ಬಾರದ ಲೋಕಕ್ಕೆ ತೆರಳಿದ ಇನಿಯ, ಮನನೊಂದ ಸತಿ ಮಾಡಿದ್ದೇನು ಗೊತ್ತಾ?

| Updated By:

Updated on: Jul 12, 2020 | 2:48 PM

ಮೈಸೂರು: ಪತಿಯ ಅಗಲಿಕೆಯಿಂದ ಮನನೊಂದ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೆ.ಪಿ.ನಗರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ 25 ವರ್ಷದ ಚಾಂದಿನಿ ಎಂದು ತಿಳಿದುಬಂದಿದೆ. ಕಳೆದ 5 ವರ್ಷದ ಹಿಂದೆ ಮಧುಸೂದನ್ ಹಾಗೂ ಚಾಂದಿನಿ ವಿವಾಹವಾಗಿದ್ದರು. ಆದರೆ, 21 ದಿನಗಳ ಹಿಂದೆ ಪತಿ ಮಧುಸೂದನ್ ನಿಧನರಾಗಿದ್ದರು. ಈ ಮಧ್ಯೆ ಚಾಂದಿನಿಯ ಪೋಷಕರು ಆಕೆಗೆ ಮತ್ತೊಂದು ಮದುವೆ ಮಾಡಲು ನಿರ್ಧರಿಸಿದ್ದರು. ಆದರೆ, ಪತಿಯ ನೆನಪಿನಿಂದ ಹೊರಬರಲಾಗದ ಚಾಂದಿನಿ ಇಂದು ನೇಣಿಗೆ ಶರಣಾಗಿದ್ದಾರೆ. ಇದೀಗ, ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ […]

ಬಾರದ ಲೋಕಕ್ಕೆ ತೆರಳಿದ ಇನಿಯ, ಮನನೊಂದ ಸತಿ ಮಾಡಿದ್ದೇನು ಗೊತ್ತಾ?
Follow us on

ಮೈಸೂರು: ಪತಿಯ ಅಗಲಿಕೆಯಿಂದ ಮನನೊಂದ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೆ.ಪಿ.ನಗರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ 25 ವರ್ಷದ ಚಾಂದಿನಿ ಎಂದು ತಿಳಿದುಬಂದಿದೆ.

ಕಳೆದ 5 ವರ್ಷದ ಹಿಂದೆ ಮಧುಸೂದನ್ ಹಾಗೂ ಚಾಂದಿನಿ ವಿವಾಹವಾಗಿದ್ದರು. ಆದರೆ, 21 ದಿನಗಳ ಹಿಂದೆ ಪತಿ ಮಧುಸೂದನ್ ನಿಧನರಾಗಿದ್ದರು. ಈ ಮಧ್ಯೆ ಚಾಂದಿನಿಯ ಪೋಷಕರು ಆಕೆಗೆ ಮತ್ತೊಂದು ಮದುವೆ ಮಾಡಲು ನಿರ್ಧರಿಸಿದ್ದರು. ಆದರೆ, ಪತಿಯ ನೆನಪಿನಿಂದ ಹೊರಬರಲಾಗದ ಚಾಂದಿನಿ ಇಂದು ನೇಣಿಗೆ ಶರಣಾಗಿದ್ದಾರೆ. ಇದೀಗ, ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 1:08 pm, Sun, 12 July 20