‘ಪಾಪ! ಕುಸುಮಾ ಏನು ತಪ್ಪು ಮಾಡಿದ್ದಾಳೆ, ತಳ್ಳಿದರೆ ಬಿದ್ದು ಹೋಗ್ತಾಳೆ..’
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ, ಪಕ್ಷದ ಅಭ್ಯರ್ಥಿ ಕುಸುಮಾ ವಿರುದ್ಧ ದಾಖಲಿಸಲಾಗಿರುವ FIR ಬಗ್ಗೆ ಕಿಡಿಕಾರಿದರು. ಇಡೀ ಪ್ರಜಾಪ್ರಭುತ್ವದ ರಾಜಕಾರಣದಲ್ಲಿ ಇಷ್ಟು ನೀಚವಾದ ರಾಜಕಾರಣ ನಾನು ಯಾವತ್ತೂ ನೋಡಿರಲಿಲ್ಲ ಎಂದು ಶಿವಕುಮಾರ್ ಹೇಳಿದರು. ‘ಅಭ್ಯರ್ಥಿ ಮೇಲೆ ಕೇಸ್ ಹಾಕ್ತೀರಲ್ಲ, ಗಂಡಸರಾ ಇವರು?’ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿಯವರು ಬಂದಿರಲಿಲ್ಲವಾ? 100 ಮೀಟರ್ ಒಳಗಡೆ ಬಿಜೆಪಿಯವರು ಎಷ್ಟು ಜನರಿದ್ರು? ಎಂದು KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು. ಡಿಸಿಎಂ ಎಲ್ಲಿದ್ರು, ಸಚಿವರೆಲ್ಲಿದ್ದರು ಎಂಬ […]

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ, ಪಕ್ಷದ ಅಭ್ಯರ್ಥಿ ಕುಸುಮಾ ವಿರುದ್ಧ ದಾಖಲಿಸಲಾಗಿರುವ FIR ಬಗ್ಗೆ ಕಿಡಿಕಾರಿದರು. ಇಡೀ ಪ್ರಜಾಪ್ರಭುತ್ವದ ರಾಜಕಾರಣದಲ್ಲಿ ಇಷ್ಟು ನೀಚವಾದ ರಾಜಕಾರಣ ನಾನು ಯಾವತ್ತೂ ನೋಡಿರಲಿಲ್ಲ ಎಂದು ಶಿವಕುಮಾರ್ ಹೇಳಿದರು.
‘ಅಭ್ಯರ್ಥಿ ಮೇಲೆ ಕೇಸ್ ಹಾಕ್ತೀರಲ್ಲ, ಗಂಡಸರಾ ಇವರು?’
ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿಯವರು ಬಂದಿರಲಿಲ್ಲವಾ? 100 ಮೀಟರ್ ಒಳಗಡೆ ಬಿಜೆಪಿಯವರು ಎಷ್ಟು ಜನರಿದ್ರು? ಎಂದು KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು. ಡಿಸಿಎಂ ಎಲ್ಲಿದ್ರು, ಸಚಿವರೆಲ್ಲಿದ್ದರು ಎಂಬ ದಾಖಲೆ ಇದೆ. ನಮ್ಮ ಅಭ್ಯರ್ಥಿ ಮೇಲೆ ಕೇಸ್ ಹಾಕ್ತೀರಲ್ಲ, ಗಂಡಸರಾ ಇವರು? ಅಲ್ಲ ಇವರು ಹೇಡಿಗಳು ಎಂದು ಡಿ.ಕೆ.ಶಿವಕುಮಾರ್ ಆಕ್ರೋಶ ಹೊರಹಾಕಿದರು.
ಡಿಸಿಎಂ, ಕಂದಾಯ ಸಚಿವರ ಮೇಲೆ ಏಕೆ ಕೇಸ್ ಹಾಕ್ಸಿಲ್ಲ? ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಯಾಕೆ ಕೇಸ್ ಇಲ್ಲ? ಯಾಕೆ ನನ್ನ ಮೇಲೆ ಕೇಸ್ ಹಾಕ್ಸಿಲ್ಲ ಎಂದು ಡಿಕೆಶಿ ಪ್ರಶ್ನೆಗಳ ಮೇಲೆ ಪ್ರಶ್ನೆ ಸಿಡಿಸಿದರು. ಪಾಪ, ಕುಸುಮಾ ಏನು ತಪ್ಪು ಮಾಡಿದ್ದಾಳೆ, ತಳ್ಳಿದರೆ ಬಿದ್ದು ಹೋಗ್ತಾಳೆ ಪಾಪ. ಅಂಥವಳ ಮೇಲೆ ದಬ್ಬಾಕೆ ಮಾಡಿರುವುದು ನಾನು ಸಹಿಸಲ್ಲ ಎಂದು ಡಿ.ಕೆ.ಶಿವಕುಮಾರ್ ಖಾರವಾಗಿ ಮಾತನಾಡಿದರು.
‘ಕುಸುಮಾ ವಿದ್ಯಾವಂತ ಹೆಣ್ಣುಮಗಳು,ನೊಂದಿರುವ ಹೆಣ್ಣು’ ಕುಸುಮಾ ವಿದ್ಯಾವಂತ ಹೆಣ್ಣುಮಗಳು, ಕಾನೂನು ಅರಿವಿರುವಂತ ಹೆಣ್ಣು. ನೊಂದಿರುವ ಹೆಣ್ಣು. ನಿನ್ನೆ ನಾಮಿನೇಷನ್ ಫೈಲ್ ಮಾಡುವುದಕ್ಕೆ ಅಧಿಕೃತ ಸಮಯ ಪಡೆದುಕೊಂಡು ಬಂದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಅವರಿಗೆ ಬೆಂಬಲವಾಗಿ ಬಂದಿದ್ದಾರೆ. ಮೂರು ಜನ ಬೇರೆ ಬೇರೆ ದಿಕ್ಕಿನಿಂದ ಬಂದಿದ್ದೇವೆ. ಬಿಜೆಪಿ ಕಾರ್ಯಕರ್ತರ ಮೇಲೆ 1,100 ಕೇಸ್ಗಳು ದಾಖಲಾಗಿದೆ. ಅದಕ್ಕೋಸ್ಕರವೇ ಬಿಜೆಪಿ ಕಾರ್ಯಕರ್ತರು ರೊಚ್ಚಿಗೆದ್ದಿರೋದು ಎಂದು ಶಿವಕುಮಾರ್ ಹೇಳಿದರು.
ಅಲ್ಲ ಸ್ವಾಮಿ, ಇನ್ನೂ ಕಣ್ಣು ಬಿಡ್ತಿರೋ ಕ್ಯಾಂಡಿಡೇಟ್ ಆಕೆ..
ನಮ್ಮ ಕಾಂಗ್ರೆಸ್ ಕಾರ್ಯಕರ್ತರ ಮೇಲೆ 400 ಕೇಸ್ ಹಾಕಿದ್ದಾರೆ. 3 ಜನ ಹೆಣ್ಣುಮಕ್ಕಳು ಕಾರ್ಪೋರೆಟರ್ಗಳು ಬಿಬಿಎಂಪಿ ಕೌನ್ಸಿಲ್ನಲ್ಲೂ ಗಲಾಟೆ ಮಾಡಿದ್ರು. ಜನತಾ ದಳದ ಮೇಲೂ 300 ಕೇಸ್ ಆಗಿದೆ. ಆಗ ನಾವು ಅಸಹಾಯಕರಾಗಿಬಿಟ್ಟಿದ್ದೆವು. ಹೆದರಿಸಿ ಬೆದರಿಸೋದಲ್ಲದೆ ನಮ್ಮ ಕ್ಯಾಂಡಿಡೇಟ್ ಮೇಲೆ ಕೇಸ್ ಹಾಕಿದ್ದಾರೆ. ಎಸ್ಕಾರ್ಟ್ನವರು ಬಂದರೂ ಅಂತಾ ಸಿದ್ದರಾಮಯ್ಯರ ಬೆಂಗಾವಲು ವಾಹನದ ಸಿಬ್ಬಂದಿ ಮೇಲೆ ಕೇಸ್ ಹಾಕಿದ್ದಾರೆ ಎಂದು ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲ ಸ್ವಾಮಿ, ಇನ್ನೂ ಕಣ್ಣು ಬಿಡ್ತಿರೋ ಕ್ಯಾಂಡಿಡೇಟ್ ಆಕೆ. ಕ್ಯಾಂಡಿಡೇಟ್ ಮೇಲೆ ಕೇಸ್ ಹಾಕ್ಸಿ ಹೆದರಿಸುವಂತಹ ಕೆಲಸ ಇವರು ಮಾಡ್ತಿದ್ದಾರೆ. ನಮ್ಮ ಅಭ್ಯರ್ಥಿಗೂ ಕೇಸ್ಗೂ ಸಂಬಂಧ ಇಲ್ಲ. ಸರ್ಕಾರದ ಕುಮ್ಮಕ್ಕಿನಿಂದಲೇ ಪೊಲೀಸರ ದುರ್ಬಳಕೆ ಮಾಡಿಕೊಂಡು ಕೇಸ್ ಹಾಕ್ಸಿದ್ದಾರೆ. ನಾವು ಇದಕ್ಕೆಲ್ಲ ಹೆದರೋದಿಲ್ಲ. ಇದಕ್ಕೆ ಬೇಲ್ ತಗೋತೀವಿ. ಸ್ಟೇಷನ್ಗೆ ಹೋಗ್ತೀವಿ ಅಂತಾ ಅಂದುಕೊಂಡ್ರೆ ಅದು ಸುಳ್ಳು.
‘ಕೇಸ್ ಹಾಕಿದ ಸರ್ಕಲ್ ಇನಸ್ಪೆಕ್ಟರ್ನ ವರ್ಗಾವಣೆ ಮಾಡಬೇಕು’ ಇದಕ್ಕೆಲ್ಲ ನಾವು ಹೆದರೋದಿಲ್ಲ. ಯಾವ ನೀತಿ ಉಲ್ಲಂಘನೆ ಕೂಡ ಆಗಿಲ್ಲ ಎಂದು ಶಿವಕುಮಾರ್ ಹೇಳಿದರು. ಎಲ್ಲ ಕಾರ್ಯಕರ್ತರು ಹೆದರಿಕೊಂಡು ಮನೆಯಲ್ಲಿ ಕೂರಲಿ ಅಂತಾ ಹೀಗೆ ಮಾಡಿದ್ದಾರೆ. ಹೇಡಿತನದ ದ್ವೇಷದ ಕುತಂತ್ರ ರಾಜಕಾರಣ ಮಾಡಿದ್ದಾರೆ. ಕೂಡಲೇ ಕೇಸ್ ಹಾಕಿದ ಸರ್ಕಲ್ ಇನಸ್ಪೆಕ್ಟರ್ನ ವರ್ಗಾವಣೆ ಮಾಡಬೇಕು ಎಂದು ಶಿವಕುಮಾರ್ ಆಗ್ರಹಿಸಿದರು.



