
ಬೆಂಗಳೂರು: ವೀಕೆಂಡ್ ಬಂತೆಂದರೆ ಬೆಂಗಳೂರು ತೊರೆಯುವವರ ಸಂಖ್ಯೆ ಹೆಚ್ಚಾಹುತ್ತದೆ. ಈ ವಾರಂತ್ಯದಲ್ಲಿ ಸಹ ಬೆಂಗಳೂರು ತೊರೆಯುವವರ ಸರದಿ ಮುಂದುವರೆದಿದೆ.
ಕೊರೊನಾ ಹಾವಳಿಯಿಂದ ಬೇಸತ್ತಿರುವ ನಗರದ ಜನ ಬೆಂಗಳೂರು ತೊರೆದು ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಹೀಗೆ ಬೆಂಗಳೂರು ತೊರೆದು ಹೋಗುವವರ ಸಂಖ್ಯೆ ವೀಕೆಂಡ್ ದಿನಗಳಲ್ಲಿ ಹೆಚ್ಚಾಗಿದ್ದು, ಇದರ ಪರಿಣಾಮದಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ.
ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ 4ರ ನವಯುಗ ಟೋಲ್ ಬಳಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ವಾಹನ ಸವಾರರು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ನರಳಾಡುವ ಪರಿಸ್ಥಿತಿ ಎದುರಾಗಿದೆ.