ಕೊರೊನಾ ತೊಲಗಿಸಲು ದೀರ್ಘದಂಡ ನಮಸ್ಕಾರ

|

Updated on: Apr 24, 2020 | 10:32 AM

ಬಾಗಲಕೋಟೆ: ಕೊರೊನಾ ಎಂಬ ಹೆಸರು ಕೇಳಿದ್ರೆ ಸಾಕು ಬೆಚ್ಚಿಬೀಳುವ ಪರಿಸ್ಥಿತಿ ಉಂಟಾಗಿದೆ. ಭೂಮಿಯ ಮೇಲೆಯೇ ನರಕ ತೋರಿಸುತ್ತಿರುವ ಕೊರೊನಾ ಜನರನ್ನು ಬೆನ್ನು ಬಿಡದೆ ಕಾಡುತ್ತಿದೆ. ಕೊರೊನಾವನ್ನು ಹೋಗಲಾಡಿಸಲು ಜನ ಎನೇನೋ ಉಪಾಯ ಮಾಡ್ತಿದ್ದಾರೆ. ಹೋಮ-ಹವನ, ಪೂಜೆ ಅಂತ ದೇವರ ಮೊರೆ ಹೋಗಿದ್ದಾರೆ. ಇದೇ ರೀತಿ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದ ಶ್ರೀಕಾಂತ್ ಬಡಿಗೇರ ಮತ್ತು ರೇವಣ್ಣ ಮಾದರ ಎಂಬುವವರು ಕೊರೊನಾ ತೊಲಗಲಿ ಎಂದು ದೀರ್ಘದಂಡ ನಮಸ್ಕಾರದ ಮೊರೆ ಹೋಗಿದ್ದಾರೆ. ಇಡೀ ಜಗತ್ತನ್ನೇ ಕಾಡುತ್ತಿರುವ ಪೆಡಂಬೂತ […]

ಕೊರೊನಾ ತೊಲಗಿಸಲು ದೀರ್ಘದಂಡ ನಮಸ್ಕಾರ
Follow us on

ಬಾಗಲಕೋಟೆ: ಕೊರೊನಾ ಎಂಬ ಹೆಸರು ಕೇಳಿದ್ರೆ ಸಾಕು ಬೆಚ್ಚಿಬೀಳುವ ಪರಿಸ್ಥಿತಿ ಉಂಟಾಗಿದೆ. ಭೂಮಿಯ ಮೇಲೆಯೇ ನರಕ ತೋರಿಸುತ್ತಿರುವ ಕೊರೊನಾ ಜನರನ್ನು ಬೆನ್ನು ಬಿಡದೆ ಕಾಡುತ್ತಿದೆ. ಕೊರೊನಾವನ್ನು ಹೋಗಲಾಡಿಸಲು ಜನ ಎನೇನೋ ಉಪಾಯ ಮಾಡ್ತಿದ್ದಾರೆ. ಹೋಮ-ಹವನ, ಪೂಜೆ ಅಂತ ದೇವರ ಮೊರೆ ಹೋಗಿದ್ದಾರೆ.

ಇದೇ ರೀತಿ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದ ಶ್ರೀಕಾಂತ್ ಬಡಿಗೇರ ಮತ್ತು ರೇವಣ್ಣ ಮಾದರ ಎಂಬುವವರು ಕೊರೊನಾ ತೊಲಗಲಿ ಎಂದು ದೀರ್ಘದಂಡ ನಮಸ್ಕಾರದ ಮೊರೆ ಹೋಗಿದ್ದಾರೆ.

ಇಡೀ ಜಗತ್ತನ್ನೇ ಕಾಡುತ್ತಿರುವ ಪೆಡಂಬೂತ ಕೊರೊನಾ ತೊಲಗಿಸಲು ಇಬ್ಬರು ವ್ಯಕ್ತಿಗಳು ದೇವರ‌ ಮೊರೆ ಹೋಗಿದ್ದು, ಗ್ರಾಮದ ಹೊರವಲಯದಲ್ಲಿರುವ ಲಕ್ಷ್ಮಿ ದೇವಸ್ಥಾನದವರೆಗೂ ಅಂದರೆ ಸುಮಾರು ಒಂದುವರೆ ಕಿ.ಮೀ ದೀರ್ಘದಂಡ ನಮಸ್ಕಾರ ಹಾಕಿ ದೇವರಿಗೆ ಪ್ರಾರ್ಥನೆ ಮಾಡಿದ್ದಾರೆ. ಕೊರೊನಾ ಓಡಿ ಹೋಗಲಿ ಎಂದು ಲಕ್ಷ್ಮಿ ದೇವಿಗೆ ಕೋರಿಕೊಂಡಿದ್ದಾರೆ.

ಕೊರೊನಾದಿಂದ ದೂರ ಉಳಿಯಲು ನಮಸ್ಕಾರ ಮಾಡಿ ಯರನ್ನೂ ಅಪ್ಪಿಕೊಳ್ಳಬೇಡಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ. ಸರ್ಕಾರದ ಆದೇಶವನ್ನು ಪಾಲಿಸಿ, ಎಲ್ಲರೂ ಮನೆಯಲ್ಲೇ ಇರಿ. ಕೊರೊನಾ ತಡೆಗಟ್ಟುವ ಹೋರಾಟಕ್ಕೆ ಮುಂದಾಗಿ.

Published On - 9:13 am, Fri, 24 April 20