ಮನೆಯಿಂದ ಹೊರಹೋಗಿದ್ದ ಯುವತಿ ಅನುಮಾನಾಸ್ಪಾದ ಸಾವು, ರೈಲ್ವೆ ಗೇಟ್ ಬಳಿ ಶವ ಪತ್ತೆ
ಬೆಂಗಳೂರು ಗ್ರಾಮಾಂತರ: ಮನೆಯಿಂದ ನಿನ್ನೆ ಸಂಜೆ ತೆರಳಿದ್ದ ಯುವತಿ ಅನುಮಾನಾಸ್ಪಾದ ರೀತಿಯಲ್ಲಿ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಹೊಸಕೋಟೆ ತಾಲೂಕಿನ ನಡುವತ್ತಿಯ ರೈಲ್ವೆ ಗೇಟ್ ಬಳಿ ನಡೆದಿದೆ. ಜಿಲ್ಲೆಯ ಹೊಸಕೋಟೆ ತಾಲೂಕಿನ ಉಪ್ಪಾರಹಳ್ಳಿ ನಿವಾಸಿ ಭಾವನಾ (19) ಮೃತ ಯುವತಿ. ನಿನ್ನೆ ಸಂಜೆ ಮನೆಯಿಂದ ಹೊರಟ ಭಾವನಾ ಇಂದು ಅನುಮಾನಾಸ್ಪಾದ ರೀತಿಯಲ್ಲಿ ರೈಲ್ವೆ ಗೇಟ್ ಬಳಿ ಶವವಾಗಿ ಪತ್ತೆಯಾಗಿದ್ದಾಳೆ. ಕಳೆದ ಫೆಬ್ರವರಿಯಲ್ಲಿ ಗಜೇಂದ್ರ ಎಂಬ ಯುವಕನ ಜೊತೆ ಭಾವನಾ ವಿವಾಹವಾಗಿದ್ದಳು ಎಂದು ತಿಳಿದುಬಂದಿದೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ […]
Follow us on
ಬೆಂಗಳೂರು ಗ್ರಾಮಾಂತರ: ಮನೆಯಿಂದ ನಿನ್ನೆ ಸಂಜೆ ತೆರಳಿದ್ದ ಯುವತಿ ಅನುಮಾನಾಸ್ಪಾದ ರೀತಿಯಲ್ಲಿ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಹೊಸಕೋಟೆ ತಾಲೂಕಿನ ನಡುವತ್ತಿಯ ರೈಲ್ವೆ ಗೇಟ್ ಬಳಿ ನಡೆದಿದೆ. ಜಿಲ್ಲೆಯ ಹೊಸಕೋಟೆ ತಾಲೂಕಿನ ಉಪ್ಪಾರಹಳ್ಳಿ ನಿವಾಸಿ ಭಾವನಾ (19) ಮೃತ ಯುವತಿ.
ನಿನ್ನೆ ಸಂಜೆ ಮನೆಯಿಂದ ಹೊರಟ ಭಾವನಾ ಇಂದು ಅನುಮಾನಾಸ್ಪಾದ ರೀತಿಯಲ್ಲಿ ರೈಲ್ವೆ ಗೇಟ್ ಬಳಿ ಶವವಾಗಿ ಪತ್ತೆಯಾಗಿದ್ದಾಳೆ. ಕಳೆದ ಫೆಬ್ರವರಿಯಲ್ಲಿ ಗಜೇಂದ್ರ ಎಂಬ ಯುವಕನ ಜೊತೆ ಭಾವನಾ ವಿವಾಹವಾಗಿದ್ದಳು ಎಂದು ತಿಳಿದುಬಂದಿದೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.