ಕಪಾಲಬೆಟ್ಟದಲ್ಲಿ ಕಾಮಗಾರಿಗೆ ತಡೆಯೊಡ್ಡಿದ ಹೈಕೋರ್ಟ್: ಡಿ.ಕೆ. ಸಹೋದರರಿಗೆ ಹಿನ್ನಡೆ
ಬೆಂಗಳೂರು: ಅನೇಕ ವಿವಾದಗಳನ್ನು ಹೊತ್ತು ನಿಂತಿರುವ ಕನಕಪುರದ ಕಪಾಲಬೆಟ್ಟದಲ್ಲಿ ಕಾಮಗಾರಿಗೆ ಹೈಕೋರ್ಟ್ ತಡೆ ನೀಡಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಸಹೋದರರಿಗೆ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಕನಕಪುರದ ಕಪಾಲಬೆಟ್ಟದಲ್ಲಿ ಚರ್ಚ್ ನಿರ್ಮಾಣಕ್ಕಾಗಿ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಮನವಿಯಂತೆ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್‌ಗೆ 10 ಎಕರೆ ಜಮೀನು ಮಂಜೂರು ಮಾಡಲಾಗಿತ್ತು. ಆದರೆ ಭೂಮಿ ಮಂಜೂರು ಪ್ರಶ್ನಿಸಿ ಹಾರೋಬೆಲೆಯ ಆಂಥೋಣಿಸ್ವಾಮಿ ಮತ್ತಿತರು ಪಿ.ಐ.ಎಲ್. ಸಲ್ಲಿಸಿದ್ದರು. ಕ್ರೈಸ್ತ ಧರ್ಮೀಯರು ಕೇಳದಿದ್ದರೂ ಭೂಮಿ ಮಂಜೂರು ಮಾಡಲಾಗಿದೆ. ಸ್ವಹಿತಾಸಕ್ತಿಗಾಗಿ ಡಿಕೆಶಿ ಭೂಮಿ ಮಂಜೂರು ಮಾಡಿಸಿದ್ದಾರೆ. ಇದರಿಂದ ಕೋಮು ಸೌಹಾರ್ದತೆಗೆ […]

ಬೆಂಗಳೂರು: ಅನೇಕ ವಿವಾದಗಳನ್ನು ಹೊತ್ತು ನಿಂತಿರುವ ಕನಕಪುರದ ಕಪಾಲಬೆಟ್ಟದಲ್ಲಿ ಕಾಮಗಾರಿಗೆ ಹೈಕೋರ್ಟ್ ತಡೆ ನೀಡಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಸಹೋದರರಿಗೆ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ.
ಕನಕಪುರದ ಕಪಾಲಬೆಟ್ಟದಲ್ಲಿ ಚರ್ಚ್ ನಿರ್ಮಾಣಕ್ಕಾಗಿ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಮನವಿಯಂತೆ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್‌ಗೆ 10 ಎಕರೆ ಜಮೀನು ಮಂಜೂರು ಮಾಡಲಾಗಿತ್ತು. ಆದರೆ ಭೂಮಿ ಮಂಜೂರು ಪ್ರಶ್ನಿಸಿ ಹಾರೋಬೆಲೆಯ ಆಂಥೋಣಿಸ್ವಾಮಿ ಮತ್ತಿತರು ಪಿ.ಐ.ಎಲ್. ಸಲ್ಲಿಸಿದ್ದರು.
ಕ್ರೈಸ್ತ ಧರ್ಮೀಯರು ಕೇಳದಿದ್ದರೂ ಭೂಮಿ ಮಂಜೂರು ಮಾಡಲಾಗಿದೆ. ಸ್ವಹಿತಾಸಕ್ತಿಗಾಗಿ ಡಿಕೆಶಿ ಭೂಮಿ ಮಂಜೂರು ಮಾಡಿಸಿದ್ದಾರೆ. ಇದರಿಂದ ಕೋಮು ಸೌಹಾರ್ದತೆಗೆ ಧಕ್ಕೆಯಾಗಲಿದೆ ಎಂದು ಹಂಚಿಕೆ ರದ್ದುಪಡಿಸಲು ಗ್ರಾಮಸ್ಥರು ಪಿ.ಐ.ಎಲ್. ಸಲ್ಲಿಸಿದ್ದರು. ಸದ್ಯ 10 ಎಕರೆ ಜಮೀನು ಹಂಚಿಕೆ ಪ್ರಶ್ನಿಸಿದ್ದ ಪಿಐಎಲ್ ವಿಚಾರಣೆ ಇಂದು ನಡೆದಿದ್ದು ಡಿ.ಕೆ.ಬ್ರದರ್ಸ್ಗೆ ಹಿನ್ನಡೆಯಾಗಿದೆ.
Published On - 1:43 pm, Mon, 19 October 20




