ವಾಟ್ಸಾಪ್ ಚಾಟ್ ಕಣ್ಮರೆಯಾಗುತ್ತೆ ಗೊತ್ತಾ.. ಹೊಸ ಸೌಲಭ್ಯ ಬಳಸೋದು ಹೇಗೆ?!

ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹೊಸ ಫೀಚರ್ ಒಂದನ್ನು ನೀಡಿದೆ. ಕಳುಹಿಸಿದ ಸಂದೇಶಗಳು ಏಳು ದಿನಗಳ ಬಳಿಕ ಕಣ್ಮರೆಯಾಗುವಂತೆ ಹೊಸದೊಂದು ಆಯ್ಕೆಯನ್ನು ಬಳಕೆದಾರರಿಗಾಗಿ ಪರಿಚಯಿಸಿದೆ. ಈ ಆಯ್ಕೆಯನ್ನು ಬಳಸಿಕೊಳ್ಳಲು ಪ್ರಯತ್ನಿಸುವ ಮೊದಲು ನಿಮ್ಮ ಮೊಬೈಲ್​ನಲ್ಲಿ ವಾಟ್ಸಾಪ್​ ಆ್ಯಪ್​​​ ಅಪ್​ಡೇಟ್​ ಆಗಿದೆಯೇ ಗಮನಿಸಿಕೊಳ್ಳಿ. ಆಂಡ್ರಾಯ್ಡ್​ಗೆ 2.21.206.15 ಮತ್ತು ಐಫೋನ್​ ಆಗಿದ್ದರೆ 2.21.121.4 ವರ್ಷನ್​ ಅಪ್​ಡೇಟ್ ಆಗಿರುವಂತೆ ನೋಡಿಕೊಳ್ಳಿ. ನಂತರ ಯಾರ ಮೆಸೇಜ್​ ನಿರ್ದಿಷ್ಟ ಸಮಯದ ಬಳಿಕ ಕಣ್ಮರೆಯಾಗಬೇಕೆಂದು ಗುರುತಿಸಿಕೊಳ್ಳಿ. ಅವರ ನಂಬರನ್ನು ವಾಟ್ಸಾಪ್ ಚಾಟ್​​ನಲ್ಲಿ ಓಪನ್ ಮಾಡಿ. ಕಾಂಟಾಕ್ಟ್​ ಇನ್ಫೋ […]

ವಾಟ್ಸಾಪ್ ಚಾಟ್ ಕಣ್ಮರೆಯಾಗುತ್ತೆ ಗೊತ್ತಾ.. ಹೊಸ ಸೌಲಭ್ಯ ಬಳಸೋದು ಹೇಗೆ?!
ಸಾಂದರ್ಭಿಕ ಚಿತ್ರ
Updated By: ganapathi bhat

