ಮಲೆ ಮಹದೇಶ್ವರ ದೇಗುಲದ ಲಡ್ಡು-ಪ್ರಸಾದ ಇನ್ನು ಆಹಾರ ಸುರಕ್ಷತೆಯ ಚೌಕಟ್ಟಿನಲ್ಲಿ ತಯಾರಿ
ಮೈಸೂರು: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಮೇಲಿರುವ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಸುರಕ್ಷಿತವಾದ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ ಒಂದು ಹೊಸ ಪ್ರಯೋಗವನ್ನು ಮಾಡಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯಡಿ (ಎಫ್ಎಸ್ಎಸ್ಎಐ-FSSAI) ಪರವಾನಗಿಯನ್ನು ಪಡೆದುಕೊಂಡಿದೆ. ಶ್ರೀ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ತಯಾರಿಸುವ ಲಡ್ಡುಗಳಿಗೆ ಮತ್ತು ತಯಾರಾದ ಆಹಾರ ಅಥವಾ ಪ್ರಸಾದಗಳಿಗೆ ಎಫ್ಎಸ್ಎಸ್ಎಐ ಪ್ರಮಾಣೀಕರಿಸಿದೆ. ಇದು 50,000 ಲಡ್ಡುಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದ್ದು, ಕೊರೊನಾ ಕಾರಣಕ್ಕಾಗಿ 20,000 ಲಡ್ಡುಗಳನ್ನು ಉತ್ಪಾದಿಸುತ್ತಿದೆ. ಶ್ರೀ ಮಲೆ ಮಹಾದೇಶ್ವರ ಕ್ಷೇತ್ರ […]
ಮೈಸೂರು: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಮೇಲಿರುವ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಸುರಕ್ಷಿತವಾದ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ ಒಂದು ಹೊಸ ಪ್ರಯೋಗವನ್ನು ಮಾಡಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯಡಿ (ಎಫ್ಎಸ್ಎಸ್ಎಐ-FSSAI) ಪರವಾನಗಿಯನ್ನು ಪಡೆದುಕೊಂಡಿದೆ.
ಶ್ರೀ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ತಯಾರಿಸುವ ಲಡ್ಡುಗಳಿಗೆ ಮತ್ತು ತಯಾರಾದ ಆಹಾರ ಅಥವಾ ಪ್ರಸಾದಗಳಿಗೆ ಎಫ್ಎಸ್ಎಸ್ಎಐ ಪ್ರಮಾಣೀಕರಿಸಿದೆ. ಇದು 50,000 ಲಡ್ಡುಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದ್ದು, ಕೊರೊನಾ ಕಾರಣಕ್ಕಾಗಿ 20,000 ಲಡ್ಡುಗಳನ್ನು ಉತ್ಪಾದಿಸುತ್ತಿದೆ.
ಶ್ರೀ ಮಲೆ ಮಹಾದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಆರು ತಿಂಗಳ ಹಿಂದೆ ಈ ಒಂದು ಎಫ್ಎಸ್ಎಸ್ಎಐ ಅಡಿಯಲ್ಲಿ ನೋಂದಣಿಯನ್ನು ಕೋರಿತ್ತು. ಇತ್ತೀಚೆಗೆ ಚಾಮರಾಜನಗರದ ನಿಯೋಜಿತ ಅಧಿಕಾರಿ ಈ ಪರವಾನಗಿಯನ್ನು ನೀಡಿದ್ದು, ಒಂದು ವರ್ಷ ಕಾಲ ಇದು ಅಸ್ತಿತ್ವದಲ್ಲಿ ಇರುತ್ತದೆ. ಕಾಯಿದೆ ಅಡಿ ನಿಗದಿಪಡಿಸಿದ ಷರತ್ತುಗಳನ್ನು ಪೂರೈಸುವ ಮೂಲಕ ಪ್ರತಿವರ್ಷ ನವೀಕರಿಸಬೇಕಾಗುತ್ತದೆ.
ಪ್ರಸಾದವನ್ನು ಸಿದ್ಧಪಡಿಸುವಾಗ ಕಾಯಿದೆಯಡಿ ನೀಡಲಾದ ಆಹಾರ ಸುರಕ್ಷತಾ ಮಾರ್ಗಸೂಚಿಯನ್ನು ಪಾಲಿಸುವುದು ಅಗತ್ಯವಾಗಿದ್ದು, ಈ ಸಂಬಂಧ ದೇಶದಾದ್ಯಂತ ಪೂಜಾ ಸ್ಥಳಗಳಿಗಾಗಿ ಎಫ್ಎಸ್ಎಸ್ಎಐ ಪ್ರಾರಂಭಿಸಿದ ಯೋಜನೆಯಾದ ಆನಂದಮಯ ನೈರ್ಮಲ್ಯ ಕೊಡುಗೆ ದೇವರಿಗೆ (ಬಿಎಚ್ಒಜಿ)ಯ ಒಂದು ಭಾಗವಾಗಿ ಪರವಾನಗಿಯನ್ನು ಪಡೆಯಲಾಗಿದೆ.
‘ನಾವು ಎಲ್ಲಾ ಕಡ್ಡಾಯ ನೋಂದಣಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದೇವೆ ಮತ್ತು ಅದರ ನಂತರ ನಮಗೆ ಪರವಾನಗಿ ನೀಡಲಾಯಿತು. ಪ್ರಸಾದ ತಯಾರಿಕೆಯಲ್ಲಿ ಹೆಚ್ಚಿನ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಪಾಲಿಸಬೇಕಾಗಿರುವುದರಿಂದ ಇದು ನಮ್ಮ ಜವಾಬ್ದಾರಿಗಳನ್ನು ದ್ವಿಗುಣಗೊಳಿಸಿದೆ’ -ಜಯ ವೈಭವ ಸ್ವಾಮಿ, ಪ್ರಾಧಿಕಾರದ ಕಾರ್ಯದರ್ಶಿ
ಲಡ್ಡುಗಳ ಬೆಲೆ: 100 ಗ್ರಾಂ ಲಡ್ಡು ತಯಾರಿಸಿದ ಖರ್ಚಿನ ಆಧಾರದ ಮೇಲೆ ಮಲೆ ಮಹಾದೇಶ್ವರ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರವು ಲಡ್ಡು ಪ್ರಸಾದದ ಬೆಲೆಯನ್ನು ನಿಗದಿ ಮಾಡಿದ್ದು, ಪ್ರತಿ ಲಡ್ಡುವಿನ ಬೆಲೆಯು 20 ರಿಂದ 25 ರೂಪಾಯಿಗೆ ಪರಿಷ್ಕರಿಸಲಾಗಿದೆ.