‘ನಾನು ವಿಕ್ಟರಿ ಸಿಂಬಲ್ ತೋರಿಸಿಕೊಂಡು ಬಂದಿಲ್ಲ, ಜನರಿಗೆ ಕೈ ಮುಗಿದುಕೊಂಡು ಬಂದಿದ್ದೆ’
ಬೆಂಗಳೂರು: CBI ದಾಳಿ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದರು. ಸದಾಶಿವನಗರದ ನಿವಾಸದಲ್ಲಿ ಡಿ.ಕೆ ಶಿವಕುಮಾರ್ ಮಾತನಾಡಿದರು. 2017ರಲ್ಲೂ ಇದೇ ಮನೆ ಮೇಲೆ ಐಟಿ ದಾಳಿ ನಡೆದಿತ್ತು. 2017ರಲ್ಲಿ ಗುಜರಾತ್ ಚುನಾವಣೆ ವೇಳೆ ಪ್ರಕರಣ ನಡೆದಿತ್ತು. 2019ರಲ್ಲಿ ಇಡಿ ಕೇಸ್ ಹಾಕಿ ಜೈಲಿಗೆ ಹಾಕಿದರು. 48 ದಿನ ತಿಹಾರ್ ಜೈಲಿಗೆ ಹಾಕಿದ್ದರು. ಆ ವೇಳೆಯೂ ಸಹ ಸೋನಿಯಾಗಾಂಧಿ ಸೇರಿದಂತೆ, ಎಲ್ಲ ಪಕ್ಷಗಳ ಮುಖಂಡರು ನನ್ನನ್ನು ಬೆಂಬಲಿಸಿದರು. ಡಿಕೆಶಿಗೆ ಅನ್ಯಾಯ ಆಗಿದೆ ಎಂದು ಪ್ರತಿಭಟನೆ ಮಾಡಿದರು. […]

ಬೆಂಗಳೂರು: CBI ದಾಳಿ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದರು. ಸದಾಶಿವನಗರದ ನಿವಾಸದಲ್ಲಿ ಡಿ.ಕೆ ಶಿವಕುಮಾರ್ ಮಾತನಾಡಿದರು.
2017ರಲ್ಲೂ ಇದೇ ಮನೆ ಮೇಲೆ ಐಟಿ ದಾಳಿ ನಡೆದಿತ್ತು. 2017ರಲ್ಲಿ ಗುಜರಾತ್ ಚುನಾವಣೆ ವೇಳೆ ಪ್ರಕರಣ ನಡೆದಿತ್ತು. 2019ರಲ್ಲಿ ಇಡಿ ಕೇಸ್ ಹಾಕಿ ಜೈಲಿಗೆ ಹಾಕಿದರು. 48 ದಿನ ತಿಹಾರ್ ಜೈಲಿಗೆ ಹಾಕಿದ್ದರು. ಆ ವೇಳೆಯೂ ಸಹ ಸೋನಿಯಾಗಾಂಧಿ ಸೇರಿದಂತೆ, ಎಲ್ಲ ಪಕ್ಷಗಳ ಮುಖಂಡರು ನನ್ನನ್ನು ಬೆಂಬಲಿಸಿದರು. ಡಿಕೆಶಿಗೆ ಅನ್ಯಾಯ ಆಗಿದೆ ಎಂದು ಪ್ರತಿಭಟನೆ ಮಾಡಿದರು. ಆದರೆ, ಕಮಿಷನರ್ ಪ್ರತಿಭಟನಾಕಾರರಿಗೆ ಬೆದರಿಕೆ ಹಾಕಿದ್ರು ಎಂದು ಹೇಳಿದರು.
ನಮ್ಮ ಜನ ತೋರಿಸಿದ ಪ್ರೀತಿ ಇದು. ಎಷ್ಟೋ ಮಠಮಾನ್ಯರು, ಧರ್ಮದ ಹಿರಿಯರು ಶಕ್ತಿ ಕೊಟ್ಟರು. ಇದೆಲ್ಲವನ್ನೂ ನಾನು ಮರೆಯಲು ಸಾಧ್ಯವೇ ಇಲ್ಲ. ತಿಹಾರ್ ಜೈಲಿನಿಂದ ಹೊರ ಬಂದ ಬಳಿಕವೂ ರಾಷ್ಟ್ರ, ರಾಜ್ಯದ ಮುಖಂಡರು, ಕಾರ್ಯಕರ್ತರ ಬೆಂಬಲ ಸಿಕ್ಕಿತು. ಜೈಲಿಂದ ಬಂದ ಬಳಿಕ ಮೆರವಣಿಗೆ ಬೇಕಾ ಎಂದು ಪ್ರಶ್ನಿಸಿದರು. ಅದೇ ಪರಪ್ಪನ ಅಗ್ರಹಾರದಿಂದ ಬಂದವರು ಹೇಗೆ ಬಂದರು ನೋಡಿ ಎಂದುರ. ಆದರೆ, ನಾನು ವಿಕ್ಟರಿ ಸಿಂಬಲ್ ತೋರಿಸಿಕೊಂಡು ಬರಲಿಲ್ಲ. ಜನರಿಗೆ ಕೈ ಮುಗಿದುಕೊಂಡು ನಾನು ಬಂದಿದ್ದೆ ಎಂದು ಶಿವಕುಮಾರ್ ಹೇಳಿದ್ದಾರೆ.
