ಹೊಟ್ಟೆನೋವೆಂದು ಹೋದ ಮಹಿಳೆಗೆ 6 ಕೋಟಿ ರೂ. ಬಿಲ್.. ಮಣಿಪಾಲ್ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ..!

|

Updated on: Jan 31, 2021 | 10:13 AM

ಕೇವಲ ಹೊಟ್ಟೆ ನೋವು ಅಂತಾ ಬಂದವಳಿಗೆ ಯಡವಟ್ಟು ಮಾಡಿ ಕೋಮಾಗೆ ಕಳುಹಿಸಿದರು. ಐದು ವರ್ಷದಿಂದ ನನ್ನ ಹೆಂಡತಿ ಕೋಮಾದಲ್ಲಿದ್ದಾಳೆ. ಮೈಯೆಲ್ಲ ಗಾಯಗಳಾಗಿವೆ. ನನ್ನ ಪತ್ನಿ ನರಕಯಾತನೆ ಅನುಭವಿಸುತ್ತಿದ್ದಾಳೆ.

ಹೊಟ್ಟೆನೋವೆಂದು ಹೋದ ಮಹಿಳೆಗೆ 6 ಕೋಟಿ ರೂ. ಬಿಲ್.. ಮಣಿಪಾಲ್ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ..!
ಮಣಿಪಾಲ್ ಆಸ್ಪತ್ರೆ
Follow us on

ಬೆಂಗಳೂರು: ಹೊಟ್ಟೆನೋವೆಂದು ಆಸ್ಪತ್ರೆಗೆ ಹೋದ ಮಹಿಳೆಗೆ 6 ಕೋಟಿ ರೂ. ಬಿಲ್ ಮಾಡಿದ್ದಾರೆ ಎಂಬ ಗಂಭೀರ ಆರೋಪ ನಗರದ ಮಣಿಪಾಲ್ ಆಸ್ಪತ್ರೆ ವಿರುದ್ಧ ಕೇಳಿಬಂದಿದೆ.

ರಿಜೇಶ್ ನಾಯರ್ ಎಂಬುವವರು ಮಣಿಪಾಲ್ ಆಸ್ಪತ್ರೆ ವಿರುದ್ಧ ಆರೋಪ ಮಾಡುತ್ತಿದ್ದು, ಇಡೀ ಏಷ್ಯಾದಲ್ಲೇ ಇಂಥಹ ಪ್ರಕರಣ ಇದೇ ಇರಬಹುದು. ನನ್ನ ಪತ್ನಿ ಪೂನಮ್​ಳನ್ನ ಕೋಮಾಗೆ ಕಳುಹಿಸಿದ್ದಾರೆ ಯಡವಟ್ಟು ವೈದ್ಯರು. ಇದುವರೆಗೂ ಬರೋಬ್ಬದಿ 6 ಕೋಟಿ ಬಿಲ್ ಮಾಡಿದ್ದಾರೆ. ಆಟೋ ಮೀಟರ್​ನಂತೆ ಬಿಲ್ ಮೀಟರ್ ಏರಿಸುತ್ತಿದ್ದಾರೆ.

ಕೇವಲ ಹೊಟ್ಟೆ ನೋವು ಅಂತಾ ಬಂದವಳಿಗೆ ಯಡವಟ್ಟು ಮಾಡಿ ಕೋಮಾಗೆ ಕಳುಹಿಸಿದರು. ಐದು ವರ್ಷದಿಂದ ನನ್ನ ಹೆಂಡತಿ ಕೋಮಾದಲ್ಲಿದ್ದಾಳೆ. ಮೈಯೆಲ್ಲ ಗಾಯಗಳಾಗಿವೆ. ನನ್ನ ಪತ್ನಿ ನರಕಯಾತನೆ ಅನುಭವಿಸುತ್ತಿದ್ದಾಳೆ. ಪೊಲೀಸ್, ಸಿಎಂ, ಪಿಎಂ ಎಲ್ಲರಿಗೂ ದೂರು ನೀಡಿದ್ದೇನೆ. ಇವರು ನಮ್ಮಂಥಹವರ ಮೇಲೆ ಪ್ರಯೋಗ ನಡೆಸುತ್ತಾರೆ ಅಂತಾ ರೋಗಿಯ ಪತಿ ಮಣಿಪಾಲ್​ ಆಸ್ಪತ್ರೆಯ ವಿರುದ್ದ ಆರೋಪಿಸುತ್ತಿದ್ದಾರೆ.

ಬಾಕಿ ಹಣ ಪಾವತಿ ಮಾಡಿಲ್ಲವೆಂದು ಕೊರೊನಾ ಸೋಂಕಿತನ ಶವ ಇಟ್ಟುಕೊಂಡು ಸತಾಯಿಸಿದ್ದ ಆಸ್ಪತ್ರೆ; ಸಚಿವರ ಮಧ್ಯಪ್ರವೇಶ

Published On - 9:07 am, Sun, 31 January 21