AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಲಹಂಕ ಭೂಗಳ್ಳರ ವಿರುದ್ಧ ಗುಡುಗಿದ ತಹಶೀಲ್ದಾರ್​: ಒತ್ತುವರಿ ತೆರವು

ಬೆಂಗಳೂರು: ಚಿನ್ನಕ್ಕಿಂತ ಬಲು ಭಾರ ದೇವನಹಳ್ಳಿ, ಯಲಹಂಕ ಸುತ್ತಮುತ್ತಲ ಭೂಭಾಗ. ಅಲ್ಲಿ ವಿಮಾನ ನಿಲ್ದಾಣ ತಲೆಯೆತ್ತಿದ್ದೇ ಭೂಮಿಯ ಬೆಲೆ ಆಕಾಶಕ್ಕೆ ನೆಗೆದುಬಿಟ್ಟಿತು. ಆಗ ಬಿತ್ತು ನೋಡಿ ಅದರ ಮೇಲೆ ಭೂಗಳ್ಳರ ಕಣ್ಣು. ಸರ್ಕಾರದ್ದಾದರೇನು, ಯಾರದೋ ಅಮಾಯಕ ಜನರ ಭೂಮಿಯಾದರೇನು? ಅದಕ್ಕೆ ಬೇಲಿ ಸುತ್ತಿ ಕಬ್ಜಾಗೆ ತೆಗೆದುಕೊಳ್ಳುವುದೇ ಈ ಭೂಗಳ್ಳರ ಸಂಚು. ಇದರಲ್ಲಿ ಬಹುತೇಕ ಬಾರಿ ಭೂಗಳ್ಳರು ಯಶಸ್ವಿಯಾಗಿದ್ದಾರೆ ಎಂಬುದಕ್ಕೆ ಅನೇಕ ಸಾಕ್ಷ್ಯಗಳಿವೆ.  ಆದ್ರೆ ಅದಕ್ಕೆ ಆಗಾಗ ಕಡಿವಾಣವೂ ಬೀಳುತ್ತಿರುತ್ತದೆ. ಇಂತಹ ಪ್ರಕರಣ ಇಲ್ಲಿ ವರದಿಯಾಗಿದೆ. ಅದೇನು ಅಂದ್ರೆ, […]

ಯಲಹಂಕ ಭೂಗಳ್ಳರ ವಿರುದ್ಧ ಗುಡುಗಿದ ತಹಶೀಲ್ದಾರ್​: ಒತ್ತುವರಿ ತೆರವು
KUSHAL V
| Edited By: |

Updated on: Aug 08, 2020 | 10:54 AM

Share

ಬೆಂಗಳೂರು: ಚಿನ್ನಕ್ಕಿಂತ ಬಲು ಭಾರ ದೇವನಹಳ್ಳಿ, ಯಲಹಂಕ ಸುತ್ತಮುತ್ತಲ ಭೂಭಾಗ. ಅಲ್ಲಿ ವಿಮಾನ ನಿಲ್ದಾಣ ತಲೆಯೆತ್ತಿದ್ದೇ ಭೂಮಿಯ ಬೆಲೆ ಆಕಾಶಕ್ಕೆ ನೆಗೆದುಬಿಟ್ಟಿತು. ಆಗ ಬಿತ್ತು ನೋಡಿ ಅದರ ಮೇಲೆ ಭೂಗಳ್ಳರ ಕಣ್ಣು. ಸರ್ಕಾರದ್ದಾದರೇನು, ಯಾರದೋ ಅಮಾಯಕ ಜನರ ಭೂಮಿಯಾದರೇನು?

ಅದಕ್ಕೆ ಬೇಲಿ ಸುತ್ತಿ ಕಬ್ಜಾಗೆ ತೆಗೆದುಕೊಳ್ಳುವುದೇ ಈ ಭೂಗಳ್ಳರ ಸಂಚು. ಇದರಲ್ಲಿ ಬಹುತೇಕ ಬಾರಿ ಭೂಗಳ್ಳರು ಯಶಸ್ವಿಯಾಗಿದ್ದಾರೆ ಎಂಬುದಕ್ಕೆ ಅನೇಕ ಸಾಕ್ಷ್ಯಗಳಿವೆ.  ಆದ್ರೆ ಅದಕ್ಕೆ ಆಗಾಗ ಕಡಿವಾಣವೂ ಬೀಳುತ್ತಿರುತ್ತದೆ. ಇಂತಹ ಪ್ರಕರಣ ಇಲ್ಲಿ ವರದಿಯಾಗಿದೆ.

ಅದೇನು ಅಂದ್ರೆ, ಸರ್ಕಾರಿ ಜಮೀನಿಗೆ ನಕಲಿ ದಾಖಲಾತಿ ಸೃಷ್ಟಿಸಿ ಭೂಗಳ್ಳತನ ಮಾಡಿದ್ದ 24 ಜನ ಭೂಗಳ್ಳರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ಬೆಂಗಳೂರಿನ ಯಲಹಂಕ ತಹಶೀಲ್ದಾರ್​ರಿಂದ FIR ದಾಖಲಾಗಿದೆ.

ಯಲಹಂಕ ತಾಲೂಕಿನ ಚೊಕ್ಕನಹಳ್ಳಿ ಬಳಿಯ ಸರ್ವೆ ನಂ. 75/4, 75/6ರ 21 ಎಕರೆ 19ಗುಂಟೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸಲು ಭೂಗಳ್ಳರಿಂದ ಯತ್ನ ನಡೆದಿತ್ತು. ಹಾಗಾಗಿ, ಜಮೀನು ಒತ್ತುವರಿಯನ್ನ ತಹಶೀಲ್ದಾರ್ ತೆರವುಗೊಳಿಸಿದ್ದಾರೆ. ಒತ್ತುವರಿ ತೆರವುಗೊಳಿಸಿ ವಿಚಾರಣೆ ನಡೆಸಿದ ಬಳಿಕ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.