IPL 2020: ಈಗ RCB ಹೆಚ್ಚು ಸಮತೋಲನ, ಕಪ್​ ಗೆಲ್ಲುವ ವಿಶ್ವಾಸದಲ್ಲಿ ಕಿಂಗ್ ಕೊಹ್ಲಿ

IPL 2020: ಈಗ RCB ಹೆಚ್ಚು ಸಮತೋಲನ, ಕಪ್​ ಗೆಲ್ಲುವ ವಿಶ್ವಾಸದಲ್ಲಿ ಕಿಂಗ್ ಕೊಹ್ಲಿ

2016ರ ಐಪಿಎಲ್ ಸೀಸನ್ ನಂತ್ರ ಆರ್​ಸಿಬಿ ತಂಡ ಈಗ ಸಮತೋಲದಿಂದ ಕೂಡಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. 2016ರ ಆವೃತ್ತಿಯನ್ನ ಮರೆಯೋದಕ್ಕೆ ಸಾಧ್ಯವಿಲ್ಲ. ಹಾಗೆಯೇ ಈ ಆವೃತ್ತಿಯಲ್ಲೂ ತಂಡ ಉತ್ತಮವಾಗಿದೆ ಎಂದು ಕೊಹ್ಲಿ ತಿಳಿಸಿದ್ದಾರೆ.

ರಾಯಲ್ಸ್​ಗೆ ಆರ್​​ಸಿಬಿ ತಿರುಗೇಟು
ರಾಜಸ್ಥಾನ ರಾಯಲ್ಸ್ ಮತ್ತು ಆರ್​ಸಿಬಿ ಲೋಗೋ ಕಾಳಗ ಮುಂದುವರೆದಿದೆ. ಹಳೇ ಲೋಗೋ ಹಾಕಿದ್ದಕ್ಕೆ ಆರ್​ಸಿಬಿಯನ್ನ ವ್ಯಂಗ್ಯ ಮಾಡಿದ್ದ ರಾಯಲ್ಸ್​ಗೆ, ಸಂಜು ಸ್ಯಾಮ್ಸನ್ ಹಳೇ ಲೋಗೋ ಹಾಕಿರೋ ಹೆಲ್ಮೆಟ್ ಪೋಸ್ಟ್ ಮಾಡಿ ಆರ್​ಸಿಬಿ ಕೌಂಟರ್ ಕೊಟ್ಟಿದೆ.

ಸ್ಪಿನ್ನರ್​ಗಳೆ ಪ್ರಮುಖ ಪ್ರಾತ್ರವಹಿಸ್ತಾರೆ
ಯುಎಇನಲ್ಲಿ ನಡೆಯಲಿರೋ ಐಪಿಎಲ್​ನಲ್ಲಿ 150-160ಅತ್ಯುತ್ತಮ ಮೊತ್ತವಾಗಿದೆ. ಇಲ್ಲಿ ಸ್ಪಿನ್ನರ್​ಗಳೇ ಪ್ರಮುಖ ಪಾತ್ರವಹಿಸ್ತಾರೆ ಎಂದು ಕೋಚ್ ಮೈಕ್ ಹಸ್ಸನ್ ಹೇಳಿದ್ದಾರೆ. ಪ್ರತಿ ಪಿಚ್ ಬಗ್ಗೆ ಮಾಹಿತಿಯಿದೆ. ನೋಡಿಕೊಂಡು ಆಡಬೇಕು ಅಂತ ಹಸ್ಸನ್ ಎಂದಿದ್ದಾರೆ…

