಎಲ್ಲಿ? ಯಾಕೆ?
ಬಿರುಸಿನ ಮತದಾನಕ್ಕೆ ಮುಂದಾದ ಕಪಗಲ್ಲು ಗ್ರಾಮಸ್ಥರು
Edited By:

Updated on: Dec 22, 2020 | 11:06 AM

ಬಳ್ಳಾರಿ: 30 ವರ್ಷಗಳ ಬಳಿಕ ಗ್ರಾಮವೊಂದರಲ್ಲಿ ಜನರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡಲು ಮುಂದಾಗಿರುವ ಘಟನೆ ಜಿಲ್ಲೆಯ ಕಪಗಲ್ಲು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಅಂದ ಹಾಗೆ, ಕಳೆದ 30 ವರ್ಷಗಳಿಂದಲೂ ಕಪಗಲ್ಲು ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅಭ್ಯರ್ಥಿಗಳ ಅವಿರೋಧ ಆಯ್ಕೆ ನಡೆಯುತ್ತಿತ್ತು. ಹಾಗಾಗಿ, ಹಲವು ವರ್ಷಗಳಿಂದ ಇಲ್ಲಿ ಎಲೆಕ್ಷನ್​ ನಡೆದಿರಲಿಲ್ಲ. ಆದರೆ ಈ ಬಾರಿ, ಗ್ರಾಮಸ್ಥರ ನಡುವೆ ಒಮ್ಮತ ಮೂಡದ ಕಾರಣ ಚುನಾವಣೆ ನಡೆಸಲು ಎಲ್ಲರೂ ತೀರ್ಮಾನಿಸಿದ್ದಾರೆ.

ಹಾಗಾಗಿ, ಸರತಿ ಸಾಲಿನಲ್ಲಿ ನಿಂತು ಗ್ರಾಮಸ್ಥರು ತಮ್ಮ ಹಕ್ಕು ಚಲಾಯಿಸಿದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎದುರು ಮಾರ್ಕಿಂಗ್ ಹಾಕಿದ ಜಾಗದಲ್ಲಿ ಒಂದೊಂದು ಮತಗಟ್ಟೆ ಮುಂಭಾಗದಲ್ಲಿ ಸರತಿ ಸಾಲಿನಲ್ಲಿ ನೂರಾರು ಸಂಖ್ಯೆಯಲ್ಲಿ ನಿಂತು ವೋಟ್​ ಹಾಕಿದರು.

ದೇಸೂರ ಗ್ರಾಮದ ಮತಗಟ್ಟೆ ಚುನಾವಣಾ ಅಧಿಕಾರಿ ಬಳಿ ಲೋಡೆಡ್ ಪಿಸ್ತೂಲ್ ಪತ್ತೆ..