AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ನಿರ್ವಹಣೆಯಲ್ಲಿ ಮೋದಿಯೇ ನಂಬರ್ ಒನ್! ಟ್ರಂಪ್​ಗೆ ಮೈನಸ್ ಮಾರ್ಕ್ಸ್..

ನವದೆಹಲಿ: ಫೆಬ್ರವರಿ ಹಾಗೂ ಮಾರ್ಚ್​ನಲ್ಲಿ ಕೊರೊನಾದಿಂದ ನೆರೆಯ ಚೀನಾದಲ್ಲಿ ಸಾಲು ಸಾಲು ಹೆಣಗಳು ಬೀಳ್ತಿದ್ವು. ಯಾವಾಗ ನಮ್ಮ ದೇಶಕ್ಕೆ ಮಾರಿ ನುಗ್ಗುತ್ತೋ ಅನ್ನೋ ಭೀತಿ ನಮಗೆಲ್ಲಾ ಒಳಗೊಳಗೆ ಕಾಡೋಕೆ ಶುರುವಾಗಿತ್ತು. ಅಂದುಕೊಂಡಂತೆ ಹೆಮ್ಮಾರಿ ಎಂಟ್ರಿ ಕೊಟ್ಟೇ ಬಿಡ್ತು. ಆದ್ರೆ ಮೋದಿ ಮಾತ್ರ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡ್ರು. ಇದೇ ಕಾರಣಕ್ಕೆ ಕೊರೊನಾ ನಿಯಂತ್ರಿಸುವಲ್ಲಿ ಮೋದಿಯೇ ಬೆಸ್ಟ್ ಅನ್ನೋ ವರದಿ ಹೊರಬಿದ್ದಿದೆ. ಕಿಲ್ಲರ್ ಕೊರೊನಾ.. ಇದ್ರ ಹಾವಳಿಗೆ.. ಇದು ಜೀವ ಹಿಂಡ್ತಿರೋ ಪರಿಗೆ.. ಉಸಿರು ನಿಲ್ಲಿಸಿ ಸಾವಿನ ಕೇಕೆ […]

ಕೊರೊನಾ ನಿರ್ವಹಣೆಯಲ್ಲಿ ಮೋದಿಯೇ ನಂಬರ್ ಒನ್! ಟ್ರಂಪ್​ಗೆ ಮೈನಸ್ ಮಾರ್ಕ್ಸ್..
ಸಾಧು ಶ್ರೀನಾಥ್​
|

Updated on:Apr 23, 2020 | 2:12 PM

Share

ನವದೆಹಲಿ: ಫೆಬ್ರವರಿ ಹಾಗೂ ಮಾರ್ಚ್​ನಲ್ಲಿ ಕೊರೊನಾದಿಂದ ನೆರೆಯ ಚೀನಾದಲ್ಲಿ ಸಾಲು ಸಾಲು ಹೆಣಗಳು ಬೀಳ್ತಿದ್ವು. ಯಾವಾಗ ನಮ್ಮ ದೇಶಕ್ಕೆ ಮಾರಿ ನುಗ್ಗುತ್ತೋ ಅನ್ನೋ ಭೀತಿ ನಮಗೆಲ್ಲಾ ಒಳಗೊಳಗೆ ಕಾಡೋಕೆ ಶುರುವಾಗಿತ್ತು. ಅಂದುಕೊಂಡಂತೆ ಹೆಮ್ಮಾರಿ ಎಂಟ್ರಿ ಕೊಟ್ಟೇ ಬಿಡ್ತು. ಆದ್ರೆ ಮೋದಿ ಮಾತ್ರ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡ್ರು. ಇದೇ ಕಾರಣಕ್ಕೆ ಕೊರೊನಾ ನಿಯಂತ್ರಿಸುವಲ್ಲಿ ಮೋದಿಯೇ ಬೆಸ್ಟ್ ಅನ್ನೋ ವರದಿ ಹೊರಬಿದ್ದಿದೆ.

