ಜೋಳದ ಹೊಲದಲ್ಲಿ ಬೀಡುಬಿಟ್ಟ ಗಜಪಡೆ!

ಹಾಸನ: ಜಿಲ್ಲೆಯ ಬೇಲೂರಿನಲ್ಲಿ ಕಾಡಾನೆ ಹಿಂಡು ಪ್ರತ್ಯಕ್ಷವಾಗಿದೆ. ಅಷ್ಟೇ ಅಲ್ಲ.. ಪಟ್ಟಣದ ಜೋಳದ ಹೊಲದಲ್ಲಿಯೇ  ಆ ಗಜಪಡೆ ಬೀಡುಬಿಟ್ಟಿದೆ. ಪಟ್ಟಣದೊಳಗೆ ಎಂಟ್ರಿಯಾದ ಕಾಡಾನೆ ಹಿಂಡು ಕಂಡು ಜನರಲ್ಲಿ ಸಹಜವಾಗಿಯೇ ಆತಂಕ ಹೆಚ್ಚಾಗಿದೆ. ಬೇಲೂರು ಪಟ್ಟಣದ ಒಳಗೇ ಆರು ಕಾಡಾನೆಗಳು ನುಗ್ಗಿವೆ. ಈ ಮಧ್ಯೆ, ಜನರು ಮನೆಯಿಂದ ಆಚೆ ಬರಬಾರದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕೆಲ ದಿನಗಳಿಂದ ತಾಲ್ಲೂಕಿನ ವಿವಿಧೆಡೆ ಆನೆ ಹಿಂಡು ಓಡಾಡುತ್ತಿದೆ. ಕೂಡಲೇ ಆನೆಗಳನ್ನ ಕಾಡಿಗೆ ಓಡಿಸಬೇಕು ಎಂದು ಜನ ಒತ್ತಾಯ ಮಾಡಿದ್ದಾರೆ. […]

ಜೋಳದ ಹೊಲದಲ್ಲಿ ಬೀಡುಬಿಟ್ಟ ಗಜಪಡೆ!

Updated on: Oct 15, 2020 | 11:07 AM

ಹಾಸನ: ಜಿಲ್ಲೆಯ ಬೇಲೂರಿನಲ್ಲಿ ಕಾಡಾನೆ ಹಿಂಡು ಪ್ರತ್ಯಕ್ಷವಾಗಿದೆ. ಅಷ್ಟೇ ಅಲ್ಲ.. ಪಟ್ಟಣದ ಜೋಳದ ಹೊಲದಲ್ಲಿಯೇ  ಆ ಗಜಪಡೆ ಬೀಡುಬಿಟ್ಟಿದೆ.

ಪಟ್ಟಣದೊಳಗೆ ಎಂಟ್ರಿಯಾದ ಕಾಡಾನೆ ಹಿಂಡು ಕಂಡು ಜನರಲ್ಲಿ ಸಹಜವಾಗಿಯೇ ಆತಂಕ ಹೆಚ್ಚಾಗಿದೆ. ಬೇಲೂರು ಪಟ್ಟಣದ ಒಳಗೇ ಆರು ಕಾಡಾನೆಗಳು ನುಗ್ಗಿವೆ. ಈ ಮಧ್ಯೆ, ಜನರು ಮನೆಯಿಂದ ಆಚೆ ಬರಬಾರದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕೆಲ ದಿನಗಳಿಂದ ತಾಲ್ಲೂಕಿನ ವಿವಿಧೆಡೆ ಆನೆ ಹಿಂಡು ಓಡಾಡುತ್ತಿದೆ. ಕೂಡಲೇ ಆನೆಗಳನ್ನ ಕಾಡಿಗೆ ಓಡಿಸಬೇಕು ಎಂದು ಜನ ಒತ್ತಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಅಧಿಕಾರಿಗಳ ತಂಡ ಆನೆಗಳನ್ನ ಕಾಡಿಗೆ ಓಡಿಸೊ ಬಗ್ಗೆ ಸಮಾಲೋಚನೆ ನಡೆಸುತ್ತಿದೆ.