ಜಂಪಾ ಕಮ್​ಬ್ಯಾಕ್
ಇಂಗ್ಲೆಂಡ್ ವಿರುದ್ಧದ ಮೊದಲೆರೆಡು ಟಿಟ್ವೆಂಟಿಯಲ್ಲಿ ದುಬಾರಿ ಬೌಲರ್ ಆಗಿದ್ದ ಌಡಂ ಜಾಂಪಾ, ಕೊನೇ ಪಂದ್ಯದಲ್ಲಿ ಎರಡು ವಿಕೆಟ್ ಪಡೆದಿದ್ದಾರೆ. ಇದ್ರೊಂದಿಗೆ ತನ್ನನ್ನ ಟ್ರೋಲ್ ಮಾಡ್ತಿದ್ದವರಿಗೆ ತಿರುಗೇಟು ಕೊಟ್ಟಿದ್ದಾರೆ. ಜಂಪಾ ಈ ಬಾರಿ ಆರ್​ಸಿಬಿ ಪರ ಆಡಲಿದ್ದಾರೆ…

ಐಪಿಎಲ್​ನಲ್ಲಿ ಮತ್ತೊಂದು ಕಾಂಟ್ರವರ್ಸಿ!
ಸೆ.6ರಂದು ಬಿಡುಗಡೆ ಮಾಡಿರೋ ಐಪಿಎಲ್ ಸಾಂಗ್​ನಲ್ಲಿ, ಕೃತಿಚೌರ್ಯ ಆರೋಪ ಕೇಳಿಬಂದಿದೆ. ಡೆಲ್ಲಿಯ ಫೇಮಸ್ ಕೃಷ್ಣ ಕೌಲ್ ಅವರ ಪಾಪ್ ಸಾಂಗ್​ನಿಂದ ಟೈಟಲ್ ಸಾಂಗ್ ಕದಿಯಲಾಗಿದೆ ಎಂದು ಕೃಷ್ಣ ಟ್ವೀಟ್ ಮಾಡಿದ್ದಾರೆ.

 ಕ್ರಿಸ್ ಗೇಲ್ ಮಾರ್ಗದರ್ಶಕ
ಕಿಂಗ್ಸ್ ಇಲೆವೆನ್ ಬ್ಯಾಟ್ಸ್​ಮನ್ ಕ್ರಿಸ್ ಗೇಲ್ ಕೇವಲ ಆಟಗಾರ ಮಾತ್ರವಲ್ಲ, ತಂಡದಲ್ಲಿ ಮಾರ್ಗದರ್ಶಕ ಎಂದು ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ. ಗೇಲ್ ಸಾಕಷ್ಟು ಅನುಭವ ಹೊಂದಿದ್ದಾರೆ. ಅಭ್ಯಾಸದ ವೇಳೆ ಮಾರ್ಗದರ್ಶಕರಾಗಿದ್ದಾರೆ ಅಂತ ಕುಂಬ್ಳೆ ತಿಳಿಸಿದ್ದಾರೆ.

ಜಾಧವ್ ಹೊಸ ಹೇರ್​ಸ್ಟೈಲ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಕೇದಾರ್ ಜಾಧವ್, ಹೊಸ ಕೇಶ ವಿನ್ಯಾಸದೊಂದಿಗೆ ಕಾಣಿಸಿಕೊಂಡಿದ್ದಾರೆ. ಜಾಧವ್ ಹೊಸ ಹೇರ್​ಸ್ಟೈಲ್ ಫೋಟೋವನ್ನ ಸಿಎಸ್​ಕೆ ಟ್ವೀಟ್ ಮಾಡಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗ್ತಿದೆ.

ಯುವಕರು ನಾಚುವಂತೆ ತಾಂಬೆ ಕ್ಯಾಚ್
ಯುವ ಕ್ರಿಕೆಟಿಗರು ನಾಚುವಂತೆ ಸಿಪಿಎಲ್ ಪಂದ್ಯದಲ್ಲಿ 48ವರ್ಷದ ಕ್ರಿಕೆಟಿಗ ಪ್ರವೀಣ್ ತಾಂಬೆ ಕ್ಯಾಚ್ ಹಿಡಿದ್ದಾರೆ. ಬೆನ್ ಡಂಕ್ ಬಾರಿಸಿದ ರಿವರ್ಸ್ ಸ್ವೀಪ್ ಶಾಟ್, ಶಾರ್ಟ್ ಥರ್ಡ್​​ಮೆನ್​ನತ್ತ ಹೇಗಿತ್ತು. ಈ ವೇಳೆ ತಾಂಬೆ ಅದ್ಭುತ ಡೈವ್ ಮಾಡಿ ಕ್ಯಾಚ್ ಹಿಡಿದ್ರು.

