AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿ ಪ್ರದರ್ಶನ ಶುರು; ಮುಂದೆಂದೂ ಇಂತಹ ಪರಿಸ್ಥಿತಿ ಬಾರದಿರಲಿ ಎಂದ ಚಿತ್ರ ಪ್ರೇಮಿಗಳು

ಬೆಂಗಳೂರು: ಮಹಾಮಾರಿ ಕೊರೊನಾದಿಂದಾಗಿ ಇಡೀ ಜಗತ್ತೇ ಬುಡಮೇಲು ಆಗಿತ್ತು, ಸ್ತಬ್ಧಗೊಂಡಿತ್ತು. ಅದರಲ್ಲೂ ಹೆಚ್ಚು ಜನ ಸೇರುವ ಚಿತ್ರಮಂದಿರಗಳು, ಮಲ್ಟಿಫ್ಲೆಕ್ಸ್​ಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಇದೀಗ ಮತ್ತೆ ಜೀವ ಕಳೆ ಬರುತ್ತಿದೆ. ಅರೆ ಬರೆಯಾದರೂ ಚಿತ್ರಮಂದಿರಗಳು ಕಾರ್ಯೋನ್ಮುಖವಾಗಿವೆ. ಮುಂದೆಂದೂ ಇಂತಹ ಪರಿಸ್ಥಿತಿ ಬಾರದಿರಲಿ, ಮನರಂಜನೆ ನಿರಂತರವಾಗಿರಲಿ ಎಂದು ಆಶಿಸುತ್ತಾ ಚಿತ್ರ ಪ್ರೇಮಿಗಳು ಸಿನಿಮಾ ಹಾಲ್​ಗಳತ್ತ ಮುಖಮಾಡಿದ್ದಾರೆ. ಬಿಕೋ ಎನ್ನುತ್ತಿದ್ದ ಚಿತ್ರ ಮಂದಿರಗಳಲ್ಲಿ ಇನ್ನು ನಿರಂತರ ಚಿತ್ರ ಸಂತೆ: ಕೊರೊನಾದಿಂದಾಗಿ ಸ್ಥಗಿತವಾಗಿದ್ದ ಸಿನಿಮಾ ಪ್ರದರ್ಶನ ಎಂಟು ತಿಂಗಳ ಬಳಿಕ ಮತ್ತೆ ಶುರುವಾಗಿದೆ. […]

ಸಿನಿ ಪ್ರದರ್ಶನ ಶುರು; ಮುಂದೆಂದೂ ಇಂತಹ ಪರಿಸ್ಥಿತಿ ಬಾರದಿರಲಿ ಎಂದ ಚಿತ್ರ ಪ್ರೇಮಿಗಳು
ಆಯೇಷಾ ಬಾನು
| Edited By: |

Updated on: Oct 15, 2020 | 10:42 AM

Share

ಬೆಂಗಳೂರು: ಮಹಾಮಾರಿ ಕೊರೊನಾದಿಂದಾಗಿ ಇಡೀ ಜಗತ್ತೇ ಬುಡಮೇಲು ಆಗಿತ್ತು, ಸ್ತಬ್ಧಗೊಂಡಿತ್ತು. ಅದರಲ್ಲೂ ಹೆಚ್ಚು ಜನ ಸೇರುವ ಚಿತ್ರಮಂದಿರಗಳು, ಮಲ್ಟಿಫ್ಲೆಕ್ಸ್​ಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಇದೀಗ ಮತ್ತೆ ಜೀವ ಕಳೆ ಬರುತ್ತಿದೆ. ಅರೆ ಬರೆಯಾದರೂ ಚಿತ್ರಮಂದಿರಗಳು ಕಾರ್ಯೋನ್ಮುಖವಾಗಿವೆ. ಮುಂದೆಂದೂ ಇಂತಹ ಪರಿಸ್ಥಿತಿ ಬಾರದಿರಲಿ, ಮನರಂಜನೆ ನಿರಂತರವಾಗಿರಲಿ ಎಂದು ಆಶಿಸುತ್ತಾ ಚಿತ್ರ ಪ್ರೇಮಿಗಳು ಸಿನಿಮಾ ಹಾಲ್​ಗಳತ್ತ ಮುಖಮಾಡಿದ್ದಾರೆ.

ಬಿಕೋ ಎನ್ನುತ್ತಿದ್ದ ಚಿತ್ರ ಮಂದಿರಗಳಲ್ಲಿ ಇನ್ನು ನಿರಂತರ ಚಿತ್ರ ಸಂತೆ: ಕೊರೊನಾದಿಂದಾಗಿ ಸ್ಥಗಿತವಾಗಿದ್ದ ಸಿನಿಮಾ ಪ್ರದರ್ಶನ ಎಂಟು ತಿಂಗಳ ಬಳಿಕ ಮತ್ತೆ ಶುರುವಾಗಿದೆ. ಇಂದಿನಿಂದ ಥಿಯೇಟರ್, ಮಾಲ್​ಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ. ಹೀಗಾಗಿ ನಗರದ ಬಹುತೇಕ ಮಾಲ್​ಗಳಲ್ಲಿ ಚಿತ್ರಪ್ರದರ್ಶನದ ಅಬ್ಬರ ಜೋರಾಗಿದೆ. ಥಿಯೇಟರ್ ಗಿಂತ ಮಾಲ್​ಗಳಲ್ಲೇ ಅಬ್ಬರ ಹೆಚ್ಚಾಗಿದೆ.

ಲವ್ ಮಾಕ್ ಟೈಲ್, ಶಿವಾಜಿ ಸುರತ್ಕಲ್ ಸೇರಿದಂತೆ ಹಲವು ಚಿತ್ರಗಳು ರೀ-ರಿಲೀಸ್ ಆಗುತ್ತಿವೆ. ಓರಾಯನ್ ಮಾಲ್, ಜಿಟಿ ವರ್ಲ್ಡ್ ಮಾಲ್, ವೈಷ್ಣವಿ ಮಾಲ್, ವೆಗಾಸಿಟಿ, ಗರುಡ ಮಾಲ್​ನಲ್ಲಿ ಇಂದಿನಿಂದ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಏಳೆಂಟು ತಿಂಗಳಿನಿಂದ ಸಿನಿಮಾ ಮಿಸ್ ಮಾಡಿಕೊಂಡವರು, ಟಿಕೆಟ್ ಬುಕ್ಕಿಂಗ್​ಗೆ ಮುಂದಾಗಿದ್ದಾರೆ.

ಕೊರೊನಾ ರೂಲ್ಸ್​ಗಳನ್ನು ಹಾಗೂ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಚಿತ್ರ ಪ್ರದರ್ಶನಕ್ಕೆ ತಯಾರಿ ನಡೆದಿದೆ. ಹೀಗಾಗಿ ಪ್ರೇಕ್ಷಕರು ಯಾವುದೇ ಆತಂಕ, ಅನುಮಾನವಿಲ್ಲದೆ ಸಿನಿಮಾ ನೋಡಲು ಬರಬಹುದು ಎಂದು ಮಾಲ್​ ಮಾಲೀಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಪ್ರದರ್ಶನಕ್ಕೆ ಸಿಂಗಾರಗೊಳ್ಳುತ್ತಿವೆ ಗಾಂಧಿನಗರದ ಚಿತ್ರಮಂದಿರಗಳು