ಕಿಲ್ಲರ್ ಕೊರೊನಾ.. ಇದ್ರ ಹಾವಳಿಗೆ.. ಇದು ಜೀವ ಹಿಂಡ್ತಿರೋ ಪರಿಗೆ.. ಉಸಿರು ನಿಲ್ಲಿಸಿ ಸಾವಿನ ಕೇಕೆ ಹಾಕ್ತಿರೋ ವೇಗಕ್ಕೆ.. ಪ್ರಪಂಚದ ಶ್ರೀಮಂತ ದೇಶಗಳೇ ಥಂಡಾ ಹೊಡೆದಿವೆ. ದೊಡ್ಡ ದೊಡ್ಡ ನಾಯಕರೇ ಮಾರಿಯ ಅಟ್ಟಹಾಸಕ್ಕೆ ನಲುಗಿ ಹೋಗಿದ್ದಾರೆ. ಕೊರೊನಾ ಸಾವಿನ ಸುಳಿಯಿಂದ ಹೊರಬರಲಾಗದೆ ಒದ್ದಾಡ್ತಿದ್ದಾರೆ. ಆದ್ರೆ ಪ್ರಧಾನಿ ಮೋದಿ ಮಾತ್ರ ಎಲ್ಲರನ್ನ ಸೈಡ್​ಲೈನ್ ಮಾಡಿ ಶಹಬ್ಬಾಶ್ ಅನ್ನಿಸಿಕೊಂಡಿದ್ದಾರೆ.

ಕೊರೊನಾ ನಿರ್ವಹಣೆಯಲ್ಲಿ ಮೋದಿಯೇ ನಂಬರ್ ಒನ್! ಹೌದು, ಮಹಾಮಾರಿ ದೇಶಕ್ಕೆ ದಾಂಗುಡಿ ಇಟ್ಟಿದ್ದೇ ತಡ ಮೋದಿ ಫುಲ್ ಅಲರ್ಟ್ ಆದ್ರು. ಕೈಕಟ್ಟಿ ಕೂತ್ರೆ ಇಂಡಿಯಾ ಮತ್ತೊಂದು ಇಟಲಿ ಆಗೋದ್ರಲ್ಲಿ ಡೌಟೇ ಇಲ್ಲ ಅಂತಾ ಎಚ್ಚರವಹಿಸಿದ್ರು. ಜೀವ ಇದ್ರೆ ಜೀವನ ಆಗಿದ್ದು ಆಗ್ಲಿ ಅಂತಾ ಲಾಕ್​ಡೌನ್ ಘೋಷಣೆ ಮಾಡೇ ಬಿಟ್ರು. ಹೆಜ್ಜೆ ಹೆಜ್ಜೆಗೂ ಹುಷಾರ್ ಆಗಿರುವಂತೆ ದೇಶದ ಜನತೆಗೆ ಮೇಲಿಂದ ಮೇಲೆ ಕರೆ ಕೊಟ್ರು.

ಜೀವ ಉಳೀಬೇಕು ಅಂದ್ರೆ ಮನೇಲೇ ಇರಿ ಅಂದ್ರು. ಇದೇ ರೀತಿ ಒಂದಲ್ಲ, ಎರಡಲ್ಲ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡ್ರು. ಮೋದಿಯ ಇದೇ ಕಾರ್ಯವೈಖರಿಗೆ, ಇದೇ ಮುಂದಾಲೋಚನೆಗೆ ಹಲವು ದೇಶಗಳ ನಾಯಕರು ಭೇಷ್ ಎಂದಿದ್ದಾರೆ. ಕೊರೊನಾವನ್ನ ಸಮರ್ಥವಾಗಿ ನಿಭಾಯಿಸಿದ ವಿಶ್ವದ 10 ನಾಯಕರ ಪಟ್ಟಿಯಲ್ಲಿ ಮೋದಿ ಟಾಪ್ ಒನ್ ಅಲ್ಲಿದ್ರೆ, ವಿಶ್ಚದ ದೊಡ್ಡಣ್ಣ ಟ್ರಂಪ್ ಲಾಸ್ಟ್​ನಲ್ಲಿದ್ದಾರೆ. ಇನ್ನು ಕಳೆದ ಜನವರಿ 1ರಿಂದ ಏಪ್ರಿಲ್ ರವರೆಗಿನ ಜಾಗತಿಕ ವರದಿಗಳನ್ನಾಧರಿಸಿ ಅಮೆರಿಕದ ಮಾರ್ನಿಂಗ್ ಕನ್ಸಲ್ಟ್ ಅನ್ನೋ ಸಂಸ್ಥೆ ಸಮೀಕ್ಷೆ ನಡೆಸಿತ್ತು. ಇದ್ರಲ್ಲಿ ಮೋದಿ 68 ಅಂಕಗಳನ್ನ ಪಡೆದ್ರೆ, ಟ್ರಂಪ್ ಮೈನಸ್ 3 ಅಂಕಗಳನ್ನ ಪಡೆದಿದ್ದಾರೆ.

