ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಮಹಿಳೆ, ಎಮ್ಮೆ ಸಾವು

ರಾಯಚೂರು: ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಮಹಿಳೆ ಮೃತಪಟ್ಟಿರುವ ಘಟನೆ ದೇವದುರ್ಗ ತಾಲೂಕಿನ ಬೆನಕಲ್ ಗ್ರಾಮದಲ್ಲಿ ನಡೆದಿದೆ. ಮಲ್ಲಮ್ಮ(35) ಮೃತ ದುರ್ದೈವಿ. ಅಕ್ರಮವಾಗಿ ಜಮೀನಿನಲ್ಲಿ ವಿದ್ಯುತ್‌ ತಂತಿ ಹಾಕಲಾಗಿತ್ತು. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಮಲ್ಲಮ್ಮ ಮೃತಪಟ್ಟಿದ್ದಾರೆ. ಜೊತೆಗೆ ಎಮ್ಮೆ ಸಹ ಸಾವನ್ನಪ್ಪಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಮೀನು ರಕ್ಷಣೆಗೆ ಎಂದು ಹಾಕಿದ್ದ ವಿದ್ಯುತ್ ತಂತಿ ಜೀವಕ್ಕೆಯೇ ಕುತ್ತು ತಂದಿದೆ.

ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಮಹಿಳೆ, ಎಮ್ಮೆ ಸಾವು

Updated on: Oct 06, 2020 | 9:04 AM

ರಾಯಚೂರು: ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಮಹಿಳೆ ಮೃತಪಟ್ಟಿರುವ ಘಟನೆ ದೇವದುರ್ಗ ತಾಲೂಕಿನ ಬೆನಕಲ್ ಗ್ರಾಮದಲ್ಲಿ ನಡೆದಿದೆ. ಮಲ್ಲಮ್ಮ(35) ಮೃತ ದುರ್ದೈವಿ.

ಅಕ್ರಮವಾಗಿ ಜಮೀನಿನಲ್ಲಿ ವಿದ್ಯುತ್‌ ತಂತಿ ಹಾಕಲಾಗಿತ್ತು. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಮಲ್ಲಮ್ಮ ಮೃತಪಟ್ಟಿದ್ದಾರೆ. ಜೊತೆಗೆ ಎಮ್ಮೆ ಸಹ ಸಾವನ್ನಪ್ಪಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಮೀನು ರಕ್ಷಣೆಗೆ ಎಂದು ಹಾಕಿದ್ದ ವಿದ್ಯುತ್ ತಂತಿ ಜೀವಕ್ಕೆಯೇ ಕುತ್ತು ತಂದಿದೆ.

Published On - 7:08 am, Tue, 6 October 20