ಕೊರೊನಾ ವರದಿಗಾಗಿ ಆಸ್ಪತ್ರೆ ಅಲೆದು ಅಲೆದು ಸುಸ್ತಾದ ಯುವತಿ

ಬೆಂಗಳೂರು: ಕೊರೊನಾದಿಂದ ಈಗಾಗಲೇ ನೊಂದಿರೋ ಮಂದಿಗೆ ಈ ಆಸ್ಪತ್ರೆಗಳು ಮತ್ತಷ್ಟು ನೋವನುಂಟು ಮಾಡುತ್ತಿವೆ. ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ಕೊರೊನಾ ವರದಿಗಾಗಿ ಯುವತಿ ಕಳೆದ ಒಂದು ವಾರದಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಮಾತ್ರ ಇದಕ್ಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ಯುವತಿ ಶನಿವಾರವೇ ಕೊರೊನಾ ಟೆಸ್ಟ್ ಮಾಡಿಸಿದ್ದರು. ಕಳೆದ 5 ದಿನಗಳಿಂದ ಆಸ್ಪತ್ರೆಗೆ ಅಲೆದು ಅಲೆದು ಸುಸ್ತಾಗಿದ್ದಾರೆ. 1 ವಾರ ಕಳೆದರೂ ಈವರೆಗೂ ವರದಿ ಕೊಡದೇ ಸತಾಯಿಸ್ತಿದ್ದಾರೆಂದು ಯುವತಿ […]

ಕೊರೊನಾ ವರದಿಗಾಗಿ ಆಸ್ಪತ್ರೆ ಅಲೆದು ಅಲೆದು ಸುಸ್ತಾದ ಯುವತಿ
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Jul 16, 2020 | 2:20 PM

ಬೆಂಗಳೂರು: ಕೊರೊನಾದಿಂದ ಈಗಾಗಲೇ ನೊಂದಿರೋ ಮಂದಿಗೆ ಈ ಆಸ್ಪತ್ರೆಗಳು ಮತ್ತಷ್ಟು ನೋವನುಂಟು ಮಾಡುತ್ತಿವೆ. ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ಕೊರೊನಾ ವರದಿಗಾಗಿ ಯುವತಿ ಕಳೆದ ಒಂದು ವಾರದಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಮಾತ್ರ ಇದಕ್ಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ಯುವತಿ ಶನಿವಾರವೇ ಕೊರೊನಾ ಟೆಸ್ಟ್ ಮಾಡಿಸಿದ್ದರು. ಕಳೆದ 5 ದಿನಗಳಿಂದ ಆಸ್ಪತ್ರೆಗೆ ಅಲೆದು ಅಲೆದು ಸುಸ್ತಾಗಿದ್ದಾರೆ. 1 ವಾರ ಕಳೆದರೂ ಈವರೆಗೂ ವರದಿ ಕೊಡದೇ ಸತಾಯಿಸ್ತಿದ್ದಾರೆಂದು ಯುವತಿ ಆರೋಪಿಸಿದ್ದಾರೆ.

ಈ ರೀತಿ ಆಸ್ಪತ್ರೆಗಳು ರಿಪೋರ್ಟ್ ಕೊಡಲು ಸತಾಯಿಸುವುದರಿಂದಲೇ ಸೋಂಕು ಮತ್ತಷ್ಟು ಬಲಿಷ್ಠವಾಗುತ್ತಿದೆ. ಸೋಂಕಿತರು ತಮಗೆ ಸೋಂಕು ತಗುಲಿರುವುದರ ಬಗ್ಗೆ ತಿಳಿಯದೇ ಎಲ್ಲಾ ಕಡೆ ಸುತ್ತಾಡುತ್ತಿದ್ದಾರೆ. ಸಮಯ ಮೀರಿದ್ರೆ ಸೋಂಕಿಗೆ ಬಲಿಯಾಗುತ್ತಿದ್ದಾರೆ.

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us