13 ತಿಂಗಳ ವೇತನ ನೀಡದೆ ವಂಚನೆ ಆರೋಪ: ಕಾರ್ಮಿಕರಿಂದ DCಗೆ ದೂರು

| Updated By: ಸಾಧು ಶ್ರೀನಾಥ್​

Updated on: Oct 24, 2020 | 1:53 PM

ರಾಯಚೂರು: ಜಿಲ್ಲೆಯ ವಡ್ಲೂರ ಕ್ರಾಸ್ ಬಳಿ ಇರುವ ಸುರಾನಾ ಸ್ಟೀಲ್ ಕಂಪನಿ ತನ್ನ ಕಾರ್ಮಿಕರಿಗೆ ಮಕ್ಮಲ್‌ ಟೋಪಿ ಹಾಕಿದೆ ಎಂಬ ಆರೋಪ ಕೇಳಿಬಂದಿದೆ. ಕಂಪನಿ ತನ್ನ 170 ಜ‌ನ ಕಾರ್ಮಿಕರಿಗೆ 13 ತಿಂಗಳ ವೇತನ ನೀಡದೆ ವಂಚನೆ ಮಾಡಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಜೊತೆಗೆ, ಕಲಬುರಗಿ ಕಾರ್ಮಿಕ‌ ಉಪ ಆಯುಕ್ತರು ಈ ಹಿಂದೆ ಕಾರ್ಮಿಕರ 13 ತಿಂಗಳ ವೇತನವಾದ 4 ಕೋಟಿ ರೂಪಾಯಿಯನ್ನು ನೀಡುವಂತೆ ಆದೇಶಿಸಿದ್ದರಂತೆ. ಆದರೆ, ಉಪ ಆಯುಕ್ತರ ಆದೇಶವನ್ನು ಕಂಪನಿ ಪಾಲಿಸಿಲ್ಲ ಎಂದು ಕಾರ್ಮಿಕರು […]

13 ತಿಂಗಳ ವೇತನ ನೀಡದೆ ವಂಚನೆ ಆರೋಪ: ಕಾರ್ಮಿಕರಿಂದ DCಗೆ ದೂರು
Follow us on

ರಾಯಚೂರು: ಜಿಲ್ಲೆಯ ವಡ್ಲೂರ ಕ್ರಾಸ್ ಬಳಿ ಇರುವ ಸುರಾನಾ ಸ್ಟೀಲ್ ಕಂಪನಿ ತನ್ನ ಕಾರ್ಮಿಕರಿಗೆ ಮಕ್ಮಲ್‌ ಟೋಪಿ ಹಾಕಿದೆ ಎಂಬ ಆರೋಪ ಕೇಳಿಬಂದಿದೆ.

ಕಂಪನಿ ತನ್ನ 170 ಜ‌ನ ಕಾರ್ಮಿಕರಿಗೆ 13 ತಿಂಗಳ ವೇತನ ನೀಡದೆ ವಂಚನೆ ಮಾಡಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಜೊತೆಗೆ, ಕಲಬುರಗಿ ಕಾರ್ಮಿಕ‌ ಉಪ ಆಯುಕ್ತರು ಈ ಹಿಂದೆ ಕಾರ್ಮಿಕರ 13 ತಿಂಗಳ ವೇತನವಾದ 4 ಕೋಟಿ ರೂಪಾಯಿಯನ್ನು ನೀಡುವಂತೆ ಆದೇಶಿಸಿದ್ದರಂತೆ. ಆದರೆ, ಉಪ ಆಯುಕ್ತರ ಆದೇಶವನ್ನು ಕಂಪನಿ ಪಾಲಿಸಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಈ ಕುರಿತು ಜಿಲ್ಲಾ ತಹಶೀಲ್ದಾರರು ಎರಡು ಬಾರಿ ಕಂಪನಿಗೆ ಸಮನ್ಸ್ ಕೂಡ ಜಾರಿ ಮಾಡಿದ್ದರು ಎಂದು ತಿಳಿದುಬಂದಿದೆ. ಆದ್ರೂ ಕಾರ್ಮಿಕರಿಗೆ ವೇತನ ನೀಡದೆ ಅನ್ಯಾಯ ಎಸಗಲಾಗಿದೆ ಎಂದು ಕಾರ್ಮಿಕರು ಇಂದು ಡಿಸಿಗೆ ದೂರು ಸಲ್ಲಿಸಿದರು.