ಕೊರೊನಾ ಪಾಸಿಟಿವ್ ದೃಢಪಟ್ಟಾಗ ಆ ಮಹಿಳೆ ಮಾಡಿದ್ದೇನು?
ಮಂಡ್ಯ: ತನಗೆ ಕೊರೊನಾ ಪಾಸಿಟಿವ್ ಬಂದಿದೆ ಅನ್ನೊ ವಿಚಾರ ತಿಳಿಯುತ್ತಲೇ 35 ವರ್ಷದ ಮಹಿಳೆಯೊಬ್ಬರು ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಮಹಿಳೆ, ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದ ಟಿಬಿ ಬಡಾವಣೆ ನಿವಾಸಿ. ನಾಗಮಂಗಲ ತಾಲೂಕಿನ ಬೋಗಾದಿ ಗ್ರಾಮದ ಬಸವನಗುಡಿ ಬಳಿಯ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಮಹಿಳೆ, ಫೈನಾನ್ಸ್ ಕಂಪನಿಯೊಂದರಲ್ಲಿ ಹಣ ಸಂಗ್ರಹ ಕೆಲಸ ಮಾಡ್ತಿದ್ದರು. ಕಳೆದ ಬುಧವಾರದಂದು ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ವೈದ್ಯರು ವಿಚಾರ ತಿಳಿಸುತ್ತಿದ್ದಂತೆ ಮನೆಗೆ ಬಾರದೆ ನಾಲೆಗೆ ಹಾರಿ […]
ಮಂಡ್ಯ: ತನಗೆ ಕೊರೊನಾ ಪಾಸಿಟಿವ್ ಬಂದಿದೆ ಅನ್ನೊ ವಿಚಾರ ತಿಳಿಯುತ್ತಲೇ 35 ವರ್ಷದ ಮಹಿಳೆಯೊಬ್ಬರು ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಮಹಿಳೆ, ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದ ಟಿಬಿ ಬಡಾವಣೆ ನಿವಾಸಿ. ನಾಗಮಂಗಲ ತಾಲೂಕಿನ ಬೋಗಾದಿ ಗ್ರಾಮದ ಬಸವನಗುಡಿ ಬಳಿಯ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಮಹಿಳೆ, ಫೈನಾನ್ಸ್ ಕಂಪನಿಯೊಂದರಲ್ಲಿ ಹಣ ಸಂಗ್ರಹ ಕೆಲಸ ಮಾಡ್ತಿದ್ದರು. ಕಳೆದ ಬುಧವಾರದಂದು ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ವೈದ್ಯರು ವಿಚಾರ ತಿಳಿಸುತ್ತಿದ್ದಂತೆ ಮನೆಗೆ ಬಾರದೆ ನಾಲೆಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Published On - 11:01 am, Fri, 7 August 20