
ರಾಯಚೂರು: ಪಾಕಿಸ್ತಾನ ಪರ ಸಂದೇಶ ಹರಿಯಬಿಟ್ಟ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮಾನವಿ ಪಟ್ಟಣದ ನಿವಾಸಿ ಕೆ.ಎಂ.ಭಾಷಾ ಬಂಧಿತ ಆರೋಪಿ. ಭಾಷಾ, ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನದ ಪರವಾದ ಸಂದೇಶ ಇರುವ ಚಿತ್ರವನ್ನು ಹಂಚಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿದೆ. ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.