AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ವಿರುದ್ಧ ಭಾರತದ ಮೊದಲ ಅಸ್ತ್ರ ಪ್ರಯೋಗವಾಯ್ತು! ಯಾರು ಆ ವ್ಯಕ್ತಿ?

ನವದೆಹಲಿ: ಕೋವಿಡ್‌ 19 ವೈರಸ್‌ಗೆ ಭಾರತದಲ್ಲಿಯೇ ತಯಾರಿಸಲಾದ ಕೋವಾಕ್ಸಿನ್‌ ಲಸಿಕೆಯ ಮೊದಲ ಹಂತದ ಮಾನವ ಪರೀಕ್ಷೆ ಶುಕ್ರವಾರ ಆರಂಭಗೊಂಡಿದೆ. ಮೊದಲ ಹಂತವಾಗಿ ದೆಹಲಿಯ ಎಐಐಎಂಎಸ್‌ ನಲ್ಲಿ ಹತ್ತು ಜನರ ಮೇಲೆ ಲಸಿಕೆಯನ್ನ ಪ್ರಯೋಗ ಮಾಡಲಾಗಿದೆ. ಹೌದು ನವದೆಹಲಿಯ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ನಲ್ಲಿ ಮಾನವನ ಮೇಲಿನ ಲಸಿಕೆಯ ಪ್ರಯೋಗ ಆರಂಭಗೊಂಡಿದ್ದು, 30 ವರ್ಷದ ವ್ಯಕ್ತಿಯೊರ್ವನಿಗೆ ಲಸಿಕೆಯನ್ನು ನೀಡುವ ಮೂಲಕ ಮೊದಲ ಹೆಜ್ಜೆ ಇಡಲಾಗಿದೆ. ಮೊದಲ ಹಂತವಾಗಿ ಹತ್ತು ಜನರ ಮೇಲೆ ಈ ಔಷಧದ […]

ಕೊರೊನಾ ವಿರುದ್ಧ ಭಾರತದ ಮೊದಲ ಅಸ್ತ್ರ ಪ್ರಯೋಗವಾಯ್ತು! ಯಾರು ಆ ವ್ಯಕ್ತಿ?
Guru
| Updated By: |

Updated on:Jul 26, 2020 | 2:08 AM

Share

ನವದೆಹಲಿ: ಕೋವಿಡ್‌ 19 ವೈರಸ್‌ಗೆ ಭಾರತದಲ್ಲಿಯೇ ತಯಾರಿಸಲಾದ ಕೋವಾಕ್ಸಿನ್‌ ಲಸಿಕೆಯ ಮೊದಲ ಹಂತದ ಮಾನವ ಪರೀಕ್ಷೆ ಶುಕ್ರವಾರ ಆರಂಭಗೊಂಡಿದೆ. ಮೊದಲ ಹಂತವಾಗಿ ದೆಹಲಿಯ ಎಐಐಎಂಎಸ್‌ ನಲ್ಲಿ ಹತ್ತು ಜನರ ಮೇಲೆ ಲಸಿಕೆಯನ್ನ ಪ್ರಯೋಗ ಮಾಡಲಾಗಿದೆ.

ಹೌದು ನವದೆಹಲಿಯ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ನಲ್ಲಿ ಮಾನವನ ಮೇಲಿನ ಲಸಿಕೆಯ ಪ್ರಯೋಗ ಆರಂಭಗೊಂಡಿದ್ದು, 30 ವರ್ಷದ ವ್ಯಕ್ತಿಯೊರ್ವನಿಗೆ ಲಸಿಕೆಯನ್ನು ನೀಡುವ ಮೂಲಕ ಮೊದಲ ಹೆಜ್ಜೆ ಇಡಲಾಗಿದೆ. ಮೊದಲ ಹಂತವಾಗಿ ಹತ್ತು ಜನರ ಮೇಲೆ ಈ ಔಷಧದ ಪ್ರಯೋಗ ಮಾಡಲಾಗುತ್ತಿದೆ. ಇದಾದ ನಂತರ ಒಂದು ನೂರು ಜನರ ಮೇಲೆ ಕೋವಾಕ್ಸಿನ್‌ ಅನ್ನು ಪ್ರಯೋಗ ಮಾಡಲಾಗುವುದು.

ಡ್ರಗ್‌ ಕಂಟ್ರೋಲರ್‌ ಆಫ್‌ ಇಂಡಿಯಾ ಅವರಿಂದ ಅನುಮತಿ ಹೈದ್ರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಕಂಪನಿ, ಐಸಿಎಂಆರ್‌ ಮತ್ತು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿಯ ಸಹಯೋಗದೊಂದಿಗೆ ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ. ಇದರ ಮಾನವ ಪ್ರಯೋಗಕ್ಕಾಗಿ ಇತ್ತೀಚೆಗೆ ಡ್ರಗ್‌ ಕಂಟ್ರೋಲರ್‌ ಆಫ್‌ ಇಂಡಿಯಾ ಅವರಿಂದ ಅನುಮತಿ ಪಡೆಯಲಾಗಿತ್ತು. ನಂತರ ಮಾನವ ಪ್ರಯೋಗಕ್ಕೆ ದೆಹಲಿಯ ಏಐಐಎಂಎಸ್‌ ಸೇರಿದಂತೆ ಭಾರತದ 12 ವೈದ್ಯಕೀಯ ಮಹಾವಿದ್ಯಾಲಯಗಳನ್ನು ಆಯ್ಕೆ ಮಾಡಲಾಗಿತ್ತು.

ಆರೋಗ್ಯವಂತರ ಮೇಲೆ ಮಾತ್ರ ಪ್ರಯೋಗ ಈಗ ಆಯ್ಕೆಯಾದ ಈ 12 ವೈದ್ಯಕೀಯ ಸಂಸ್ಥೆಗಳಲ್ಲಿ ಪ್ರಯೋಗ ಆರಂಭಗೊಂಡಿದೆ. ಮೊದಲ ಹಂತದಲ್ಲಿ 18ರಿಂದ 55 ವರ್ಷದೊಳಗಿನ ಆರೋಗ್ಯವಂತರ ಮೇಲೆ ಕೋವಾಕ್ಸಿನ್‌ ಪ್ರಯೋಗ ನಡೆಯಲಿದೆ. ಇವರಲ್ಲಿ ಯಾರಿಗೂ ಬೇರಾವುದೇ ಕಾಯಿಲೆ ಇರಬಾರದು. ಹಾಗೇನೆ ಗರ್ಭವತಿಯರಿಗೂ ಅವಕಾಶವಿಲ್ಲ.

ಇದಾದ ನಂತರ ಎರಡನೇ ಹಂತದಲ್ಲಿ 12ರಿಂದ 65 ವರ್ಷದೊಳಗಿನ 750 ಆರೋಗ್ಯವಂತರ ಮೇಲೆ ಈ ಔಷಧವನ್ನು ಪ್ರಯೋಗಿಸಲಾಗುವುದು. ಈ ಎರಡು ಹಂತಗಳ ಪ್ರಯೋಗಳ ಫಲಿತಾಂಶವನ್ನ ಅವಲೋಕಿಸಿ ಮೂರನೇ ಹಂತದಲ್ಲಿ ದೊಡ್ಡ ಪ್ರಮಾಣದಲ್ಲಿ ಮಾನವ ಪ್ರಯೋಗ ನಡೆಯಲಿದೆ.

Published On - 5:04 pm, Sat, 25 July 20