Updated on: Apr 06, 2022 | 8:07 PM

ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹೊಸ ಫೀಚರ್ ಒಂದನ್ನು ನೀಡಿದೆ. ಕಳುಹಿಸಿದ ಸಂದೇಶಗಳು ಏಳು ದಿನಗಳ ಬಳಿಕ ಕಣ್ಮರೆಯಾಗುವಂತೆ ಹೊಸದೊಂದು ಆಯ್ಕೆಯನ್ನು ಬಳಕೆದಾರರಿಗಾಗಿ ಪರಿಚಯಿಸಿದೆ.
ಈ ಆಯ್ಕೆಯನ್ನು ಬಳಸಿಕೊಳ್ಳಲು ಪ್ರಯತ್ನಿಸುವ ಮೊದಲು ನಿಮ್ಮ ಮೊಬೈಲ್​ನಲ್ಲಿ ವಾಟ್ಸಾಪ್​ ಆ್ಯಪ್​​​ ಅಪ್​ಡೇಟ್​ ಆಗಿದೆಯೇ ಗಮನಿಸಿಕೊಳ್ಳಿ. ಆಂಡ್ರಾಯ್ಡ್​ಗೆ 2.21.206.15 ಮತ್ತು ಐಫೋನ್​ ಆಗಿದ್ದರೆ 2.21.121.4 ವರ್ಷನ್​ ಅಪ್​ಡೇಟ್ ಆಗಿರುವಂತೆ ನೋಡಿಕೊಳ್ಳಿ.
ನಂತರ ಯಾರ ಮೆಸೇಜ್​ ನಿರ್ದಿಷ್ಟ ಸಮಯದ ಬಳಿಕ ಕಣ್ಮರೆಯಾಗಬೇಕೆಂದು ಗುರುತಿಸಿಕೊಳ್ಳಿ. ಅವರ ನಂಬರನ್ನು ವಾಟ್ಸಾಪ್ ಚಾಟ್​​ನಲ್ಲಿ ಓಪನ್ ಮಾಡಿ. ಕಾಂಟಾಕ್ಟ್​ ಇನ್ಫೋ ತೆರೆದುಕೊಳ್ಳಿ. ಅಲ್ಲಿ Disappearing Messages ಎಂಬ ಆಯ್ಕೆ ಕಾಣುತ್ತದೆ. ಅದನ್ನು ಎನೇಬಲ್ ಮಾಡಿಕೊಳ್ಳಿ.
ಈ ಫೀಚರ್​ ಡಿಫಾಲ್ಟ್​ ಸ್ಥಿತಿಯಲ್ಲಿ ಡಿಸೇಬಲ್ ಆಗಿರುತ್ತೆ. ಅಗತ್ಯ ಎನಿಸಿದರೆ ನೀವಾಗಿಯೇ ಇದನ್ನು ಆನ್ ಮಾಡಿಕೊಳ್ಳಬೇಕು. ಪ್ರತಿ ಚಾಟ್​ಗೂ ಇದನ್ನು ಪ್ರತ್ಯೇಕ ಪ್ರತ್ಯೇಕವಾಗಿಯೇ ಎನೇಬಲ್ ಮಾಡಿಕೊಳ್ಳಬೇಕು. ಹೀಗೆ ಸೆಟ್ಟಿಂಗ್ ಮಾಡಿಕೊಂಡ ವಾಟ್ಸಾಪ್ ಚಾಟ್​ಗಳು 7 ದಿನಗಳಲ್ಲಿ ಕಣ್ಮರೆಯಾಗುತ್ತವೆ.

ಕಣ್ಮರೆಯಾಗುವ ಸಂದೇಶಗಳನ್ನು ಮರಳಿ ಪಡೆಯಲು ಸಾಧ್ಯವೇ?!
ಬ್ಯಾಕಪ್​ ಸೆಟಿಂಗ್ಸ್​ ಸರಿಯಾಗಿ ಮಾಡಿಕೊಳ್ಳದಿದ್ದರೆ ಕಣ್ಮರೆಯಾಗುವ ಚಾಟ್​ಗಳನ್ನು ಮತ್ತೆ ಪಡೆಯಲು ಸಾಧ್ಯವೇ ಇಲ್ಲ. Disappearing Messages ಎಂಬ ಆಯ್ಕೆ​ ಎನೇಬಲ್ ಮಾಡಿಕೊಳ್ಳುವ ಮೊದಲು ಬ್ಯಾಕಪ್ ಸೆಟ್ಟಿಂಗ್ಸ್​ ನಮಗೆ ಬೇಕಾದಂತೆ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಅತ್ಯಗತ್ಯ.
ಹೆಚ್ಚಿನ ಸ್ಟೋರೇಜ್ ಬಳಕೆ ತಪ್ಪಿಸಲು ವಾಟ್ಸಾಪ್ ಈ ಹೊಸ ಆಯ್ಕೆ ಪರಿಚಯಿಸಿದೆ. ಈಗಾಗಲೇ ಇಂಥ ಆಯ್ಕೆಗಳು ಟೆಲಿಗ್ರಾಂ, ಸ್ನಾಪ್​ಚಾಟ್​ಗಳಲ್ಲಿ ಲಭ್ಯವಿತ್ತು. ಇನ್​ಸ್ಟಾಗ್ರಾಂನಲ್ಲಿ ಫೋಟೊ ಅಥವಾ ವಿಡಿಯೊ ಕಳುಹಿಸುವಾಗ view one ಆಯ್ಕೆ ಕೊಟ್ಟರೆ ಬಳಕೆದಾರರು ನೋಡಿದ ಬಳಿಕ ಫೋಟೊ ಅಥವಾ ವಿಡಿಯೊ ತನ್ನಿಂತಾನೆ ಕಣ್ಮರೆಯಾಗುತ್ತಿತ್ತು.
-ಶ್ರುತಿ ಹೆಗಡೆ

Published On - 2:56 pm, Mon, 23 November 20