AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುತಂತ್ರಕ್ಕೆ ಹೆದರುವ ಮಗ ನಾನಲ್ಲ -ದಾಳಿ ಬಳಿಕ DK ಶಿವಕುಮಾರ್ ಘರ್ಜನೆ

ಬೆಂಗಳೂರು: KPCC ಅಧ್ಯಕ್ಷ ಡಿ.ಕೆ ಶಿವಕುಮಾರ್​ ಮನೆ ಮೇಲೆ CBI ಅಧಿಕಾರಿಗಳು ದಾಳೆ ನಡೆಸಿದ ಬಳಿಕ ಹೊರಬಂದ ಶಿವಕುಮಾರ್​ ರೇಡ್​ ಬಗ್ಗೆ ಮಾತನಾಡಿದರು. ಸದಾಶಿವನಗರದಲ್ಲಿರುವ ತಮ್ಮ ನಿವಾಸಿದಿಂದ ಹೊರಬಂದ ಶಿವಕುಮಾರ್ ರೇಡ್​ ಬಗ್ಗೆ ಪ್ರತಿಕ್ರಿಯಿಸಿದರು. ನಿಮ್ಮ ಅಭಿಮಾನ, ಪ್ರೀತಿ ಮರೆಯಲು ಸಾಧ್ಯವಿಲ್ಲ. ಇಡೀ ದೇಶದ ಜನರು ನೋಡುತ್ತಿದ್ದಾರೆ. ಬೆಳಗ್ಗೆಯಿಂದ ಮನೆ ಮುಂದೆ ಅಥವಾ ರಸ್ತೆ ಇರಬಹುದು, ರಾಜ್ಯದಲ್ಲಿ, ಹೊರಗಡೆ ನನಗಾಗಿ ಮತ್ತು ಪಕ್ಷಕ್ಕೆ ಪ್ರೀತಿ ಅಭಿಮಾನ ತೋರಿಸಿದ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ ಎಂದು ಶಿವಕುಮಾರ್ ಪಕ್ಷದ […]

ಕುತಂತ್ರಕ್ಕೆ ಹೆದರುವ ಮಗ ನಾನಲ್ಲ -ದಾಳಿ ಬಳಿಕ DK ಶಿವಕುಮಾರ್ ಘರ್ಜನೆ
ಡಿ.ಕೆ.ಶಿವಕುಮಾರ್​
KUSHAL V
|

Updated on:Oct 05, 2020 | 7:24 PM

Share

ಬೆಂಗಳೂರು: KPCC ಅಧ್ಯಕ್ಷ ಡಿ.ಕೆ ಶಿವಕುಮಾರ್​ ಮನೆ ಮೇಲೆ CBI ಅಧಿಕಾರಿಗಳು ದಾಳೆ ನಡೆಸಿದ ಬಳಿಕ ಹೊರಬಂದ ಶಿವಕುಮಾರ್​ ರೇಡ್​ ಬಗ್ಗೆ ಮಾತನಾಡಿದರು. ಸದಾಶಿವನಗರದಲ್ಲಿರುವ ತಮ್ಮ ನಿವಾಸಿದಿಂದ ಹೊರಬಂದ ಶಿವಕುಮಾರ್ ರೇಡ್​ ಬಗ್ಗೆ ಪ್ರತಿಕ್ರಿಯಿಸಿದರು.

ನಿಮ್ಮ ಅಭಿಮಾನ, ಪ್ರೀತಿ ಮರೆಯಲು ಸಾಧ್ಯವಿಲ್ಲ. ಇಡೀ ದೇಶದ ಜನರು ನೋಡುತ್ತಿದ್ದಾರೆ. ಬೆಳಗ್ಗೆಯಿಂದ ಮನೆ ಮುಂದೆ ಅಥವಾ ರಸ್ತೆ ಇರಬಹುದು, ರಾಜ್ಯದಲ್ಲಿ, ಹೊರಗಡೆ ನನಗಾಗಿ ಮತ್ತು ಪಕ್ಷಕ್ಕೆ ಪ್ರೀತಿ ಅಭಿಮಾನ ತೋರಿಸಿದ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ ಎಂದು ಶಿವಕುಮಾರ್ ಪಕ್ಷದ ಕಾರ್ಯಕರ್ತರಿಗೆ ಹೇಳಿದರು.

ಪಕ್ಷ ಮತ್ತು ನಿಮಗೆ ಕಳಂಕ ತರುವಂಥ ಕೆಲಸ ನಿಮ್ಮ ಡಿಕೆಶಿ ಕುಟುಂಬ ಮಾಡಿಲ್ಲ. 2017ರಲ್ಲಿ ಗುಜರಾತ್ ಚುನಾವಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿ 2019ರಲ್ಲಿ ಇಡಿ ಕೇಸ್​ ಹಾಕಿ ನನ್ನ ಜೈಲಿಗೆ ಕಳುಹಿಸಿದ್ದರು. ಇದೀಗ, 2020ರಲ್ಲಿ ಮತ್ತೆ ದಾಳಿ ನಡೆಸಿದ್ದಾರೆ ಎಂದು ಹೇಳಿದರು.

