ಶಿವಮೊಗ್ಗ ಹೊರವಲಯದಲ್ಲಿ ಯುವಕನ ಬರ್ಬರ ಹತ್ಯೆ

ಸದ್ಯ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಂಜೀವ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿವಮೊಗ್ಗ ಹೊರವಲಯದಲ್ಲಿ ಯುವಕನ ಬರ್ಬರ ಹತ್ಯೆ
ಮೃತ ಕಾರ್ತಿಕ್ ಶವ ಪತ್ತೆಯಾದ ಸ್ಥಳ
Edited By:

Updated on: Dec 15, 2020 | 7:03 PM

ಶಿವಮೊಗ್ಗ: ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಶಿವಮೊಗ್ಗ ಹೊರವಲಯದ ಹರಿಗೆಯ ಕೆಇಬಿ ಕ್ವಾಟ್ರಸ್ ಹಿಂಭಾಗದಲ್ಲಿ ನಡೆದಿದೆ. ಸದ್ಯ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಂಜೀವ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾರ್ತಿಕ್ ಕಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿತು.

ಶಿವಮೊಗ್ಗದ ಸುಭಾಷ್ ನಗರದ ನಿವಾಸಿಯಾದ ಕಾರ್ತಿಕ್ (23) ಇಂದು ಮಧ್ಯಾಹ್ನ ಕೊಲೆಯಾಗಿದ್ದು, 5 ದಿನಗಳ ಹಿಂದೆಯಷ್ಟೇ ಕಾರ್ತಿಕ್ ಪ್ರೀತಿಸಿದ್ದ ಯುವತಿ ಅಮೃತಾ ಕೂಡ ಕೋಟೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಯುವತಿ ಜತೆಗಿನ ಪ್ರೀತಿಯೇ ಕೊಲೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ಕೊಲೆಯಾದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು

ಚಾಕುವಿನಿಂದ ಇರಿದು ಯುವಕನ ಕೊಲೆಗೈದ ಸಹೋದ್ಯೋಗಿಗಳು, ಏಕೆ?