ಸದ್ಯದಲ್ಲೇ CCB ಕೈ ಸೇರಲಿದೆ ರಾಗಿಣಿ ಹೈಪೋನ್‌ ಮೆಸೇಜ್​ಗಳು, ಮುಂದಿದೆ ಮಾರಿಹಬ್ಬ!

ಸದ್ಯದಲ್ಲೇ CCB ಕೈ ಸೇರಲಿದೆ ರಾಗಿಣಿ ಹೈಪೋನ್‌ ಮೆಸೇಜ್​ಗಳು, ಮುಂದಿದೆ ಮಾರಿಹಬ್ಬ!

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ CCB ಇಂದ ಬಂಧನಕ್ಕೊಳಗಾಗಿರುವ ಆರೋಪಿಗಳ ಟೆಕ್ನಿಕಲ್ ಎವಿಡೆನ್ಸ್‌ಗಳೇ ಡ್ರಗ್ಸ್ ಕೇಸ್‌ನ ಜೀವಾಳವಾಗಿದೆ.

ನಟಿ ರಾಗಿಣಿಯ ಎರಡು ಮೊಬೈಲ್‌ ಪೋನ್‌ಗಳು, ರವಿಶಂಕರ್ ಮೊಬೈಲ್ ಪೋನ್‌ಗಳು, ಲೂಪ್‌ ಪೆಪ್ಪರ್ ಬಳಸುತ್ತಿದ್ದ ಮೊಬೈಲ್, ಪ್ರಶಾಂತ್ ರಂಕಾ ಬಳಸುತ್ತಿದ್ದ ಮೊಬೈಲುಗಳಲ್ಲಿದ್ದ ಎಲ್ಲಾ ಡಾಟಾ ರಿಟ್ರೀವ್ ಆಗಿವೆ. ಕಳೆದೊಂದು ವರ್ಷದಿಂದ ನಡೆಸಿದ್ದ ಚಾಟಿಂಗ್‌ಗಳು ಸಹ ಸಿಸಿಬಿ ಕೈಸೇರಲಿವೆ.

ಗೌರಿ ಹತ್ಯೆ​ ಪ್ರಕರಣದಲ್ಲಿ ಟೆಕ್ನಿಕಲ್ ವಿಭಾಗ ನೋಡಿಕೊಂಡಿದ್ದ ಅಧಿಕಾರಿಯೇ ಈ ಕೇಸ್‌ನಲ್ಲಿಯೂ ಕೆಲಸ
ಸಿಸಿಬಿ ಟೆಕ್ನಿಕಲ್ ಸೆಂಟರ್‌ ಇದಕ್ಕಾಗಿಯೇ ಕೆಲಸ ಮಾಡುತ್ತಿದ್ದು, ಸಿಸಿಬಿ ಸಿಬ್ಬಂದಿ ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ಗೌರಿ ಲಂಕೇಶ್​ ಪ್ರಕರಣದಲ್ಲಿ ಟೆಕ್ನಿಕಲ್ ವಿಭಾಗ ನೋಡಿಕೊಂಡಿದ್ದ ಅಧಿಕಾರಿಯೇ ಈ ಕೇಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಲೋಕಷನ್‌ ಸಹಿತ ಸಾಕ್ಷಿ ಮುಂದಿಡಲೂ ತಯಾರಿ..
ಜೊತೆಗೆ ರಾಗಿಣಿಯ ಹೈಪೋನ್‌ಗಳಲ್ಲಿ ಡಾಟಾ ಕೆಲವೇ ದಿನಗಳಲ್ಲಿ ಸಿಸಿಬಿ ಕೈ ಸೇರಲಿದೆ. ಚಾಟ್ ಮಾಡಿರುವ ಮಾಹಿತಿಗಳನ್ನ ಟೈಮಿಂಗ್ ಅನುಸಾರವಾಗಿ ಮಾಹಿತಿ ಕಲೆಹಾಕಲಾಗಿದೆ. ಇದರಲ್ಲಿ ಆರೋಪಿಗಳು ಚಾಟ್‌ ಮಾಡಿರುವ ಸ್ಥಳ ಮತ್ತು ಸಮಯದ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಡ್ರಗ್ಸ್‌ ಖರೀದಿಯಾದ ಸಮಯದಲ್ಲಿ ಹಾಗೂ ಖರೀದಿಗೂ ಮುಂಚೆ ನಡೆಸಿದ ಮಾತುಕತೆ ಎಲ್ಲಾದಕ್ಕೂ ಲೋಕಷನ್‌ ಸಹಿತ ಸಾಕ್ಷಿ ಮುಂದಡಿಲೂ ಸಿಸಿಬಿ ತೀರ್ಮಾನ ಮಾಡಿದೆ.

Click on your DTH Provider to Add TV9 Kannada