ವಾಟದಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೊತೆ ಪ್ರಧಾನಿ ಮೋದಿ ಇಂದು ಸಂವಾದ

ವಾಟದಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೊತೆ ಪ್ರಧಾನಿ ಮೋದಿ ಇಂದು ಸಂವಾದ

ನವದೆಹಲಿ: ದೇಶಾದ್ಯಂತ ‘ಕೊರೊನಾ’ ಸೋಂಕಿನ ಭೀತಿ ಆವರಿಸಿರುವ ಸಂದರ್ಭದಲ್ಲಿ ಪ್ರಜೆಗಳಿಗೆ ಧೈರ್ಯ ತುಂಬುವ ಕೆಲಸವನ್ನ ದೇಶದ ದೊರೆ ಪ್ರಧಾನಿ ಮೋದಿ ಮಾಡ್ತಿದ್ದಾರೆ. ಮತ್ತೊಂದ್ಕಡೆ ಲಾಕ್​ಡೌನ್ ಇರೋದ್ರಿಂದ ಎಲ್ಲಾ ಸಭೆ, ಸಮಾರಂಭ ಬಂದ್ ಆಗಿದೆ. ಆದ್ರೆ ಈ ದಿನ ದೇಶದಲ್ಲಿ ಪಂಚಾಯತ್ ರಾಜ್ ದಿನಾಚರಣೆ ಆಚರಿಸುವುದು ವಾಡಿಕೆ. ಹೀಗಾಗಿ ಪಿಎಂ ಮೋದಿ ಲಾಕ್​ಡೌನ್​ಗೆ ಸೈಡ್ ಎಫೆಕ್ಟ್ ಆಗದಂತೆ ವಿಶಿಷ್ಟವಾಗಿ ಪಂಚಾಯತ್ ರಾಜ್ ದಿನಾಚರಣೆಗೆ ಸಿದ್ಧರಾಗಿದ್ದಾರೆ.

ಪ್ರಧಾನಿ ಮೋದಿ ಲಾಕ್‌ಡೌನ್ ಘೋಷಿಸಿದ ಬಳಿಕ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಭಾಗವಹಿಸುತ್ತಿಲ್ಲ. ಪ್ರಧಾನಿ ತಾವೇ ಖುದ್ದಾಗಿ ಲಾಕ್‌ಡೌನ್ ನಿಯಮ ಪಾಲಿಸುತ್ತಿದ್ದಾರೆ. ಸಾಮಾಜಿಕ ಅಂತರವನ್ನೂ ಕಾಪಾಡಿಕೊಳ್ತಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಜನರು, ಗಣ್ಯರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ.

ಮತ್ತೊಂದ್ಕಡೆ ಇಂದು ದೇಶಾದ್ಯಂತ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ನಡೆಯಬೇಕಿದೆ. ಸಂವಿಧಾನದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನ ಸೇರ್ಪಡೆಗೊಳಿಸಿದ ನೆನಪಿಗೆ ಪ್ರತಿವರ್ಷ ಏಪ್ರಿಲ್ 24 ರಂದು ಪಂಚಾಯತ್ ರಾಜ್ ದಿನಾಚರಣೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಲಾಕ್​ಡೌನ್ ನಡುವೆಯೂ ಪ್ರಧಾನಿ ಮೋದಿ ವಿಶಿಷ್ಟವಾಗಿ ‘ಪಂಚಾಯತ್ ರಾಜ್ ದಿನಾಚರಣೆ’ಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಲಾಕ್​ಡೌನ್ ಉಲ್ಲಂಘನೆಯಾಗದಂತೆ ಸಿದ್ಧತೆ ಕೈಗೊಳ್ಳಲಾಗಿದೆ.

ಲಾಕ್​ಡೌನ್ ಮಧ್ಯೆ ಗ್ರಾಮಗಳ ಅಭಿವೃದ್ಧಿಗೆ ಒತ್ತು! ಅಂದಹಾಗೆ ಪ್ರಧಾನಿ ಇಂದು ದೇಶಾದ್ಯಂತ ಗ್ರಾಮ ಪಂಚಾಯಿತಿ ಅಧ್ಯಕ್ಷರ ಜೊತೆ ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಲಿದ್ದಾರೆ. ಇದೇ ವೇಳೆ ಗ್ರಾಮಗಳ ಅಭಿವೃದ್ಧಿ ಕುರಿತು ಚರ್ಚೆಯೂ ನಡೆಯಲಿದ್ದು, ‘ಇ-ಗ್ರಾಮ ಸ್ವರಾಜ್’ ಪೋರ್ಟಲ್ ಹಾಗೂ ಮೊಬೈಲ್ ಆ್ಯಪ್ ಅನ್ನ ಪ್ರಧಾನಿ ಲಾಂಚ್ ಮಾಡಲಿದ್ದಾರೆ.

