ಕೊಹ್ಲಿ ತನ್ನ ನೆಚ್ಚಿನ ಬ್ಯಾಟ್ ಹಿಡಿಕೆ ಕತ್ತರಿಸಲು ಕಾರಣವೇನು? ವಿಡಿಯೋ ನೋಡಿ

ಕೊಹ್ಲಿ ತನ್ನ ನೆಚ್ಚಿನ ಬ್ಯಾಟ್ ಹಿಡಿಕೆ ಕತ್ತರಿಸಲು ಕಾರಣವೇನು? ವಿಡಿಯೋ ನೋಡಿ

ಐಪಿಎಲ್ ಆರಂಭಕ್ಕಿನ್ನೂ ಏಳೇ ಏಳು ದಿನ ಬಾಕಿಯಿದ್ದು, ಮರಳುಗಾಡಿನ ಐಪಿಎಲ್ ಮಹಾ ಸಂಗ್ರಾಮ ರಂಗೇರುತ್ತಿದೆ. ದಿನದಿಂದ ದಿನಕ್ಕೆ ದುಬೈನಲ್ಲಿ ನಡೆಯಲಿರೋ ಐಪಿಎಲ್, ಅಭಿಮಾನಿಗಳ ಉತ್ಸಾಹ ಮತ್ತು ಕುತೂಹಲ ಹೆಚ್ಚಾಗುವಂತೆ ಮಾಡ್ತಿದೆ.

ಒಂದೆರಡು ಸೆಂ.ಮೀ. ಉದ್ದವೂ ಮುಖ್ಯವಾಗಿಬಿಡುತ್ತದೆ!
ಈ ಬಾರಿಯ ಮರಳುಗಾಡಿನ ಐಪಿಎಲ್ ಮಹಾಸಂಗ್ರಾಮದಲ್ಲಿ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬ್ಯಾಟ್​ನಿಂದ ರನ್ ಮಳೆ ಹರಿಯೋದು ಪಕ್ಕಾ. ನಾವ್ಯಾಕೆ ಕೊಹ್ಲಿ ವಿಚಾರದಲ್ಲಿ ಇಷ್ಟೊಂದು ಕಾನ್ಫಿಡೆಂಟ್ ಆಗಿ ಹೇಳ್ತಿದ್ದೀವಿ ಅಂದ್ರೆ, ಕೊಹ್ಲಿ ತಮ್ಮ ನೆಚ್ಚಿನ ಬ್ಯಾಟ್ ಹಿಡಿಕೆಯನ್ನ ಗರಗಸದಿಂದ ಕತ್ತರಿಸಿಬಿಟ್ಟಿದ್ದಾರೆ.

ಕೊಹ್ಲಿ ಬ್ಯಾಟ್ ಹಿಡಿಕೆಯನ್ನ ಹೀಗೆ ಕತ್ತರಿಸುತ್ತಿರೋದ್ರ ಹಿಂದೆ ಒಂದು ರಹಸ್ಯವಿದೆ. ಆ ರಹಸ್ಯ ಏನು ಅನ್ನೋದನ್ನ ಕೊಹ್ಲಿ ಹೇಳಿದ್ದು ಹೀಗೆ.

ಸಣ್ಣ ವಿಚಾರವಾದ್ರೂ ತುಂಬಾ ಮುಖ್ಯ..
ಇವೆಲ್ಲಾ ಸಣ್ಣ ವಿಚಾರಗಳಾದ್ರೂ ತುಂಬಾ ಮುಖ್ಯವಾದದ್ದು. ನನ್ನ ಬ್ಯಾಟ್​ನ ಸಮತೋಲನಕ್ಕೆ ಒಂದೆರಡು ಸೆಂಟಿಮೀಟರ್​ಗಳು ನಿರ್ಣಾಯಕವಾಗುತ್ತೆ. ಬ್ಯಾಟ್ ವಿಚಾರದಲ್ಲಿ ನಾನು ತುಂಬಾ ಪ್ರೀತಿಯಿಂದ ಕಾಳಜಿ ವಹಿಸುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.

Click on your DTH Provider to Add TV9 Kannada