ಸಾಂಬಾರ್​ ಚೆಲ್ಲಿದ್ದಕ್ಕೆ ಹೊಟೇಲ್ ಸಪ್ಲೈಯರ್​ ಕಪಾಳಕ್ಕೆ ಹೊಡೆದ ಮಹಿಳೆ

|

Updated on: Jun 19, 2020 | 3:21 PM

ಹಾವೇರಿ: ಹೊಟೇಲಿನಲ್ಲಿ ತನ್ನ ಮೇಲೆ ಸಾಂಬಾರ್​ ಚೆಲ್ಲಿದ್ದಕ್ಕೆ ಮಹಿಳೆಯೊಬ್ಬರು ಸಪ್ಲೈಯರ್​ ಕಪಾಳಕ್ಕೆ ಹೊಡೆದ ಪ್ರಸಂಗ ನಡೆದಿದೆ. ಹಾವೇರಿ ಜಿಲ್ಲೆಯ ಹಾನಗಲ್​ ಪಟ್ಟಣದ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಪುರುಷನೊಂದಿಗೆ ಹೊಟೇಲ್ ಗೆ ತಿಂಡಿ ತಿನ್ನಲು ಬಂದಿದ್ದ ಮಹಿಳೆ ಕಪಾಳಮೋಕ್ಷ ಮಾಡಿದ್ದಾರೆ. ಸಾಂಬಾರ್ ಬಿದ್ದ ಕೂಡಲೆ ವೇಟರ್ ತನ್ನಿಂದ ತಪ್ಪಾಯಿತು ಎಂದು ಕ್ಷಮೆ ಯಾಚಿಸಿದ್ದ. ಆದರೂ ಆತನನ್ನು ಬಿಡದೆ ಕೆನ್ನೆಗೆ ಬಾರಿಸಿದ್ದಾಳೆ. ಅವಾಚ್ಯ ಪದಗಳಿಂದ‌ ನಿಂದಿಸಿದ್ದಾಳೆ. ವೇಟರ್ ಗೆ ಕಪಾಳಮೋಕ್ಷ ಮಾಡಿರೋ ದೃಶ್ಯ ಹೊಟೇಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. […]

ಸಾಂಬಾರ್​ ಚೆಲ್ಲಿದ್ದಕ್ಕೆ ಹೊಟೇಲ್ ಸಪ್ಲೈಯರ್​ ಕಪಾಳಕ್ಕೆ ಹೊಡೆದ ಮಹಿಳೆ
Follow us on

ಹಾವೇರಿ: ಹೊಟೇಲಿನಲ್ಲಿ ತನ್ನ ಮೇಲೆ ಸಾಂಬಾರ್​ ಚೆಲ್ಲಿದ್ದಕ್ಕೆ ಮಹಿಳೆಯೊಬ್ಬರು ಸಪ್ಲೈಯರ್​ ಕಪಾಳಕ್ಕೆ ಹೊಡೆದ ಪ್ರಸಂಗ ನಡೆದಿದೆ. ಹಾವೇರಿ ಜಿಲ್ಲೆಯ ಹಾನಗಲ್​ ಪಟ್ಟಣದ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ.

ಪುರುಷನೊಂದಿಗೆ ಹೊಟೇಲ್ ಗೆ ತಿಂಡಿ ತಿನ್ನಲು ಬಂದಿದ್ದ ಮಹಿಳೆ ಕಪಾಳಮೋಕ್ಷ ಮಾಡಿದ್ದಾರೆ. ಸಾಂಬಾರ್ ಬಿದ್ದ ಕೂಡಲೆ ವೇಟರ್ ತನ್ನಿಂದ ತಪ್ಪಾಯಿತು ಎಂದು ಕ್ಷಮೆ ಯಾಚಿಸಿದ್ದ. ಆದರೂ ಆತನನ್ನು ಬಿಡದೆ ಕೆನ್ನೆಗೆ ಬಾರಿಸಿದ್ದಾಳೆ. ಅವಾಚ್ಯ ಪದಗಳಿಂದ‌ ನಿಂದಿಸಿದ್ದಾಳೆ. ವೇಟರ್ ಗೆ ಕಪಾಳಮೋಕ್ಷ ಮಾಡಿರೋ ದೃಶ್ಯ ಹೊಟೇಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಕರಣ ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.