‘ಇದು ಸಿಬಿಐ ಕೇಸ್​ ಅಲ್ಲ, ಆರ್ಥಿಕ ಅಪರಾಧ ಕೇಸ್’ ಪಾಪ ರಾಜ್ಯದ ಮುಖ್ಯಮಂತ್ರಿ AG ಹೇಳಿದರೂ ಕೇಳಲಿಲ್ಲ. ಇದು ಸಿಬಿಐ ಕೇಸ್​ ಅಲ್ಲ, ಆರ್ಥಿಕ ಅಪರಾಧ ಕೇಸ್. ಹೀಗೆಂದು ಹೇಳಿದರೂ ಈ ರಾಜ್ಯದ ಮುಖ್ಯಮಂತ್ರಿ ಸಿಬಿಐಗೆ ಪರ್ಮಿಷನ್​ ನೀಡಿದ್ದಾರೆ. ಆದರೆ, 30 ವರ್ಷದ ರಾಜಕಾರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ನಿಮ್ಮ ಕಾರ್ಯಕರ್ತ, ಶಾಸಕ, ಸಚಿವ, ಅಧ್ಯಕ್ಷನಾಗಿ ತಪ್ಪೆಸಗಿಲ್ಲ ಎಂದು ಶಿವಕುಮಾರ್​ ಹೇಳಿದರು.

ನಾನು ತಪ್ಪು ಮಾಡಿದ್ದರೆ ಮಾತ್ರ ಹೆದರಿಕೊಳ್ಳಬೇಕು. ಸರ್ಕಾರ ಹೇಳಿದಂಗೆ ಅಧಿಕಾರಿಗಳು ಕೇಳಬೇಕು. ಪ್ಯಾಂಟ್​, ಪಂಚೆ, ಸೀರೆ ಸೇರಿ ಎಲ್ಲಾ ಲೆಕ್ಕ ತೆಗೆದುಕೊಂಡಿದ್ದಾರೆ. ಸಿಬಿಐನವರಿಗೆ ವೃತ್ತಿಪರತೆ ಇದೆ, EDಯವರ ರೀತಿ ಅಲ್ಲ. ಈ ಬೈ ಎಲೆಕ್ಷನ್ ಆಗೋವರೆಗೂ ಈ ಕಾಟ ಇರುತ್ತೆ. ಸಿಬಿಐ ಅಧಿಕಾರಿಗಳು ಸರ್ಕಾರ ಹೇಳಿದಂತೆ ಕೇಳುತ್ತೆ. ನಾನು ಅಧಿಕಾರಕ್ಕೆ ಅಂಟಿಕೊಂಡು ಕೂರುವವನಲ್ಲ. ಈ ಕುತಂತ್ರಕ್ಕೆ ಹೆದರುವ ಮಗ ನಾನಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

ನಾನುಂಟು, ನೀವುಂಟು, ಭಕ್ತವುಂಟು, ಭಗವಂತ ಉಂಟು. ಈ ರೀತಿ ರಾಜಕೀಯವಾಗಿ ತೊಂದರೆ ಕೊಡ್ತಾರಲ್ಲ. ನನ್ನ ಬಾಯಿಯನ್ನ ಮುಚ್ಚಿಸುವ ಪ್ರಯತ್ನ ಯಾರು ಮಾಡ್ತಾರೋ ಇಂತಹವರಿಗೆ ಆ ದೇವರು ಒಳ್ಳೆಯದು ಮಾಡಲಿ ಎಂದು ಶಿವಕುಮಾರ್​ ಹೇಳಿದರು. ಅವರಿಗೆ ಈ ಉಪಚುನಾವಣೆಗಳಲ್ಲಿ ಉತ್ತರ ಕೊಡೋಣ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು. ‘ನಾನು ವಿಕ್ಟರಿ ಸಿಂಬಲ್​ ತೋರಿಸಿಕೊಂಡು ಬಂದಿಲ್ಲ, ಜನರಿಗೆ ಕೈ ಮುಗಿದುಕೊಂಡು ಬಂದಿದ್ದೆ’ ಡಿ.ಕೆ ಶಿವಕುಮಾರ್​, ಕುಟುಂಬಸ್ಥರ ವಿರುದ್ಧ 74.93 ಕೋಟಿ ಅಕ್ರಮ ಆಸ್ತಿ ಗಳಿಕೆ ಕೇಸ್: CBI

Published On - 6:29 pm, Mon, 5 October 20

ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