ಮೃತಪಟ್ಟ ಮಾವನ ನೋಡಲು ಬಂದಿದ್ದ ಯುವಕ ಅಪಘಾತದಿಂದ ಸಾವು, ಎಲ್ಲಿ?

ಮೃತಪಟ್ಟ ಮಾವನ ನೋಡಲು ಬಂದಿದ್ದ ಯುವಕ ಅಪಘಾತದಿಂದ ಸಾವು, ಎಲ್ಲಿ?

ಬೆಂಗಳೂರು: ಅನಾರೋಗ್ಯದಿಂದ ಸಾವನಪ್ಪಿದ ಮಾವನನ್ನು ನೋಡಲು ಹೊರಟಿದ್ದ ಯುವಕನಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಇಂದು ನಗರದಲ್ಲಿ ನಡೆದಿದೆ. ನಗರದ ಅರಕೆರೆ ನಿವಾಸಿಯಾಗಿರುವ ಮಹೇಶ್ (21)ಮೃತ ದುರ್ದೈವಿ ಯಾಗಿದ್ದು, ಮೃತ ಯುವಕ ಖಾಸಗಿ ಕಂಪನಿಯಲ್ಲಿ ಫೀಲ್ಡ್ ವರ್ಕ್ ಕೆಲಸಮಾಡುತ್ತಿದ್ದ ಎನ್ನಲಾಗಿದೆ. ನೆಲಮಂಗಲದಲ್ಲಿ ವಾಸವಾಗಿದ್ದ ಮಹೇಶನ ಮಾವ ಅನಾರೋಗ್ಯ ಕಾರಣದಿಂದ ಸಾವನ್ನಪ್ಪಿದ್ದು ಇಂದು ಮೃತ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಹೊರಟಿದ್ದ ಯುವಕನ ದ್ವಿಚಕ್ರವಾಹನಕ್ಕೆ ನೈಸ್ ರಸ್ತೆಯ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ […]

sadhu srinath

| Edited By:

Jul 26, 2020 | 1:57 AM

ಬೆಂಗಳೂರು: ಅನಾರೋಗ್ಯದಿಂದ ಸಾವನಪ್ಪಿದ ಮಾವನನ್ನು ನೋಡಲು ಹೊರಟಿದ್ದ ಯುವಕನಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಇಂದು ನಗರದಲ್ಲಿ ನಡೆದಿದೆ.

ನಗರದ ಅರಕೆರೆ ನಿವಾಸಿಯಾಗಿರುವ ಮಹೇಶ್ (21)ಮೃತ ದುರ್ದೈವಿ ಯಾಗಿದ್ದು, ಮೃತ ಯುವಕ ಖಾಸಗಿ ಕಂಪನಿಯಲ್ಲಿ ಫೀಲ್ಡ್ ವರ್ಕ್ ಕೆಲಸಮಾಡುತ್ತಿದ್ದ ಎನ್ನಲಾಗಿದೆ. ನೆಲಮಂಗಲದಲ್ಲಿ ವಾಸವಾಗಿದ್ದ ಮಹೇಶನ ಮಾವ ಅನಾರೋಗ್ಯ ಕಾರಣದಿಂದ ಸಾವನ್ನಪ್ಪಿದ್ದು ಇಂದು ಮೃತ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಹೊರಟಿದ್ದ ಯುವಕನ ದ್ವಿಚಕ್ರವಾಹನಕ್ಕೆ ನೈಸ್ ರಸ್ತೆಯ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮಹೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಡಿಕ್ಕಿಯ ರಭಸಕ್ಕೆ ದ್ವಿಚಕ್ರವಾಹನ ನಜ್ಜುಗುಜ್ಜಾಗಿದೆ. ಸದ್ಯ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada