ಇನ್ಮುಂದೆ ಒಟಿಟಿಗೂ ಬರಲಿದೆ ಕಟ್ಟುಪಾಡು: ಕೇಂದ್ರದ ಮಹತ್ವದ ಘೋಷಣೆ

ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್ ಭಾನುವಾರ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಒಟಿಟಿ ವೇದಿಕೆಗೆ ಶೀಘ್ರವೇ ಗೈಡ್ಲೈನ್ ಬಿಡುಗಡೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಇನ್ಮುಂದೆ ಒಟಿಟಿಗೂ ಬರಲಿದೆ ಕಟ್ಟುಪಾಡು: ಕೇಂದ್ರದ ಮಹತ್ವದ ಘೋಷಣೆ
ಓಟಿಟಿ ಕಂಟೆಂಟ್​ ಪ್ರಸಾರದ ಕುರಿತು ಸುಪ್ರೀಂ ಕೋರ್ಟ್ ಹೇಳಿದ್ದೇನು?
Edited By:

Updated on: Jan 31, 2021 | 6:40 PM

ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡಬೇಕು ಎಂದಾದರೆ ಅದಕ್ಕೆ ಒಂದಷ್ಟು ಕಟ್ಟುಪಾಡುಗಳಿವೆ. ಕೆಟ್ಟ ಶಬ್ದಗಳ ಬಳಕೆ, ಅಶ್ಲೀಲ ದೃಶ್ಯಗಳನ್ನು ಸಿನಿಮಾದಲ್ಲಿ ತೋರಿಸುವಂತಿಲ್ಲ. ಆದರೆ, ಒಟಿಟಿಗೆ ಈವರೆಗೆ ಯಾವುದೇ ರೀತಿಯ ಕಟ್ಟುಪಾಡುಗಳಿಗಿಲ್ಲ. ಈಗ ಇದಕ್ಕೂ ಕೆಲ ನಿಯಮ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್ ಭಾನುವಾರ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಒಟಿಟಿ ವೇದಿಕೆಗೆ ಶೀಘ್ರವೇ ಗೈಡ್ಲೈನ್ ಬಿಡುಗಡೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ಒಟಿಟಿ ಪ್ಲಾಟ್​ಫಾರ್ಮ್​  ವಿಚಾರದಲ್ಲಿ ತುಂಬಾನೇ ದೂರುಗಳು ಬರುತ್ತಿವೆ. ಸದ್ಯದ ನಿಯಮದ ಪ್ರಕಾರ ಒಟಿಟಿ ಪ್ಲಾಟ್​ಫಾರ್ಮ್​ಗಳು ಡಿಜಿಟಲ್ ನ್ಯೂಸ್ ಪೇಪರ್​​ಗಳು​​ ಪ್ರೆಸ್ ಕೌನ್ಸಿಲ್ ಆ್ಯಕ್ಟ್ ಹಾಗೂ ಕೇಬಲ್ ಟೆಲಿವಿಷನ್ ನೆಟ್ವರ್ಕ್ (ತಿದ್ದುಪಡಿ) ಅಡಿಯಲ್ಲಿ ಬರುವುದಿಲ್ಲ. ಈ ಕಾರಣಕ್ಕೆ ನಾವು ಕೆಲ ನಿಯಮ ಜಾರಿಗೆ ತರುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ರಿಲೀಸ್ ಆಗಿದ್ದ ತಾಂಡವ್ ವೆಬ್ ಸೀರಿಸ್ ವಿರುದ್ಧ ಅಪಸ್ವರ ಕೇಳಿ ಬಂದಿತ್ತು. ಈ ವೆಬ್ ಸಿರೀಸ್ನಲ್ಲಿ ಹಿಂದು ದೇವರಿಗೆ ಅವಮಾನ ಮಾಡಲಾಗಿದೆ ಎಂದು ದೂರಲಾಗಿತ್ತು. ಇದೇ ರೀತಿ ಸಾಕಷ್ಟು ವೆಬ್ ಸೀರಿಸ್​​ಗಳು  ವಿವಾದಕ್ಕೆ ಸಿಲುಕಿಕೊಂಡಿದ್ದವು.

ಆಸ್ಕರ್​ ರೇಸ್​ನಲ್ಲಿ ಕನ್ನಡಿಗ ಗೋಪಿನಾಥ್​ ಜೀವನದ ಕಥೆ!