ತುಂಬಿ ಹರಿಯುವ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದವರನ್ನ ರಕ್ಷಿಸಿದ ಗ್ರಾಮಸ್ಥರು

ಕಲುಬುರಗಿ: ಹಳ್ಳ ತುಂಬಿ ಹರಿಯುತ್ತಿದ್ದರೂ ಅದರಲ್ಲಿಯೇ ಸೇತುವೆ ದಾಟಲು ಹೋದ ಭಂಡ ಜನರು ನೀರಿನಲ್ಲಿ ಕೊಚ್ಚಿಹೊದ ಘಟನೆ ಕಲುಬುರಗಿ ಜಿಲ್ಲೆಯಲ್ಲಿ ಸಂಭವಿಸಿದೆ. ಹೌದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದ ಹೊರವಲಯದಲಿರುವ ಹಳ್ಳ, ಸುರಿದ ಭಾರೀ ಮಳೆಗೆ ತುಂಬಿ ಹರಿಯುತ್ತಿದೆ. ಅದ್ಯಾವ ಮಟ್ಟಿಗೆ ಅಂದ್ರೆ ನೀರು ಸೇತುವೆ ಮೇಲಿಂದಲೇ ಹರಿಯುತ್ತಿದೆ. ಆದ್ರೂ ಐದು ಜನರಿದ್ದ ವಾಹನವೊಂದು ಹರಿಯುವ ನೀರಿನಲ್ಲಿಯೇ ಸೇತುವೆ ದಾಟಲು ಮುಂದಾಗಿದೆ. ಆದ್ರೆ ಹಳ್ಳದ ರಭಸಕ್ಕೆ ಸಿಲುಕಿ ವಾಹನ ಕೊಚ್ಚಿಕೊಂಡು ಹೋಗಿದೆ. ಇದನ್ನು ಗಮನಿಸುತ್ತಿದ್ದ […]

ತುಂಬಿ ಹರಿಯುವ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದವರನ್ನ ರಕ್ಷಿಸಿದ ಗ್ರಾಮಸ್ಥರು
Edited By:

Updated on: Jul 26, 2020 | 2:04 AM

ಕಲುಬುರಗಿ: ಹಳ್ಳ ತುಂಬಿ ಹರಿಯುತ್ತಿದ್ದರೂ ಅದರಲ್ಲಿಯೇ ಸೇತುವೆ ದಾಟಲು ಹೋದ ಭಂಡ ಜನರು ನೀರಿನಲ್ಲಿ ಕೊಚ್ಚಿಹೊದ ಘಟನೆ ಕಲುಬುರಗಿ ಜಿಲ್ಲೆಯಲ್ಲಿ ಸಂಭವಿಸಿದೆ.

ಹೌದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದ ಹೊರವಲಯದಲಿರುವ ಹಳ್ಳ, ಸುರಿದ ಭಾರೀ ಮಳೆಗೆ ತುಂಬಿ ಹರಿಯುತ್ತಿದೆ. ಅದ್ಯಾವ ಮಟ್ಟಿಗೆ ಅಂದ್ರೆ ನೀರು ಸೇತುವೆ ಮೇಲಿಂದಲೇ ಹರಿಯುತ್ತಿದೆ. ಆದ್ರೂ ಐದು ಜನರಿದ್ದ ವಾಹನವೊಂದು ಹರಿಯುವ ನೀರಿನಲ್ಲಿಯೇ ಸೇತುವೆ ದಾಟಲು ಮುಂದಾಗಿದೆ. ಆದ್ರೆ ಹಳ್ಳದ ರಭಸಕ್ಕೆ ಸಿಲುಕಿ ವಾಹನ ಕೊಚ್ಚಿಕೊಂಡು ಹೋಗಿದೆ.

ಇದನ್ನು ಗಮನಿಸುತ್ತಿದ್ದ ಸ್ಥಳೀಯ ಬಡದಾಳು ಗ್ರಾಮಸ್ಥರು ತಕ್ಷಣವೆ ಕಾರ್ಯಪ್ರವರ್ತರಾಗಿದ್ದಾರೆ. ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವಾಹನವನ್ನು ಜೀವದ ಹಂಗು ತೊರೆದು ಹಗ್ಗ ಸಹಾಯದಿಂದ ರಕ್ಷಿಸಿದ್ದಾರೆ. ಬಡದಾಳು ಗ್ರಾಮಸ್ಥರ ಈ ಧೈರ್ಯ, ಸಾಹಸಕ್ಕೆ ಈಗ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Published On - 5:29 pm, Sat, 25 July 20