ಟಾಪ್ 10 ಲೀಡರ್ಸ್!: ಹೆಸರು -ದೇಶ 1. ನರೇಂದ್ರ ಮೋದಿ-ಭಾರತ 2. ಆಂಡ್ರೆಸ್ ಮ್ಯಾನುಯೆಲ್ ಲೊಪೆಜ್ ಒಬ್ರಡಾರ್-ಮೆಕ್ಸಿಕೋ 3. ಬೋರಿಸ್ ಜಾನ್ಸನ್-ಇಂಗ್ಲೆಂಡ್ 4. ಜೈರ್ ಬೋಲ್ಸೊನಾರೋ-ಬ್ರೆಜಿಲ್ 5. ಸ್ಕಾಟ್ ಮಾರಿಸನ್-ಆಸ್ಟ್ರೇಲಿಯಾ 6. ಜಸ್ಟಿನ್ ಟ್ರುಡೊ-ಕೆನಡಾ 7. ಏಂಜೆಲಾ ಮಾರ್ಕೆಲ್-ಜರ್ಮನಿ 8. ಶಿಂಜೋ ಅಬೆ-ಜಪಾನ್ 9. ಇಮ್ಯಾನುಯೆಲ್ ಮ್ಯಾಕ್ರೋನ್-ಫ್ರಾನ್ಸ್ 10.ಡೋನಾಲ್ಡ್ ಟ್ರಂಪ್-ಅಮೆರಿಕ

ಈ ಎಲ್ರ ಪೈಕಿ ಜಪಾನ್ ಪ್ರಧಾನಿ ಶಿಂಜೋ ಅಬೆ, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಹಾಗೂ ಟ್ರಂಪ್ ಮೈನಸ್ ಮಾರ್ಕ್ಸ್ ದೊರೆತಿರೋದು ಅಚ್ಚರಿಗೆ ಕಾರಣವಾಗಿದೆ. ಆದ್ರೆ ಇತ್ತ ಪ್ರಧಾನಿ ಮೋದಿ ಅಗ್ರಸ್ಥಾನ ಪಡೆದಿರೋ ಬಗ್ಗೆ ಹಣಸಾಕು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ಹಂಚಿಕೊಂಡಿದ್ದಾರೆ. ಮೋದಿ ನೇತೃತ್ವದಲ್ಲಿ ಕೊರೊನಾ ಗೆಲ್ಲೋದು ಶತಸಿದ್ಧ ಅಂದಿದ್ದಾರೆ. ಜೊತೆಗೆ ಭಾರತಕ್ಕೆ ತನ್ನ ನಾಯಕನ ಮೇಲೆ ಸಂಪೂರ್ಣ ಭರವಸೆ ಇದೆ, ಎಲ್ರೂ ಒಟ್ಟಾಗಿ ಈ ನೆಲದಿಂದ ಕೊರಿನಾವನ್ನ ಒದ್ದೊಡಿಸ್ತೇವೆ ಎಂದಿದ್ದಾರೆ.

ಒಟ್ನಲ್ಲಿ ಕಿಲ್ಲರ್ ಕೊರೊನಾ ಮಣಿಸಲು ಮೋದಿ ತೆಗೆದುಕೊಂಡಿರೋ ಕ್ರಮಗಳು ಪ್ರಪಂಚದೆಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿವೆ. ಹೀಗಾಗಿಯೇ ಸದ್ಯ ಪ್ರಧಾನಿ ಎಲ್ಲರಿಂದ ಶಹಬ್ಬಾಶ್ ಅನ್ನಿಸಿಕೊಂಡಿದ್ದಾರೆ. ಆದ್ರೆ ಮುಂಬರುವ ದಿನಗಳು ಕಷ್ಟಕರವಾಗಲಿದೆ ಅದನ್ನ ಹೇಗೆ ನಿಭಾಯಿಸ್ತಾರೆ ಅನ್ನೋದೇ ಯಕ್ಷ ಪ್ರಶ್ನೆ.

Published On - 2:10 pm, Thu, 23 April 20