ಡಾ. ರಾಜೇಶ್​ ಅವಸರಕ್ಕೆ ಬಿದ್ದು ಬಿಜೆಪಿ ಸೇರಿದ್ದು.. ಆಪ್ತ ಗೆಳೆಯನ ಬಗ್ಗೆ ಮಾತನಾಡಿದ ಡಾ.ಯತೀಂದ್ರ

ತುಮಕೂರು: ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡರು ನನ್ನ ಸ್ನೇಹಿತರೇ. ಆದರೆ, ವೈಯಕ್ತಿಕ ಸಂಬಂಧಗಳೇ ಬೇರೆ ರಾಜಕೀಯವೇ ಬೇರೆ. ರಾಜೇಶ್​ ನನಗೆ ಸ್ನೇಹಿತರಾಗಿದ್ದಾಗ ಅವರ ತಂದೆ ಕಾಂಗ್ರೆಸ್ ನಿಂದ ಲೋಕಸಭಾ ಸದಸ್ಯರಾಗಿದ್ದರು ಎಂದು ಕಾಂಗ್ರೆಸ್​ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಆಪ್ತಸ್ನೇಹಿತ ಹಾಗೂ ಬಿಜೆಪಿ ಅಭ್ಯರ್ಥಿಯಾದ ರಾಜೇಶ್​ ಗೌಡ ವಿರುದ್ಧವೇ ಇಂದು ಕಾಂಗ್ರೆಸ್​ ಶಾಸಕ ಯತೀಂದ್ರ ಸಿದ್ದರಾಮಯ್ಯ ಪ್ರಚಾರಕ್ಕಿಳಿದರು. ಶಿರಾ ಉಪಸಮರದ ಪ್ರಚಾರ ಸಭೆಯಲ್ಲಿ ಭಾಗಿಯಾದ ಯತೀಂದ್ರ ಸಿದ್ದರಾಮಯ್ಯ ಶಿರಾ ನಗರ ಮತ್ತು ಗೌಡಗೆರೆಯಲ್ಲಿ ಕೈ ಅಭ್ಯರ್ಥಿ ಟಿ.ಬಿ. […]

ಡಾ. ರಾಜೇಶ್​ ಅವಸರಕ್ಕೆ ಬಿದ್ದು ಬಿಜೆಪಿ ಸೇರಿದ್ದು.. ಆಪ್ತ ಗೆಳೆಯನ ಬಗ್ಗೆ ಮಾತನಾಡಿದ ಡಾ.ಯತೀಂದ್ರ

Updated on: Oct 19, 2020 | 2:23 PM

ತುಮಕೂರು: ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡರು ನನ್ನ ಸ್ನೇಹಿತರೇ. ಆದರೆ, ವೈಯಕ್ತಿಕ ಸಂಬಂಧಗಳೇ ಬೇರೆ ರಾಜಕೀಯವೇ ಬೇರೆ. ರಾಜೇಶ್​ ನನಗೆ ಸ್ನೇಹಿತರಾಗಿದ್ದಾಗ ಅವರ ತಂದೆ ಕಾಂಗ್ರೆಸ್ ನಿಂದ ಲೋಕಸಭಾ ಸದಸ್ಯರಾಗಿದ್ದರು ಎಂದು ಕಾಂಗ್ರೆಸ್​ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಆಪ್ತಸ್ನೇಹಿತ ಹಾಗೂ ಬಿಜೆಪಿ ಅಭ್ಯರ್ಥಿಯಾದ ರಾಜೇಶ್​ ಗೌಡ ವಿರುದ್ಧವೇ ಇಂದು ಕಾಂಗ್ರೆಸ್​ ಶಾಸಕ ಯತೀಂದ್ರ ಸಿದ್ದರಾಮಯ್ಯ ಪ್ರಚಾರಕ್ಕಿಳಿದರು.
ಶಿರಾ ಉಪಸಮರದ ಪ್ರಚಾರ ಸಭೆಯಲ್ಲಿ ಭಾಗಿಯಾದ ಯತೀಂದ್ರ ಸಿದ್ದರಾಮಯ್ಯ ಶಿರಾ ನಗರ ಮತ್ತು ಗೌಡಗೆರೆಯಲ್ಲಿ ಕೈ ಅಭ್ಯರ್ಥಿ ಟಿ.ಬಿ. ಜಯಚಂದ್ರ ಪರ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಹಾಗೂ ಯತೀಂದ್ರ ಆಪ್ತಸ್ನೇಹಿತರಾಗಿರುವ ಹಿನ್ನೆಲೆಯಲ್ಲಿ ಪ್ರಚಾರ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ನಾವು ಲ್ಯಾಬ್ ಕೂಡ ಜೊತೆಗೆ ಮಾಡಿದ್ವಿ. ಆಮೇಲೆ ಆಚೆ ಬಂದ್ವಿ. ಕಾಂಗ್ರೆಸ್​ನಿಂದ ಟಿಕೆಟ್ ಕೊಡಿ ಅಂತಾ ರಾಜೇಶ್​ ಕೇಳಿಕೊಂಡಿದ್ರು. ಆದರೆ, ಟಿ.ಬಿ.ಜಯಚಂದ್ರ ನಮ್ಮ ಹಿರಿಯರು. ಅವರೇ ಅಭ್ಯರ್ಥಿ ಅಂತಾ ಹೇಳಿದ್ವಿ. ಟಿಕೆಟ್ ಕೊಡೋಕೆ ಆಗಲ್ಲ,ಪಕ್ಷಕ್ಕೆ ಸೇರಿ ಕೆಲಸ ಮಾಡಿ ಅಂತಾ ಹೇಳಿದ್ವಿ. ಆದರೆ, ರಾಜೇಶ್​ ಗೌಡ ಅವಸರಕ್ಕೆ ಟಿಕೆಟ್ ಬೇಕಿತ್ತು, ಹಾಗಾಗಿ ಬಿಜೆಪಿ ಸೇರಿದರು ಎಂದು ಯತೀಂದ್ರ ಹೇಳಿದರು.

ಅವರು ಸ್ನೇಹಿತರು ಅನ್ನೋ ಕಾರಣಕ್ಕೆ ನಾನು ಪಕ್ಷನಿಷ್ಠೆ ಬಿಡೋಕೆ ಆಗಲ್ಲ. ರಾಜೇಶ್ ಗೌಡಗೆ ಯತೀಂದ್ರ ಬೆಂಬಲ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಅದು ಬಿಜೆಪಿಯ ಅಪಪ್ರಚಾರ ಅಷ್ಟೆ. ಹಾಗೆಲ್ಲಾ ಏನು ಇಲ್ಲ ಎಂದು ಉತ್ತರಿಸಿದರು.