ದಸರಾ ಸಂಭ್ರಮ ಕಣ್ತುಂಬಿಕೊಂಡ ತ್ರಿಶಿಕಾ ಕುಮಾರಿ, ಆದ್ಯವೀರ್

ಮೈಸೂರು: ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ನಾಡಹಬ್ಬ ದಸರಾವನ್ನು ಸರಳವಾಗಿ ಮಾಡಲಾಗುತ್ತಿದೆ. ಇಂದು ಅರಮನೆಯಲ್ಲಿ ಜಂಬೂ ಸವಾರಿ ನಡೆಯಲಿದ್ದು ಪೂಜೆ ಕೈಂಕರ್ಯಗಳು ನಡೆಯುತ್ತಿವೆ. ಕೊರೊನಾ ನಡುವೆ ಅರಮನೆಯಲ್ಲಿ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ವೇಳೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಶಿಕಾ ಕುಮಾರಿ ಮತ್ತು ಯುವರಾಜ ಶ್ರೀ ಆದ್ಯವೀರ್ ನರಸಿಂಹರಾಜ ಒಡೆಯರ್  ವಿಜಯಯಾತ್ರೆ ವೀಕ್ಷಿಸಿದ್ದಾರೆ. ದಸರಾ ಸಂಭ್ರಮವನ್ನು ಯದುವೀರ್ ಕುಟುಂಬ ಕಣ್ತುಂಬಿ ಕೊಂಡ ದೃಶ್ಯ, ಯುವರಾಜನ ತುಂಟತನ ಕ್ಯಾಮರಾ ಕಣ್ಣಿಗೆ ಬಿದ್ದಿದೆ.

ದಸರಾ ಸಂಭ್ರಮ ಕಣ್ತುಂಬಿಕೊಂಡ ತ್ರಿಶಿಕಾ ಕುಮಾರಿ, ಆದ್ಯವೀರ್

Updated on: Oct 26, 2020 | 1:28 PM

ಮೈಸೂರು: ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ನಾಡಹಬ್ಬ ದಸರಾವನ್ನು ಸರಳವಾಗಿ ಮಾಡಲಾಗುತ್ತಿದೆ. ಇಂದು ಅರಮನೆಯಲ್ಲಿ ಜಂಬೂ ಸವಾರಿ ನಡೆಯಲಿದ್ದು ಪೂಜೆ ಕೈಂಕರ್ಯಗಳು ನಡೆಯುತ್ತಿವೆ. ಕೊರೊನಾ ನಡುವೆ ಅರಮನೆಯಲ್ಲಿ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ.

ಈ ವೇಳೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಶಿಕಾ ಕುಮಾರಿ ಮತ್ತು ಯುವರಾಜ ಶ್ರೀ ಆದ್ಯವೀರ್ ನರಸಿಂಹರಾಜ ಒಡೆಯರ್  ವಿಜಯಯಾತ್ರೆ ವೀಕ್ಷಿಸಿದ್ದಾರೆ. ದಸರಾ ಸಂಭ್ರಮವನ್ನು ಯದುವೀರ್ ಕುಟುಂಬ ಕಣ್ತುಂಬಿ ಕೊಂಡ ದೃಶ್ಯ, ಯುವರಾಜನ ತುಂಟತನ ಕ್ಯಾಮರಾ ಕಣ್ಣಿಗೆ ಬಿದ್ದಿದೆ.