ಕೆಕೆಆರ್ ಆಟಗಾರರೊಂದಿಗೆ ರೋಹಿತ್!
ಶಾರ್ಜಾದಲ್ಲಿ ಪ್ರಾಕ್ಟೀಸ್ ವೇಳೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಕೆಕೆಆರ್ ಆಟಗಾರರನ್ನ ಭೇಟಿಯಾದ್ರು. ಸಾಮಾಜಿಕ ಅಂತರ ಕಾಪಾಡಿಕೊಂಡು, ಶುಭಮನ್ ಗಿಲ್, ಅಭಿಷೇಕ್ ನಾಯರ್ ಜೊತೆ ಚರ್ಚೆ ಮಾಡಿದ್ರು.

5 ಓವರ್ ಬೌಲಿಂಗ್ ನೀಡಿ!
ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್, ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿಗೆ ಮುಂಬರುವ ಐಪಿಎಲ್​ನಲ್ಲಿ ಪ್ರತಿ ಬೌಲರ್‌ಗೆ 5 ಓವರ್‌ಗಳನ್ನು ನೀಡಿ ಎಂದು ಸಲಹೆ ನೀಡಿದ್ದಾರೆ. ಪ್ರಸ್ತುತ ಬೌಲರ್​ಗೆ ನಾಲ್ಕು ಓವರ್​ಗಳನ್ನ ನೀಡಲಾಗುತ್ತೆ. ಈ ನಿಯಮವನ್ನು ಗರಿಷ್ಠ 5 ಓವರ್‌ಗಳಾಗಿ ಬದಲಾಯಿಸಬೇಕು ಎಂದಿದ್ದಾರೆ…

ಬೇರಿಸ್ಟೋ ಅಬ್ಬರ.. ಸನ್​ರೈಸರ್ಸ್ ಫುಲ್!
ಆಸಿಸ್ ವಿರುದ್ಧದ ಮೂರನೇ ಟಿ-ಟ್ವೆಂಟಿಯಲ್ಲಿ ಜಾನಿ ಬೇರಿಸ್ಟೋ ಅರ್ಧಶತಕ ಬಾರಿಸಿದ್ದು, ಸನ್​ರೈಸರ್ಸ್ ಫ್ರಾಂಚೈಸಿಗೆ ಖುಷಿ ನೀಡಿದೆ. ಐಪಿಎಲ್​ಗೂ ಮುನ್ನ ನಡೆದಿರೋ ಪಂದ್ಯದಲ್ಲಿ ಬೇರಿಸ್ಟೋ, 44ಎಸೆತದಲ್ಲಿ 53ರನ್ ಗಳಿಸಿದ್ರು.

ರಾತ್ರಿಯೂ ರೋಹಿತ್ ಅಭ್ಯಾಸ
ಮತ್ತೊಂದು ಟ್ರೋಫಿ ಮೇಲೆ ಕಣ್ಣಿಟ್ಟಿರೋ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ರಾತ್ರಿಯೂ ಅಭ್ಯಾಸ ನಡೆಸುತ್ತಿದ್ದಾರೆ. ಫ್ಲಡ್ ಲೈಟ್ ಕೆಳಗೆ ರೋಹಿತ್ ಎರಡು ಗಂಟೆಗಳ ಪ್ರಾಕ್ಟೀಸ್ ಸೆಷನ್​ನಲ್ಲಿ ಭಾಗಿಯಾಗಿದ್ರು.

