ವಿಜಯಪುರ: ಭೀಮಾ ನದಿಯಲ್ಲಿ ತುಂಬಿ ಹರಿಯುತ್ತಿದ್ದ ಬ್ಯಾರೇಜ್ ದಾಟುತ್ತಿದ್ದ ಯುವಕ ಬೈಕ್ ಸಮೇತ ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಉಮರಾಣಿ ಬಳಿಯ ಉಮರಾಣಿ-ಲವಗಿ ಬ್ಯಾರೇಜ್ ಬಳಿ ನಡೆದಿದೆ.
ಹತ್ತಳ್ಳಿ ಗ್ರಾಮದ ಯುವಕ ರಮೇಶ ದುಂಡಪ್ಪ ಬಸರಗಿ (25) ನದಿಯ ಪಾಲಾದ ಯುವಕನಾಗಿದ್ದು, ನೆರೆಯ ಮಹಾರಾಷ್ಟ್ರದಿಂದ ವಾಪಸ್ ಆಗಮಿಸುವ ವೇಳೆ ಈ ಅವಘಡ ಸಂಭವಿಸಿದೆ. ನದಿಯಲ್ಲಿ ಕೊಚ್ಚಿ ಹೋಗಿರುವ ಯುವಕನ ಶವಕ್ಕಾಗಿ ಶೋಧ ಕಾರ್ಯ ಆರಂಭವಾಗಿದ್ದು, ಯುವಕನ ಶವ ಇನ್ನೂ ಪತ್ತೆಯಾಗಿಲ್ಲ.
ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಚಡಚಣ ತಹಸೀಲ್ದಾರ ಆರ್ ಎಸ್ ರೇವಡಿಗಾರ, ಹಾಗೂ ಚಡಚಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Published On - 9:22 am, Sat, 12 September 20