ಮಂಗಳೂರು: ಮಾಸ್ಕ್ ಧರಿಸಿ ಅಂಗಡಿಯೊಳಗೆ ಬರಲು ಸೂಚಿಸಿದಕ್ಕೆ ಅಂಗಡಿ ಸಿಬ್ಬಂದಿಯ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ನಿನ್ನೆ ನಡೆದಿದೆ.
ಪುತ್ತೂರಿನ ರಿಲಯನ್ಸ್ ಮಾರ್ಟ್ಗೆ ಮಾಸ್ಕ್ ಇಲ್ಲದೆ ಅಂಗಡಿ ಪ್ರವೇಶಿಸಲು ಯತ್ನಿಸಿದ ಯುವಕರ ತಂಡಕ್ಕೆ ಮಾಸ್ಕ್ ಧರಿಸಿ ಬರುವಂತೆ ಸೆಕ್ಯುರಿಟಿ ಗಾರ್ಡ್ ತಿಳಿಸಿದ್ದಾನೆ. ಅದಕ್ಕೆ ರೊಚ್ಚಿಗೆದ್ದ ಯುವಕರ ತಂಡ ಸೆಕ್ಯುರಿಟಿ ಗಾರ್ಡ್ ಜೊತೆ ಘರ್ಷಣೆಗಿಳಿದಿದ್ದಾರೆ.
ಈ ವೇಳೆ ರಿಲಯನ್ಸ್ ಮಾರ್ಟ್ ಸಿಬ್ಬಂದಿಗೆ ಹೆಲ್ಮೆಟ್ ನಿಂದ ಹಲ್ಲೆ ಮಾಡಿದ್ದಾರೆ. ಮಾಸ್ಕ್ ವಿಚಾರಕ್ಕೆ ಸಿಬ್ಬಂದಿ ಮತ್ತು ಯುವಕರ ನಡುವೆ ಮಾರಾಮಾರಿಯಾಗಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 10:56 am, Wed, 27 May 20