ದುಬೈಗೆ ಹೊರಟ ಗಂಗೂಲಿ
ಸೆ.19ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿರೋ ಹಿನ್ನಲೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ದುಬೈ ಫ್ಲೈಟ್ ಹತ್ತಿದ್ದಾರೆ. ಮೂರು ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯೋದ್ರಿಂದ, ಅಲ್ಲಿನ ವ್ಯವಸ್ಥೆಯನ್ನ ಗಂಗೂಲಿ ಪರಿಶೀಲಿಸಲಿದ್ದಾರೆ.

ಅನಿಲ್ ಕುಂಬ್ಳೆ ಬೇಸರ
ಹೆಸರಿಗೆ ಮಾತ್ರ ಐಪಿಎಲ್ ಆಗಿದ್ದು, ಬೇರ್ಯಾವ ತಂಡದಲ್ಲೂ ಭಾರತೀಯ ಕೋಚ್​ಗಳೇ ಇಲ್ಲ ಎಂದು ಅನಿಲ್ ಕುಂಬ್ಳೆ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಾದ್ರೂ ಭಾರತೀಯ ಕೋಚ್​ಗಳ ಸಂಖ್ಯೆ ಹೆಚ್ಚಾಗಲಿ ಎಂದು ಕುಂಬ್ಳೆ ಹೇಳಿದ್ದಾರೆ.

ನಿವೃತ್ತಿ ಹಿಂಪಡೆಯಲು ಯುವಿ ನಿರ್ಧಾರ
ಭಾರತ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಈಗ ನಿವೃತ್ತಿಯಿಂದ ಹೊರಬರಲು ನಿರ್ಧರಿಸಿದ್ದು, ಪಂಜಾಬ್‌ ತಂಡದ ಪರ ದೇಶಿ ಕ್ರಿಕೆಟ್‌ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಜೂನ್​ನಲ್ಲಿ ಯುವರಾಜ್‌ ಸಿಂಗ್‌ ವಿದಾಯ ಘೋಷಿಸಿದ್ರು…

ಯುವಿಗೆ ಅಡ್ಡಿಯಾಗುತ್ತೆ ಬಿಸಿಸಿಐ ನಿಯಮ!
ಯುವರಾಜ್ ಸಿಂಗ್ ನಿವೃತ್ತಿ ವಾಪಾಸ್ ಪಡೆಯಲು ಬಿಸಿಸಿಐ ನಿಯಮ ಅಡ್ಡಿಯಾಗೋ ಸಾಧ್ಯತೆಯಿದೆ. ಯಾಕಂದ್ರೆ 2019ರಲ್ಲಿ ನಿವೃತ್ತಿಯಾದ ಯುವರಾಜ್ ಸಿಂಗ್, ಮಾಸಿಕ ಪಿಂಚಣಿಯನ್ನ ಪಡೆಯುತ್ತಿದ್ದಾರೆ. ಇದು ಯುವಿ ನಿವೃತ್ತಿ ಹಿಂಪಡೆಯೋದಕ್ಕೆ ಅಡ್ಡಿಯಾಗುತ್ತೆ ಎನ್ನಲಾಗ್ತಿದೆ…

ಫುಟ್ ವಾಲಿಬಾಲ್ ಆಡಿದ ಹೈದ್ರಾಬಾದ್
ಸನ್​ರೈಸರ್ಸ್ ಹೈದ್ರಾಬಾದ್ ಆಟಗಾರರು ನಿನ್ನೆ ಫುಟ್ ವಾಲಿಬಾಲ್ ಆಡಿ ಎಂಜಾಯ್ ಮಾಡಿದ್ರು. ಮನೀಷ್ ಪಾಂಡೆ ಟೀಮ್ ಮತ್ತು ವಿಜಯ್ ಶಂಕರ್ ಟೀಮ್ ನಡುವೆ ಪಂದ್ಯ ನಡೀತು. ಕೋಚ್ ಲಕ್ಷ್ಮಣ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ರು.

Click on your DTH Provider to Add TV9 Kannada