ನೆಲಮಂಗಲ: ಆಸ್ತಿ ವಿಚಾರಕ್ಕೆ ಗಲಾಟೆ ನಡೆದು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಿರಂಜೀವಿ(28)ಮೃತ ದುರ್ದೈವಿ.
ಬೆಟ್ಟಹಳ್ಳಿ ಗ್ರಾಮದ ಚಿರಂಜೀವಿ ಎಂಬ ಯುವಕ ಸೋದರ ಮಾವನ ಮನೆಯಲ್ಲಿ ವಾಸವಾಗಿದ್ದ. ಆಸ್ತಿ ವಿಚಾರಕ್ಕೆ ಇವರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಮನನೊಂದ ಯುವಕ ಮಾವನ ಮನೆಯಲ್ಲೇ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ ಕೆಲವರು ಬೇರೆ ರೀತಿಯೇ ಆರೋಪಿಸಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಂಬಂಧಿಕನಿಂದಲೇ ಮಹಿಳೆಯ ಭೀಕರ ಕೊಲೆ, ಚಾಕುವಿನಿಂದ ಇರಿದು ಎಸ್ಕೇಪ್ ಆದ..