ಕೊರೊನಾ ವಿರುದ್ಧ ಸಮರ: ಗ್ರಾಮೀಣ ಪ್ರದೇಶಗಳನ್ನ ಕೊರೊನಾದಿಂದ ರಕ್ಷಿಸಿ ಸೇಫ್ ಆಗಿಡಲು ಪ್ರಧಾನಿ ಸಲಹೆ ನೀಡಲಿದ್ದಾರೆ. ಇದರ ಜೊತೆಗೆ ಹಳ್ಳಿಗಳಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಸಲಹೆ-ಸೂಚನೆ ನೀಡುವ ಸಾಧ್ಯತೆಯಿದೆ. ಜೊತೆಗೆ ಪಂಚಾಯಿತಿಗಳ ಆಡಳಿತ ಬಲಗೊಳಿಸುವ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಜೊತೆ ಚರ್ಚೆ ನಡೆಯಲಿದೆ.

ಹಳ್ಳಿಗಳಲ್ಲಿ ತಲೆನೋವಾಗಿರುವ ಸರ್ವೆ ಕಾರ್ಯಕ್ಕೆ ಡ್ರೋನ್​ಗಳ ಬಳಕೆ ಕುರಿತು ಮಾಹಿತಿ ಪಿಎಂ ಹಂಚಿಕೊಳ್ಳಲಿದ್ದಾರೆ. ಹಾಗೇ ಕೃಷಿಯಲ್ಲಿ ಅಭಿವೃದ್ಧಿ ಸಾಧಿಸಲು ತಂತ್ರಜ್ಞಾನ ಬಳಕೆ ಬಗೆಗೂ ಪ್ರಧಾನಿ ಚರ್ಚೆ ನಡೆಸುವ ಸಾಧ್ಯತೆ ಇದೆ.

ಮತ್ತೊಂದು ಹೆಮ್ಮೆಯ ವಿಚಾರ ಅಂದ್ರೆ ನಮ್ಮ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಾಟದ ಹೊಸಹಳ್ಳಿ ಗ್ರಾಮಪಂಚಾಯಿತಿಯ ಅಧ್ಯಕ್ಷ ನವೀನ್ ಕುಮಾರ್ ಪ್ರಧಾನಿ ಮೋದಿ ಜೊತೆಗಿನ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಈ ಸಂತಸದ ವಿಚಾರವನ್ನ ನವೀನ್ ಹಂಚಿಕೊಂಡಿದ್ದಾರೆ.

ಒಟ್ನಲ್ಲಿ ಲಾಕ್​ಡೌನ್​ನಿಂದ ಸಂಕಷ್ಟದ ಸ್ಥಿತಿಯಲ್ಲಿರುವ ಹಳ್ಳಿಗಳ ಜನರಿಗೆ ಧೈರ್ಯ ತುಂಬುವ ಕೆಲಸವನ್ನ ಪಿಎಂ ಮೋದಿ ಮಾಡಲಿದ್ದಾರೆ. ಜತೆಗೆ ಕೊರೊನಾ ವಿರುದ್ಧದ ಹೋರಾಟದ ಬಗ್ಗೆಯೂ ಪ್ರಧಾನಿ ಸಲಹೆ-ಸೂಚನೆ ನೀಡಲಿದ್ದು ಇಡೀ ದೇಶದ ಚಿತ್ತ ಇಂದು ಪ್ರಧಾನಿ ಮೋದಿ ನಡೆಯಲಿರುವ ವಿಡಿಯೋ ಕಾನ್ಫರೆನ್ಸ್​ನತ್ತ ನೆಟ್ಟಿದೆ.

Published On - 7:14 am, Fri, 24 April 20

Click on your DTH Provider to Add TV9 Kannada