ಡೋಣಿ ನದಿ ಅವಾಂತರ: ಪ್ರವಾಹಕ್ಕೆ ಲಕ್ಷಾಂತರ ಮೌಲ್ಯದ ಫಸಲು ನೀರುಪಾಲು

ಡೋಣಿ ನದಿ ಅವಾಂತರ: ಪ್ರವಾಹಕ್ಕೆ ಲಕ್ಷಾಂತರ ಮೌಲ್ಯದ ಫಸಲು ನೀರುಪಾಲು

ವಿಜಯಪುರ: ಜಿಲ್ಲೆಯಲ್ಲಿ ಡೋಣಿ ನದಿಯ ಪ್ರವಾಹ ಕಡಿಮೆಯಾಗಿಲ್ಲ. ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಡೋಣಿ ನದಿ ಉಕ್ಕಿ ಹರಿಯುತ್ತಿದೆ. ಜಿಲ್ಲೆಯ ತಿಕೋಟಾ, ಬಬಲೇಶ್ವರ, ಬಸವನಬಾಗೇವಾಡಿ, ದೇವರಹಿಪ್ಪರಗಿ ಹಾಗೂ ತಾಳಿಕೋಟೆ ತಾಲೂಕಿನ ಭಾಗದಲ್ಲಿ ಡೋಣಿ ಅಬ್ಬರಿಸುತ್ತಿದೆ.

ಡೋಣಿ ನದಿ ಅಬ್ಬರಕ್ಕೆ ಅಪಾರ ಪ್ರಮಾಣದಲ್ಲಿ ಜಮೀನಿಗೆ ನೀರು ನುಗ್ಗಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಜಲಾವೃತವಾಗಿದೆ. ಕಬ್ಬು ತೊಗರಿ ಮೆಕ್ಕೆಜೋಳ ಹತ್ತಿ ಸೇರಿದಂತೆ ಇತರ ಬೆಳೆಗಳು ಜಲ ಸಮಾಧಿಯಾಗಿದೆ. ಸಾಲಸೋಲ ಮಾಡಿ ಬೆಳೆದ ಬೆಳೆ ನೀರಲ್ಲಿ ಕೊಚ್ಚಿ ಹೋಗಿದ್ದು ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಅನ್ನದಾತರು ಒತ್ತಾಯಿಸಿದ್ದಾರೆ. ಮಗುವಂತೆ ಬೆಳೆಸಿದ್ದ ಬೆಳೆ ನೀರಿನಲ್ಲಿ ಮುಳುಗಿರುವುದನ್ನು ಕಂಡು ಕಣ್ಣೀರು ಹಾಕಿದ್ದಾರೆ.