AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2020: RCB ಗೆ ಆರಂಭಿಕ ಆಘಾತ, ಇವರಿಲ್ಲದೆ ಪಂದ್ಯ ಗೆಲ್ಲಬಹುದಾ?

IPLನ ಮೊದಲೆರಡು ಪಂದ್ಯಗಳಿಂದ ಹೊರಗುಳಿಯಲಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ತಂಡದ ಆಟಗಾರ ಸಂಗತಿ ಹೀಗಿದೆ. ಫಿಂಚ್.. ಜಂಪಾ.. ಅಲಿ ಇರಲ್ಲ.. ಬೆಂಗಳೂರಿಗೆ ಆರಂಭದಲ್ಲೇ ವಿಘ್ನ! ಸದ್ಯ ಆರ್​ಸಿಬಿ ತಂಡದಲ್ಲಿರೋ ಆಸ್ಟ್ರೇಲಿಯಾದ ಌರೋನ್ ಫಿಂಚ್, ಸ್ಪಿನ್ನರ್ ಆಡಮ್ ಜಂಪಾ ಮತ್ತು ಇಂಗ್ಲೆಂಡ್​ನ ಮೊಯಿನ್ ಅಲಿ ಮೊದಲೆರಡು ಪಂದ್ಯಕ್ಕೆ ಅಲಭ್ಯವಾಗೋ ಸಾಧ್ಯತೆಯಿದೆ. ಈ ಸ್ಟಾರ್ ಆಟಗಾರರ ಅಲಭ್ಯತೆ RCBಗೆ ಆರಂಭದಲ್ಲಿ ಹಿನ್ನಡೆಯಾಗುವ ಹಾಗೇ ಮಾಡಿದ್ರೂ ಆಶ್ಚರ್ಯವೇನಿಲ್ಲ. ಹಾಗೇ ಯಾವೆಲ್ಲಾ ತಂಡಗಳಲ್ಲಿ ಸದ್ಯ, ಆಂಗ್ಲೋ- ಆಸಿಸ್ ಏಕದಿನ ತಂಡದಲ್ಲಿರೋ ಆಟಗಾರರಿದ್ದಾರೆ ಎಂಬ […]

IPL 2020: RCB ಗೆ ಆರಂಭಿಕ ಆಘಾತ, ಇವರಿಲ್ಲದೆ ಪಂದ್ಯ ಗೆಲ್ಲಬಹುದಾ?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Sep 17, 2020 | 1:56 PM

Share

IPLನ ಮೊದಲೆರಡು ಪಂದ್ಯಗಳಿಂದ ಹೊರಗುಳಿಯಲಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ತಂಡದ ಆಟಗಾರ ಸಂಗತಿ ಹೀಗಿದೆ.

ಫಿಂಚ್.. ಜಂಪಾ.. ಅಲಿ ಇರಲ್ಲ.. ಬೆಂಗಳೂರಿಗೆ ಆರಂಭದಲ್ಲೇ ವಿಘ್ನ! ಸದ್ಯ ಆರ್​ಸಿಬಿ ತಂಡದಲ್ಲಿರೋ ಆಸ್ಟ್ರೇಲಿಯಾದ ಌರೋನ್ ಫಿಂಚ್, ಸ್ಪಿನ್ನರ್ ಆಡಮ್ ಜಂಪಾ ಮತ್ತು ಇಂಗ್ಲೆಂಡ್​ನ ಮೊಯಿನ್ ಅಲಿ ಮೊದಲೆರಡು ಪಂದ್ಯಕ್ಕೆ ಅಲಭ್ಯವಾಗೋ ಸಾಧ್ಯತೆಯಿದೆ. ಈ ಸ್ಟಾರ್ ಆಟಗಾರರ ಅಲಭ್ಯತೆ RCBಗೆ ಆರಂಭದಲ್ಲಿ ಹಿನ್ನಡೆಯಾಗುವ ಹಾಗೇ ಮಾಡಿದ್ರೂ ಆಶ್ಚರ್ಯವೇನಿಲ್ಲ. ಹಾಗೇ ಯಾವೆಲ್ಲಾ ತಂಡಗಳಲ್ಲಿ ಸದ್ಯ, ಆಂಗ್ಲೋ- ಆಸಿಸ್ ಏಕದಿನ ತಂಡದಲ್ಲಿರೋ ಆಟಗಾರರಿದ್ದಾರೆ ಎಂಬ ವರದಿ ಇಲ್ಲಿದೆ.

2 ಪಂದ್ಯಕ್ಕೆ ಆಸಿಸ್, ಆಂಗ್ಲೋ ಕ್ರಿಕೆಟಿಗರು ಅಲಭ್ಯ! ಚೆನ್ನೈ- ಸ್ಯಾಮ್ ಕರ್ರನ್, ಜೋಷ್ ಹೆಜಲ್​ವುಡ್ ಡೆಲ್ಲಿ- ಅಲೆಕ್ಸ್ ಕ್ಯಾರಿ, ಮಾರ್ಕಸ್ ಸ್ಟೋನಿಸ್ ಕೆಕೆಆರ್- ಪ್ಯಾಟ್ ಕಮಿನ್ಸ್, ಇಯಾನ್ ಮಾರ್ಗನ್, ಟಾಮ್ ಬೆಂಟೊನ್ ಪಂಜಾಬ್- ಗ್ಲೇನ್ ಮ್ಯಾಕ್ಸ್​ವೆಲ್ ಹೈದ್ರಾಬಾದ್- ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಜಾನಿ ಬೆರಿಸ್ಟೊ ರಾಜಸ್ಥಾನ್- ಜೋಫ್ರಾ ಆರ್ಚರ್, ಜೊಸ್ ಬಟ್ಲರ್, ಟಾಮ್ ಕರ್ರನ್, ಬೆನ್ ಸ್ಟೋಕ್ಸ್

ಸದ್ಯ ಇಂಗ್ಲೆಂಡ್, ಆಸ್ಟ್ರೇಲಿಯಾ ಕ್ರಿಕೆಟಿಗರು ICC ನಿಯಮದ ಬಯೊ ಬಬಲ್ ಅಡಿಯಲ್ಲಿದ್ದಾರೆ. ಹೀಗಾಗಿ ದುಬೈನಲ್ಲಿ ಯಾವುದೇ ಕ್ವಾರಂಟೈನ್ ಇರೋದಿಲ್ಲ ಅಂತಾ ಬಿಸಿಸಿಐ ತಿಳಿಸಿತ್ತು. ಆದ್ರೀಗ ಕೊರೊನಾ ದೃಷ್ಟಿಯಿಂದ ಯಾರೂ ರಿಸ್ಕ್ ತಗೆದುಕೊಳ್ಳೋದಕ್ಕೆ ರೆಡಿಯಿಲ್ಲ. ಹೀಗಾಗಿ ಎರಡು ತಂಡಗಳ ಆಟಗಾರರು, ಐಪಿಎಲ್ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗೋ ಸಾಧ್ಯತೆಯಿದೆ.

Published On - 12:26 pm, Fri, 11 September 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು