ಹುಬ್ಬಳ್ಳಿ: ತನ್ನ ಹೆಂಡತಿ ಮೃತಪಟ್ಟಿದ್ದಾಳೆ ಎಂದು ನಂಬಿಸಿ, ಈಗಾಗಲೆ ಮದುವೆಯಾಗಿದ್ದ ಮಹಿಳೆಯಿಂದ ಆಕೆಯ ಗಂಡನಿಗೆ ಡೈವೋರ್ಸ್ ಕೊಡಿಸಿ. ಎರಡನೇ ಮದುವೆಯಾಗಿ ಹೇಳಿ, ಮದುವೆಯಾದವಳ ಬಳಿ ಲಕ್ಷ ಲಕ್ಷ ಹಣ ಲಪಟಾಯಿಸಿದ. ವಂಚನೆ ತಿಳಿದು ಹಣ ವಾಪಸ್ ಕೇಳಿದಾಗ ಆತ ಮತ್ತು ಆತನ ಮೊದಲನೇ ಹೆಂಡತಿಯ ಮಕ್ಕಳು ಸೇರಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿರುವ ಆರೋಪ ಹುಬ್ಬಳ್ಳಿ ನಗರದ ಬಿಜೆಪಿ ಮುಖಂಡನ ಮೇಲೆ ಕೇಳಿಬಂದಿದೆ.
ಮಹಿಳೆಯನ್ನು ನೆಲಕ್ಕೆ ಬೀಳಿಸಿ, ಕೂದಲು ಎಳೆದು ಥಳಿತ ಹುಬ್ಬಳ್ಳಿಯ ವಿದ್ಯಾನಗರದ ಅಕ್ಷಯ ಕಾಲೋನಿಯ ಬಸವರಾಜ್ ಕೆಲಗೇರಿ ಎಂಬಾತ ಈಗಾಗಲೇ ಮದುವೆಯಾಗಿದ್ದು, ಆತನ ಪತ್ನಿ ಹಾಗೂ ಇಬ್ಬರು ಮಕ್ಕಳು ಜೀವಂತವಾಗಿದ್ದರೂ ಸಹ ವಿವಾಹಿತ ಮಹಿಳೆಯನ್ನು ಪ್ರೀತಿ ಮಾಡುವುದಾಗಿ ನಂಬಿಸಿ, ತನ್ನ ಹೆಂಡತಿ ಈಗಾಗಲೇ ಮೃತಪಟ್ಟಿದ್ದು ನಿನ್ನನ್ನು ಎರಡನೇ ಮದುವೆಯಾಗುವುದಾಗಿ ಹೇಳಿ ಆಕೆಯಿಂದ ಲಕ್ಷ ಲಕ್ಷ ಹಣವನ್ನು ಲಪಟಾಯಿಸಿ, ಹಣವನ್ನು ವಾಪಸ್ ಕೇಳಲು ಹೋದಾಗ ಬಸವರಾಜ್ ಕೆಲಗೇರಿ ಹಾಗೂ ಆತನ ಮಕ್ಕಳು ಸೇರಿ ಈ ಮಹಿಳೆಯನ್ನು ಥಳಿಸಿದ್ದಾರೆ.
ರಾಜಕಾರಣಿಗಳ ಒತ್ತಡಕ್ಕೆ ಮಣಿದು ಬಂಧಿಸದ ಆರೋಪ
ಸದ್ಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ, ಬಸವರಾಜ್ ಸ್ಥಳೀಯ ಬಿಜೆಪಿ ಮುಖಂಡನಾಗಿದ್ದು, ರಾಜಕೀಯ ಒತ್ತಡಕ್ಕೆ ಮಣಿದ ಪೊಲೀಸರು ಆರೋಪಿಯನ್ನು ಇನ್ನು ಬಂಧಿಸಿಲ್ಲವೆಂದು ನೊಂದ ಮಹಿಳೆ ಪೊಲೀಸರ ಮೇಲೆ ಆರೋಪಿಸಿದ್ದಾರೆ.
2012ರಲ್ಲಿ ಮನೆಯಲ್ಲಿಯೇ ಸಂತ್ರಸ್ತ ಮಹಿಳೆಯನ್ನ 2ನೇ ಮದುವೆಯಾಗಿದ್ದ ಬಸವರಾಜನ ಮೋಸದಾಟವನ್ನು ಅರಿಯದ ಮಹಿಳೆ ತನ್ನ ಬಳಿ ಇದ್ದ ಸೈಟ್ ಮಾರಿ 25 ಲಕ್ಷ ಹಣವನ್ನು ಆತನಿಗೆ ನೀಡಿ ಈಗ ವಂಚನೆಗೊಳಗಾಗಿದ್ದಾಳೆ. ಜೊತೆಗೆ ಈಗಾಗಲೇ ಮದುವೆಯಾಗಿದ್ದ ಗಂಡನಿಗೆ ಡೈವೋರ್ಸ್ ಕೊಟ್ಟಿದ್ದ ಈ ಮಹಿಳೆ ಈತನಿಗಾಗಿ ಗಂಡನನ್ನು ದೂರ ಮಾಡಿಕೊಂಡಿದ್ದು ಈಗ ದಿಕ್ಕು ತೋಚದ ಸ್ಥಿತಿಯಲ್ಲಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.