ಉಡುಪಿ: ಸ್ಲಮ್ ಮಕ್ಳು ಆಂದ್ರೆ ಸಿರಿವಂತರಿಗೆ ಏನೋ ತಾತ್ಸಾರ. ಆದ್ರೆ ಉಡುಪಿಯ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬವೊಂದು ಕಳೆದ 14 ವರ್ಷಗಳಿಂದ ಸ್ಲಮ್ ಮಕ್ಕಳಿಗೆ ಉಚಿತ ಶಿಕ್ಷಣ, ಬಟ್ಟೆ ಬರೆ ನೀಡುವುದರ ಜೊತೆಗೆ ಅವರ ಆರೈಕೆ ಮಾಡುತ್ತಿದೆ. ಸದ್ಯ ಕೊರೊನಾ ಕಾರಣದಿಂದ ಶಾಲೆಗೆ ಹೋಗದ ಸ್ಲಮ್ ಮಕ್ಕಳಿಗೆ ಇವರ ಮನೆಯೇ ಪಾಠ ಶಾಲೆ.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಗಾದೆ ಮಾತಿನಂತೆ ಇಲ್ಲೊಬ್ಬ ಮಹಿಳೆ ಮಕ್ಕಳಿಗೆ ಶಿಕ್ಷಣ ದಾನ ಮಾಡ್ತಿದ್ದಾರೆ. ರೂಪಾ ಬಲ್ಲಾಳ್, ಉಡುಪಿ ಸಂಪ್ರದಾಯಸ್ಥ ಬ್ರಾಹ್ಮಣ ಮನೆತನದವರು. ಈಕೆ ವೃತ್ತಿಯಲ್ಲಿ ಯೋಗ ಥೆರಪಿಸ್ಟ್. ಇವರಿಗೆ ಬಡ ಮಕ್ಕಳನ್ನು ಕಂಡರೆ ಅಪಾರವಾದ ಪ್ರೀತಿ. ಅಂದಹಾಗೆ ಇವರು ಸ್ಲಮ್‌ನಲ್ಲಿರುವ ಬಡ ಮಕ್ಕಳನ್ನು ತಮ್ಮ ಮನೆಗೆ ಕರೆತಂದು ಉಚಿತವಾಗಿ ಪಾಠದ ವ್ಯವಸ್ಥೆ ಮಾಡಿದ್ದಾರೆ.
ಕೊರೊನಾ ಕಾರಣದಿಂದ ಶಾಲೆ ಇಲ್ಲ. ಹೀಗಾಗಿ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೂ ತಮ್ಮ ಮನೆಯ ಮಹಡಿ ಮೇಲೆ ಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ. ಮಕ್ಕಳ ಹ್ಯಾಂಡ್ ರೈಟಿಂಗ್ ತಿದ್ದುತ್ತಾರೆ. ಕನ್ನಡ, ಇಂಗ್ಲಿಷ್ ಸೇರಿದಂತೆ ಎಲ್ಲಾ ವಿಷಯಗಳ ಪಾಠ ಮಾಡುತ್ತಾರೆ.
ಎಲ್ಲದಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ಸಂಸ್ಕಾರದ ಬಗ್ಗೆ ಹೇಳಿ ಕೊಡುತ್ತಾರೆ. ಐದನೇ ತರಗತಿ ಬಳಿಕ ಅನೇಕ ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಿದ್ದಾರೆ. ಮಕ್ಕಳ ಪ್ರತಿಭೆ ಗುರುತಿಸಿ ಅವರನ್ನು ಭರತನಾಟ್ಯ, ಡ್ಯಾನ್ಸ್ ಕ್ಲಾಸ್‌ಗಳಿಗೂ ಸೇರಿಸಿದ್ದಾರೆ. ಎಲ್ಲಾ ಖರ್ಚುವೆಚ್ಚವೂ ಇವರದ್ದೇ.
Published On - 4:39 pm, Wed, 11 November 20