ಕೊರೊನಾ ಅಟ್ಟಹಾಸದ ನಡುವೆ ವಿಶ್ವ ಸಂಸ್ಥೆಯಿಂದ ಹೊರ ಬಿತ್ತು ಶಾಕಿಂಗ್ ನ್ಯೂಸ್

ಕೊರೊನಾ ಅಟ್ಟಹಾಸದ ನಡುವೆ ವಿಶ್ವ ಸಂಸ್ಥೆಯಿಂದ ಹೊರ ಬಿತ್ತು ಶಾಕಿಂಗ್ ನ್ಯೂಸ್

ನವದೆಹಲಿ: ಜಗತ್ತಿನಾದ್ಯಂತ ಕೊರೊನಾ ಅಟ್ಟಹಾಸದ ನಡುವೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಶಾಕಿಂಗ್ ನ್ಯೂಸ್ ಒಂದು ಹೊರ ಬಿದ್ದಿದೆ. ಹೆಮ್ಮಾರಿ ಕೊರೊನಾ ವೈರಸ್ ಜಗತ್ತನ್ನ ಮತ್ತಷ್ಟು ದೀರ್ಘಕಾಲದವರೆಗೂ ಕಾಡಲಿದೆಯಂತೆ. ಯಾವುದೇ ತಪ್ಪು ಮಾಡಬೇಡಿ, ನಿರ್ಲಕ್ಷ್ಯ ಬೇಡ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್‌ ಅಧಾನಾಮ್‌ ಗೆಬ್ರಿಯೆಸಸ್ ಎಚ್ಚರಿಕೆ ನೀಡಿದ್ದಾರೆ.

ಬಹಳಷ್ಟು ದೇಶಗಳು ಸಾಂಕ್ರಾಮಿಕ ರೋಗದ ಆರಂಭಿಕ ಹಂತದಲ್ಲಿವೆ. ಕೆಲ ರಾಷ್ಟ್ರಗಳು ಕೊರೊನಾ ನಿಯಂತ್ರಣದಲ್ಲಿದೆ ಎಂದು ಭಾವಿಸಿವೆ. ಆಫ್ರಿಕಾ, ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಆಫ್ರಿಕಾ, ದಕ್ಷಿಣ ಅಮೆರಿಕ, ಪೂರ್ವ ಯುರೋಪ್‌ನಲ್ಲಿ ಸೋಂಕಿನ ವೇಗ ಹೆಚ್ಚಿದೆ. ವೇಗವಾಗಿ ಕೊರೊನಾ ಸೋಂಕು ಹರಡುತ್ತಿರುವುದು ಆತಂಕ ಸೃಷ್ಟಿಸಿದೆ ಎಂದು WHO ತಿಳಿಸಿದೆ.

Click on your DTH Provider to Add TV9 Kannada