ಸರ್ಕಾರದ ನಿರ್ಧಾರಕ್ಕೆ ಕುಮಾರಸ್ವಾಮಿ ಕೆಂಡಾಮಂಡಲ, ಉಗ್ರ ಹೋರಾಟ ಎಚ್ಚರಿಕೆ
ಬೆಂಗಳೂರು: ಪಾದರಾಯನಪುರ ಪುಂಡರನ್ನ ರಾಮನಗರಕ್ಕೆ ಶಿಫ್ಟ್ ಮಾಡಿರೋ ಬಗ್ಗೆ ಕುಮಾರಸ್ವಾಮಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ರು. ಟಿವಿ9 ಜೊತೆ ಮಾತನಾಡಿದ ಹೆಚ್ಡಿಕೆ, ಪಾದರಾಯನಪುರದ ಆರೋಪಿಗಳಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಜೈಲಿನಲ್ಲಿ ಕೆಲಸ ಮಾಡಿದ ಅಧಿಕಾರಿಗಳು ಕೂಡ ಕ್ವಾರಂಟೈನ್ಲಿರಬೇಕೆಂದು ಮನವಿ ಮಾಡಿದ್ರು. ಜೊತೆಗೆ ಜಿಲ್ಲೆಯ ಜನರು ಭಯಪಡುವ ಅಗತ್ಯವಿಲ್ಲ. ಯಾರ ಸಲಹೆ ಕೇಳಿ ಈ ನಿರ್ಧಾರ ಕೈಗೊಂಡ್ರೋ ಗೊತ್ತಿಲ್ಲ ಅಂತಾ ಕಿಡಿಕಾರಿದ್ರು. ಆರೋಪಿಗಳನ್ನ ಸ್ಥಳಾಂತರಿಸದಿದ್ದರೆ ಉಗ್ರ ಹೋರಾಟ! ಇದಿಷ್ಟೇ ಅಲ್ಲದೆ, ರಾಮನಗರದ ಜೈಲಿನಲ್ಲಿರೋ ಆರೋಪಿಗಳನ್ನ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಶಿಫ್ಟ್ […]
ಬೆಂಗಳೂರು: ಪಾದರಾಯನಪುರ ಪುಂಡರನ್ನ ರಾಮನಗರಕ್ಕೆ ಶಿಫ್ಟ್ ಮಾಡಿರೋ ಬಗ್ಗೆ ಕುಮಾರಸ್ವಾಮಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ರು. ಟಿವಿ9 ಜೊತೆ ಮಾತನಾಡಿದ ಹೆಚ್ಡಿಕೆ, ಪಾದರಾಯನಪುರದ ಆರೋಪಿಗಳಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಜೈಲಿನಲ್ಲಿ ಕೆಲಸ ಮಾಡಿದ ಅಧಿಕಾರಿಗಳು ಕೂಡ ಕ್ವಾರಂಟೈನ್ಲಿರಬೇಕೆಂದು ಮನವಿ ಮಾಡಿದ್ರು. ಜೊತೆಗೆ ಜಿಲ್ಲೆಯ ಜನರು ಭಯಪಡುವ ಅಗತ್ಯವಿಲ್ಲ. ಯಾರ ಸಲಹೆ ಕೇಳಿ ಈ ನಿರ್ಧಾರ ಕೈಗೊಂಡ್ರೋ ಗೊತ್ತಿಲ್ಲ ಅಂತಾ ಕಿಡಿಕಾರಿದ್ರು.
ಆರೋಪಿಗಳನ್ನ ಸ್ಥಳಾಂತರಿಸದಿದ್ದರೆ ಉಗ್ರ ಹೋರಾಟ! ಇದಿಷ್ಟೇ ಅಲ್ಲದೆ, ರಾಮನಗರದ ಜೈಲಿನಲ್ಲಿರೋ ಆರೋಪಿಗಳನ್ನ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಶಿಫ್ಟ್ ಮಾಡ್ಬೇಕು, ಇಲ್ಲದಿದ್ರೆ ಇಂದಿನಿಂದ್ಲೇ ಉಗ್ರ ಹೋರಾಟ ಮಾಡ್ತೇನೆ ಎಂದು ಹೆಚ್ಡಿಕೆ ಟ್ವಿಟ್ಟರ್ನಲ್ಲಿ ಗುಡುಗಿದ್ದಾರೆ.
ರಾಮನಗರ ಕಾರಾಗೃಹದಲ್ಲಿ ಇರಿಸಲಾಗಿದ್ದ ಪಾದರಾಯನಪುರದ ಗಲಭೆಕೋರರ ಪೈಕಿ ಇಬ್ಬರಿಗೆ ಕೊರೋನಾ ವೈರಸ್ ತಗುಲಿರುವ ಪಾಸಿಟಿವ್ ವರದಿ ಬಂದಿದೆ. ರಾಮನಗರ ಜೈಲಿನಲ್ಲಿ ಇರಿಸಲಾಗಿರುವ ಕೈದಿಗಳನ್ನು ಸಕಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತಕ್ಷಣವೇ ಸ್ಥಳಾಂತರಿಸದಿದ್ದರೆ ನಾಳೆಯಿಂದ ಉಗ್ರ ಪ್ರತಿಭಟನೆ ಮಾಡುತ್ತೇನೆ.1/5
— H D Kumaraswamy (@hd_kumaraswamy) April 23, 2020
ಇತ್ತ ರಾಜ್ಯ ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ್, ಪಾದರಾಯನಪುರ ಗಲಾಟೆ ಕೇಸ್ನಲ್ಲಿ ಅರೆಸ್ಟ್ ಮಾಡಿರೋರನ್ನ ರಾಮನಗರಕ್ಕೆ ಶಿಫ್ಟ್ ಮಾಡದಂತೆ ಗೃಹಸಚಿವರಿಗೆ ಪತ್ರ ಬರೆದಿದ್ರು. ಆದ್ರೆ ಬಸವರಾಜ ಬೊಮ್ಮಾಯಿ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.
ಒಟ್ನಲ್ಲಿ ಸರ್ಕಾರದ ಎಡವಟ್ಟೋ, ಅಥವಾ ಆತುರದ ನಿರ್ಧಾರವೋ ಗೊತ್ತಿಲ್ಲ ಆದ್ರೆ ಗ್ರೀನ್ ಜೋನ್ನಲ್ಲಿರೋ ರಾಮನಗರ ಜಿಲ್ಲೆಯಲ್ಲೀಗ ಸೋಂಕು ಬಂದಿರೋದು ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಎಲ್ಲಾ ಆರೋಪಿಗಳನ್ನ ಬೇರೆಡೆಗೆ ಶಿಫ್ಟ್ ಮಾಡ್ಬೇಕು ಅನ್ನೋ ಕೂಗು ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತೋ ಕಾದು ನೋಡ್ಬೇಕಿದೆ.
Published On - 10:52 am, Fri, 24 April 20