ಅದಾದ ಬಳಿಕ ಕೆಪಿಸಿಸಿ ಅಧ್ಯಕ್ಷನಾಗಿ ಮಾಡಿದರು. ನಮ್ಮ ಜನ ಕೊರೊನಾದಿಂದ ಬಳಲುತ್ತಿದ್ದಾರೆ. ಏಕಾಏಕಿ ಲಾಕ್ಡೌನ್ ಮಾಡಿದಾಗ ಒಪ್ಪಿಕೊಂಡೆವು. ಆಗಲೂ ನಾವು ಎಲ್ಲ ರೀತಿಯ ಸಹಕಾರ ಕೊಟ್ಟೆವು. ರೈತರು, ಕೃಷಿಕರು, ಬೀದಿ ಬದಿ ವ್ಯಾಪಾರಿಗಳು. ಸೇರಿದಂತೆ ಬಹುತೇಕರು ಹಸಿವಿನಿಂದ ಬಳಲುತ್ತಿದ್ದರು.20 ಲಕ್ಷ ಕೋಟಿ ಪ್ಯಾಕೇಜ್ ಎಂದು ಘೋಷಿಸಿದರು. ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ಹಣ ಎಲ್ಲಿ ಹೋಯ್ತು. ರಾಜ್ಯ ಸರ್ಕಾರದ 1,700 ಕೋಟಿ ಹಣ ಜನರಿಗೆ ತಲುಪಿಲ್ಲ. ಸರ್ಕಾರದ ಹಣ ಬಳಸಿಕೊಂಡು ಬಿಜೆಪಿ ಪಕ್ಷ ಕಟ್ಟುತ್ತಿದೆ ಅಂತಾ ಹೇಳಿದರು.
‘ನಾನು ಕದ್ದು ಓಡಿ ಹೋಗುವುದಿಲ್ಲ’ ಸಿಬಿಐನವರು ಯಾವಾಗ ಕರೆದರೂ ವಿಚಾರಣೆಗೆ ಹಾಜರು. ತನಿಖೆ ಮಾಡಲಿ, ಕೇಳಲಿ. ಉತ್ತರ ನೀಡಲು ಸಮರ್ಥನಿದ್ದೇನೆ. ನಾನು ಕದ್ದು ಓಡಿ ಹೋಗುವುದಿಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದರು. ಸಿಬಿಐ ತನಿಖೆಗೆ ಅನುಮತಿ ಕೊಟ್ಟಿರುವುದು ರಾಜ್ಯದ ಸಿಎಂ. ಎಜಿ ಹೇಳಿದರೂ ಕೇಳದ ಸಿಎಂ ಅನುಮತಿ ಕೊಟ್ಟಿದ್ದಾರೆ. ನನ್ನ ಮೇಲಿನ ಸಿಬಿಐ ದಾಳಿ ರಾಜಕೀಯಪ್ರೇರಿತವಾಗಿದೆ. ಉತ್ತರ ಪ್ರದೇಶದ ಘಟನೆ ಬಗ್ಗೆ ಇವರು ತುಟಿ ಬಿಚ್ಚಲ್ಲ. ಚುನಾವಣೆ ವೇಳೆ ಗಮನ ಬೇರೆಡೆ ಸೆಳೆಯಲು ದಾಳಿ ನಡೆಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು. ಕುತಂತ್ರಕ್ಕೆ ಹೆದರುವ ಮಗ ನಾನಲ್ಲ -ದಾಳಿ ಬಳಿಕ DK ಶಿವಕುಮಾರ್ ಘರ್ಜನೆ ಡಿ.ಕೆ ಶಿವಕುಮಾರ್, ಕುಟುಂಬಸ್ಥರ ವಿರುದ್ಧ 74.93 ಕೋಟಿ ಅಕ್ರಮ ಆಸ್ತಿ ಗಳಿಕೆ ಕೇಸ್: CBI
Published On - 7:11 pm, Mon, 5 October 20